
ಟಿ20 ಕ್ರಿಕೆಟ್ನಲ್ಲಿ ದಾಖಲೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಆದರೆ, ಪಂದ್ಯವೊಂದರ ಆರಂಭದಲ್ಲೇ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ, ವಿಶ್ವ ದಾಖಲೆಯ ಪುಟ ಸೇರುವುದು ಸಾಮಾನ್ಯದ ಮಾತಲ್ಲ! ಕ್ರಿಕೆಟ್ ಇತಿಹಾಸದಲ್ಲಿ ನಾವು ನೂರಾರು ಹ್ಯಾಟ್ರಿಕ್ ಸಾಧನೆಗಳನ್ನು ನೋಡಿದ್ದೇವೆ. ಆದರೆ, ಇನ್ನಿಂಗ್ಸ್‌ನ ತೀರಾ ಮೊದಲ ಮೂರು ಎಸೆತಗಳಲ್ಲೇ ಬ್ಯಾಕ್-ಟು-ಬ್ಯಾಕ್ ವಿಕೆಟ್ ಉರುಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಕೀರ್ತಿ ವಿಡಾ ಕೊವೈ ಕಿಂಗ್ಸ್ ತಂಡದ ಆಲ್‌ರೌಂಡರ್ ಕೆ. ದೀಪನ್ ಲಿಂಗೇಶ್ ಅವರಿಗೆ ಸಲ್ಲುತ್ತದೆ.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿಎನ್‌ಪಿಎಲ್ 10ನೇ ಆವೃತ್ತಿಯ ‘ಕ್ವಾಲಿಫೈಯರ್ 2’ ಹೈ-ವೋಲ್ಟೇಜ್ ಪಂದ್ಯದಲ್ಲಿ ಈ ಮೈಲಿಗಲ್ಲು ಸ್ಥಾಪಿತವಾಗಿದೆ. ಮೊದಲು ಬ್ಯಾಟ್ ಮಾಡಿದ್ದ ವಿಡಾ ಕೊವೈ ಕಿಂಗ್ಸ್ ತಂಡ ಎಸ್ ಲೋಕೇಶ್ವರ್ (66 ರನ್) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 183 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಈ ಗುರಿ ಬೆನ್ನಟ್ಟಲು ಸಜ್ಜಾಗಿದ್ದ ‘ತಿರುಚಿ ಗ್ರಾಂಡ್ ಚೋಳಾಸ್’ ತಂಡಕ್ಕೆ ದೀಪನ್ ಲಿಂಗೇಶ್ ಆರಂಭದಲ್ಲೇ ಚೇತರಿಸಿಕೊಳ್ಳಲಾಗದ ಆಘಾತ ನೀಡಿದರು.
ತಿರುಚಿ ಗ್ರಾಂಡ್ ಚೋಳಾಸ್ ತಂಡದ ಇನ್ನಿಂಗ್ಸ್ ಆರಂಭಿಸಲು ನಾಯಕ ಜಯರಮನ್ ಸುರೇಶ್ ಕುಮಾರ್ ಅವರೊಂದಿಗೆ ರಾಜ್ಕುಮಾರ್ ಆಗಮಿಸಿದ್ದರು. ಆದರೆ ಮೊದಲ ಎಸೆತದಲ್ಲೇ ರಾಜ್ಕುಮಾರ್ಗೆ (0) ಲಿಂಗೇಶ್ ಪೆವಿಲಿಯನ್ ಹಾದಿ ತೋರಿಸಿದರು. ಆ ಬಳಿಕ ಬಂದ ಶ್ಯಾಮ್ ಸುಂದರ್ (0) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ಜಗದೀಸನ್ ಕೌಶಿಕ್ (0) ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು.
ಟಿ20 ಲೀಗ್ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್ವೊಂದರ ಮೊದಲ ಮೂರು ಎಸೆತಗಳಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ವಿಶ್ವ ದಾಖಲೆಯನ್ನು ದೀಪನ್ ಲಿಂಗೇಶ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಇಂತಹದೊಂದು ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಇನಿಂಗ್ಸ್‌ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಪಡೆದ ವಿಶ್ವದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
𝗛𝗔𝗧-𝗧𝗥𝗜𝗖𝗞 𝗛𝗘𝗥𝗢! Deeban Lingesh becomes the first bowler to take a hat-trick in the Shriram Capital TNPL 2026! 🎩
📺 Watch LIVE on Sony Sports Ten 4 Tamil & the TNPL YouTube Channel.
🎟️ Book your tickets now on the District by Zomato app.#TNPL10 #TNPL2026… pic.twitter.com/Ai60QB31YB
— TNPL (@TNPremierLeague) August 26, 2026
ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಇನಿಂಗ್ಸ್ವೊಂದರ ಮೊದಲ ಮೂರು ಎಸೆತದಲ್ಲಿ ವಿಕೆಟ್ ಉರುಳಿಸುವ ಮೂಲಕ ದೀಪನ್ ಲಿಂಗೇಶ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.