ಪಾಕಿಸ್ತಾನದ ನೀಚ ಬುದ್ದಿ ಮತ್ತೆ ಬಟಾಬಯಲು; ಭಾರತವನ್ನು ಹೊರತುಪಡಿಸಿ ಉಳಿದ ದೇಶಗಳ ಧ್ವಜ ಹಾರಾಟ
Champions Trophy Flag Row: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ್ದರೂ, ಕರಾಚಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತದ ಧ್ವಜವನ್ನು ಹಾರಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಇತರ ಎಲ್ಲಾ ಭಾಗವಹಿಸುವ ರಾಷ್ಟ್ರಗಳ ಧ್ವಜಗಳನ್ನು ಹಾರಿಸಲಾಗಿದ್ದರೂ, ಭಾರತದ ತ್ರಿವರ್ಣ ಧ್ವಜವನ್ನು ಉದ್ದೇಶಪೂರ್ವಕವಾಗಿ ಹಾರಿಸದಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭವಾಗುವ ಮುನ್ನವೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅದೇಗೋ ಈ ಐಸಿಸಿ ಪಂದ್ಯಾವಳಿಯ ಆತಿಥ್ಯವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಪಾಕಿಸ್ತಾನ ತನ್ನ ನೀಚ ಬುದ್ದಿಯಿಂದ ಐಸಿಸಿಯಿಂದ ಛೀಮಾರಿಗೆ ಗುರಿಯಾಗುವ ಸಾಧ್ಯತೆಗಳಿವೆ. ಏಕೆಂದರೆ ಭಾರತದ ಮೇಲೆ ಸದಾ ಹಲ್ಲು ಮಸೆಯುವ ಪಾಕಿಸ್ತಾನ ಇದೀಗ ಐಸಿಸಿ ಈವೆಂಟ್ನಲ್ಲೂ ಭಾರತಕ್ಕೆ ಅವಮಾನ ಮಾಡುವ ಕೆಲಸಕ್ಕೆ ಕೈಹಾಕಿದೆ. ವಾಸ್ತವವಾಗಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ 7 ದೇಶಗಳ ಧ್ವಜಗಳನ್ನು ಕರಾಚಿಯ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಹಾರಿಸಲಾಗಿದೆ. ಆದರೆ ಭಾರತದ ತ್ರಿವರ್ಣ ಧ್ವಜವನ್ನು ಮಾತ್ರ ಅಲ್ಲಿ ಹಾರಿಸಲಾಗಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧ್ವಜಗಳ ಹಾರಾಟದ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಭಾರತದ ಬಾವುಟ ಇಲ್ಲದಿರುವುದು ಭಾರತೀಯರನ್ನು ಕೆರಳುವಂತೆ ಮಾಡಿದೆ.
ಲಾಹೋರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿಲ್ಲ
ನಿಯಮದ ಪ್ರಕಾರ, ಐಸಿಸಿ ಟೂರ್ನಮೆಂಟ್‌ನ ಪಂದ್ಯಗಳಿಗೆ ಆತಿಥ್ಯವಹಿಸುವ ಎಲ್ಲಾ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ ಪಿಸಿಬಿ ಈ ನಿಯಮವನ್ನು ಪಾಲಿಸಲಿಲ್ಲ. ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗದ ಕಾರಣ, ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳದಿರುವ ವಿಚಾರವಾಗಿಯೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪ್ರತಿಷ್ಠೆಯ ಕದನ ಏರ್ಪಟ್ಟಿತ್ತು. ಇದರಲ್ಲಿ ಕೊನೆಗೂ ಪಾಕಿಸ್ತಾನವೇ ತಲೆಭಾಗಬೇಕಾಯಿತು. ಆ ಪ್ರಕಾರ ಇದೀಗ ಟೀಂ ಇಂಡಿಯಾ ತನ್ನೇಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಭಾರತ ಮೇಲುಗೈ ಸಾಧಿಸಿದ್ದರಿಂದ ಪಾಕಿಸ್ತಾನ ಸಿಟ್ಟಾಗಿದ್ದು, ಬಹುಶಃ ಅದಕ್ಕಾಗಿಯೇ ತ್ರಿವರ್ಣ ಧ್ವಜವನ್ನು ಹಾರಿಸದಿರಲು ನಿರ್ಧರಿಸಿದೆ.
No Indian flag in Karachi: As only the Indian team faced security issues in Pakistan and refused to play Champions Trophy matches in Pakistan, the PCB removed the Indian flag from the Karachi stadium while keeping the flags of the other guest playing nations.
– Absolute Cinema,… pic.twitter.com/2zmcATn7iQ
— Nawaz 🇵🇰 (@Rnawaz31888) February 16, 2025
ಪಾಕಿಸ್ತಾನದಿಂದ ಧ್ವಜ ರಾಜಕೀಯ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತುತ ಧ್ವಜ ರಾಜಕೀಯ ಮಾಡುತ್ತಿರಬಹುದು. ಆದರೆ ಭವಿಷ್ಯದಲ್ಲಿ ಸೋಲನ್ನು ಎದುರಿಸಬೇಕಾಗಬಹುದು ಎಂಬುದನ್ನು ಅದು ಬಹುಶಃ ಮರೆತಿರಬಹುದು. ಏಕೆಂದರೆ, ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿದರೆ, ಈ ಪಂದ್ಯಾವಳಿಯ ಫೈನಲ್ ಮತ್ತೆ ಕರಾಚಿಯ ಬದಲು ದುಬೈನಲ್ಲಿ ನಡೆಯಲಿದೆ. ಇದಾದ ನಂತರ, ಪಿಸಿಬಿ ಎಂದಿಗೂ ಧ್ವಜದ ವಿಷಯದಲ್ಲಿ ಅಂತಹ ರಾಜಕೀಯ ಮಾಡಲು ಸಾಧ್ಯವಾಗುವುದಿಲ್ಲ. ಅಂದಹಾಗೆ, ಭಾರತ ತಂಡವು ಪಂದ್ಯಾವಳಿಯನ್ನು ಗೆಲ್ಲುವ ದೊಡ್ಡ ಸ್ಪರ್ಧಿಯಾಗಿದ್ದು, ಚಾಂಪಿಯನ್ಸ್ ಟ್ರೋಫಿಯ ಕೊನೆಯ ಎರಡು ಫೈನಲ್‌ಗಳನ್ನು ಆಡಿದೆ. ಅದರಲ್ಲಿ ಒಂದು ಪಂದ್ಯದಲ್ಲಿ ಗೆದ್ದು, ಇನ್ನೊಂದರಲ್ಲಿ ಸೋತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Mon, 17 February 25
