RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ

ಈ ಬಾರಿ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಐದು ಹೋಮ್ ಪಂದ್ಯಗಳನ್ನಾಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್‌ಗಳನ್ನು ಆರ್‌ಸಿಬಿಯ ಅಧಿಕೃತ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ಟಿಕೆಟ್ ಬೆಲೆ 2,300 ರೂ.ನಿಂದ 42,000 ರೂ.ವರೆಗೆ ಲಭ್ಯವಿದೆ. ಹೆಚ್ಚಿನ ಬೇಡಿಕೆಯಿಂದಾಗಿ, ಟಿಕೆಟ್‌ಗಳನ್ನು ವೇಗವಾಗಿ ಬುಕ್ ಮಾಡುವುದು ಮುಖ್ಯ.

RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ
Rcb Tickets

Updated on: Mar 24, 2026 | 1:09 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೋಂಗ್ರೌಂಡ್​ ಅಲ್ಲಿ ಐದು ಪಂದ್ಯಗಳನ್ನು ಆಡುತ್ತಿದೆ ಅನ್ನೋದು ವಿಶೇಷ. ಉಳಿದು ಎರಡು ಹೋಂ ಪಂದ್ಯಗಳನ್ನು ಬೇರೆಡೆ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಲಿದೆ. ಆರ್​​ಸಿಬಿ ಹಾಗೂ ಹೈದರಾಬಾದ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ ಅನ್ನೋದು ವಿಶೇಷ. ಈ ಪಂದ್ಯವನ್ನು ನೊಡಲೇಬೇಕು ಎಂದು ಕಾದು ಕುಳಿತವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕ. ಟಿಕೆಟ್ ಬುಕ್ ಮಾಡಬೇಕಾದರೆ ಈ ಕ್ರಮ ಅನುಸರಿಸಿದರೆ ನಿಮಗೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಆರ್​​ಸಿಬಿ ಹೋಂಗ್ರೌಂಡ್​​​ನಲ್ಲಿ ನಡೆಯುವ ಐದು ಪಂದ್ಯಗಳ ಮ್ಯಾಚ್ ಟಿಕೆಟ್ ಆರ್​​ಸಿಬಿಯ ಅಧಿಕೃತ ಆ್ಯಪ್ ಹಾಗೂ ಅಧಿಕೃತ ವೆಬ್​​ಸೈಟ್​​ ಅಲ್ಲಿ ಲಭ್ಯವಿರುತ್ತದೆ. ಎಲ್ಲಾ ಸ್ಟ್ಯಾಂಡ್​​ಗಳ ಟಿಕೆಟ್​ಗಳು ಮಾರಾಟಕ್ಕೆ ಇರಲಿವೆ. 2,300 ರೂಪಾಯಿ ಇಂದ ಆರಂಭ ಆಗಿ, 42 ಸಾವಿರ ರೂಪಾಯಿವರೆಗೂ ಟಿಕೆಟ್​​ಗಳು ಲಭ್ಯ. ವಿವಿಧ ಸ್ಟ್ಯಾಂಡ್​​ಗಳ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿ ಮಾಡಲಾಗುತ್ತದೆ.

ಆರ್​​ಸಿಬಿ ಮ್ಯಾಚ್ ಟಿಕೆಟ್ ಬುಕ್ ಮಾಡಲು ಆ್ಯಪ್ ಇನ್​​ಸ್ಟಾಲ್ ಮಾಡಿಕೊಳ್ಳಬೇಕು. ವೆಬ್​​ಸೈಟ್​​ ಅಲ್ಲಿ ಲಾಗಿನ್ ಆಗಿ ಕೂಡ ಟಿಕೆಟ್ ಖರೀದಿ ಮಾಡಬಹುದು. ಮೊದಲು ಆ್ಯಪ್​​ಗೆ ಲಾಗಿನ್ ಆಗಬೇಕು. ಅಂದಾಗ ಮಾತ್ರ ಟಿಕೆಟ್ ಖರೀದಿ ಮಾಡಲು ಸಾಧ್ಯ. ಹೀಗಾಗಿ, ಲಾಗಿನ್ ಆಗಿ ಎಲ್ಲಾ ಮಾಹಿತಿಯನ್ನು ಮೊದಲೇ ತುಂಬಿಡಬೇಕು. ಆಗ ಟಿಕೆಟ್ ಬುಕ್ ಮಾಡಲು ಸುಲಭ ಆಗಲಿದೆ.

ಇದನ್ನೂ ಓದಿ: ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?

ಇನ್ನು, ನೀವು ಟಿಕೆಟ್ ಬುಕ್ ಮಾಡುವಾಗ ತುಂಬಾನೇ ವೇಗದಲ್ಲಿ ಟಿಕೆಟ್ ಬುಕ್ ಮಾಡಬೇಕು. ಅಂದಾಗ ಮಾತ್ರ ನಿಮಗೆ ಟಿಕೆಟ್ ಸಿಗುತ್ತದೆ. ಎಲ್ಲರೂ ಟಿಕೆಟ್​​ಗಾಗಿ ಕಾದು ಕುಳಿತಿರುವುದರಿಂದ ಸ್ಪರ್ಧೆ ಜೋರಿರುತ್ತದೆ. ಹೀಗಾಗಿ, ಟಿಕೆಟ್ ಬುಕ್ ಮಾಡುವಾಗ ಈ ಕ್ರಮ ಅನುಸರಿದರೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:38 pm, Tue, 24 March 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us