ಭಾರತ ಕ್ರಿಕೆಟ್ ತಂಡದ ಬಹುತೇಕ ಎಲ್ಲ ಆಟಗಾರರು ಆಂಗ್ಲರ ನಾಡಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಜಸ್ಪ್ರೀತ್ ಬುಮ್ರಾ (Jasprit Bumrah) ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ ಐದನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಇತ್ತ ದಿನೇಶ್ ಕಾರ್ತಿಕ್ (Dinesh Karthik) ನೇತೃತ್ವದ ಭಾರತ ಯುವ ತಂಡ ಟಿ20 ಸರಣಿಗೋಸ್ಕರ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಜುಲೈ 1 ರಂದು ಡರ್ಬಿಶೈರ್ ವಿರುದ್ಧ ನಡೆದ ಪಂದ್ಯದಲ್ಲಿ ಕಾರ್ತಿಕ್ ಪಡೆ 7 ವಿಕೆಟ್ಗಳ ಭರ್ಜರಿ ಗೆಲುವು ಕಂಡಿತ್ತು. ಇದೀಗ ಭಾನುವಾರ ರಾತ್ರಿ ನಡೆದ ನಾರ್ತ್‌ಹ್ಯಾಂಪ್ಟನ್‌ಶೈರ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಇಂಡಿಯನ್ಸ್ ತಂಡ 10 ರನ್ಗಳ ರೋಚಕ ಜಯ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್ಸಿಬಿ ಆಟಗಾರ ಹರ್ಷಲ್ ಪಟೇಲ್ (Harshal Patel).
ಹೌದು, ನಾರ್ತ್‌ಹ್ಯಾಂಪ್ಟನ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅರ್ಧಶತಕ ಸಿಡಿಸಿ ಮತ್ತು ಬೌಲಿಂಗ್ನಲ್ಲೂ ಮಾರಕ ದಾಳಿ ಸಂಘಟಿಸಿ ಹರ್ಷಲ್ ಪಟೇಲ್ ಇಂಡಿಯನ್ಸ್ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಲೋ ಸ್ಕೋರಿಂಗ್ ಗೇಮ್ನಲ್ಲಿ ಬೊಂಬಾಟ್ ಬೌಲಿಂಗ್ ಪ್ರದರ್ಶನ ತೋರಿದ ಭಾರತ ಆಡಿದ ಎರಡೂ ಅಭ್ಯಾಸ ಪಂದ್ಯದಲ್ಲಿ ಗೆದ್ದು ಬೀಗಿದೆ.
Cheteshwar Pujara: ಪೂಜಾರ ಅರ್ಧಶತಕ, ಪಂತ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಟೀಮ್ ಇಂಡಿಯಾ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಿನೇಶ್ ಕಾರ್ತಿಕ್ ಸಾರ್ಥ್ಯದ ಭಾರತ ತಂಡ ಮೊದಲ ಓವರ್ನಲ್ಲೇ ಸಂಜು ಸ್ಯಾಮ್ಸನ್ ಸೊನ್ನೆಗೆ ನಿರ್ಗಮಿಸಿದರು. ಭರ್ಜರಿ ಫಾರ್ಮ್ನಲ್ಲಿದ್ದ ಸಂಜು ಔಟಾದ ಬಳಿಕ ಕ್ರೀಸ್ಗೆ ಬಂದ ರಾಹುಲ್ ತ್ರಿಪಾಠಿ 7 ರನ್ಗೆ ಸುಸ್ತಾದರೆ, ಇಶಾನ್ ಕಿಶನ್ (16), ಮತ್ತು ಸೂರ್ಯಕುಮಾರ್ ಯಾದವ್ (0) ವಿಕೆಟ್ ಕೂಡ ಬೇಗನೆ ಕಳೆದುಕೊಂಡಿತು. ಇಂಡಿಯನ್ಸ್ ತಂಡ 51 ರನ್ ಗಳಿಸುವ ಹೊತ್ತಿಗೆ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭ ಕ್ರೀಸ್ಗೆ ಇಳಿದ ನಾಯಕ ದಿನೇಶ್ ಕಾರ್ತಿಕ್ ತಂಡಕ್ಕೆ ಆಸರೆಯಾಗಿ ನಿಂತರು. 26 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡವನ್ನು ಕೊಂಚ ಮೇಲೆತ್ತಿದರು. ಬಳಿಕ ಬಂದ ವೆಂಕಟೇಶ್ ಅಯ್ಯರ್ 20 ರನ್ ಗಳಿಸಿ ನೆರವಾದರು. ಇದರ ನಡುವೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಹರ್ಷಲ್ ಪಟೇಲ್ ಬ್ಯಾಟಿಂಗ್. ಮನಬಂದಂತೆ ಬ್ಯಾಟ್ ಬೀಸಿದ ಹರ್ಷಲ್ ಕೇವಲ 36 ಎಸೆತಗಳಲ್ಲಿ 5 ಫೋರ್ ಮತ್ತು 3 ಸಿಕ್ಸರ್ಗಳೊಂದಿಗೆ 54 ರನ್ ಸಿಡಿಸಿದರು. ಇದರಿಂದ ತಂಡದ ಮೊತ್ತ 20 ಓವರ್‌ಗಳಲ್ಲಿ 149/8 ಕ್ಕೆ ಬಂದು ನಿಂತಿತು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ನಾರ್ತ್‌ಹ್ಯಾಂಪ್ಟನ್‌ಶೈರ್ ತಂಡ ಭಾರತದ ಸಂಘಟಿತ ದಾಳಿಗೆ ನಲುಗಿ ಹೋಯಿತು. ಎಮಿಲೋ ಗೇ (22) ಮತ್ತು ಸೈಫ್ ಝೈಬ್ (33) ಭರವಸೆ ಮೂಡಿಸಿದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಪರಿಣಾಮ ನಾರ್ತ್‌ಹ್ಯಾಂಪ್ಟನ್‌ಶೈರ್ ತಂಡ 19.3 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
FIH World Cup: ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಭಾರತ ಮಹಿಳಾ ಹಾಕಿ ತಂಡ
Published On - 9:01 am, Mon, 4 July 22