ICC rankings: ನಂ.1 ಪಟ್ಟದಲ್ಲಿ ಸೂರ್ಯ ಭದ್ರ; ಟಾಪ್ 10 ರಿಂದ ಕಿಂಗ್ ಕೊಹ್ಲಿ ಔಟ್..!

ICC T20 Rankings: ಅಗ್ರ 10 ಬ್ಯಾಟ್ಸ್‌ಮನ್‌ಗಳಲ್ಲಿ ಸೂರ್ಯಕುಮಾರ್ ಹೊರತುಪಡಿಸಿ ಭಾರತದ ಯಾವುದೇ ಬ್ಯಾಟ್ಸ್‌ಮನ್ ಇಲ್ಲ. ಮತ್ತೊಂದೆಡೆ ಪಾಕಿಸ್ತಾನದ ಬಾಬರ್ ಅಜಮ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ICC rankings: ನಂ.1 ಪಟ್ಟದಲ್ಲಿ ಸೂರ್ಯ ಭದ್ರ; ಟಾಪ್ 10 ರಿಂದ ಕಿಂಗ್ ಕೊಹ್ಲಿ ಔಟ್..!
ಸೂರ್ಯ- ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Nov 09, 2022 | 12:51 PM

ಐಸಿಸಿ ಟಿ20 ಕ್ರಿಕೆಟ್​ ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಪ್ರಕಟಗೊಂಡಿರುವ ಹೊಸ ರ‍್ಯಾಂಕಿಂಗ್‌ನಲ್ಲಿ (ICC T20 Rankings) ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೆ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 7 ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಟಿ20ಯಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. ಮಿ.360 ಡಿಗ್ರಿ ಎಂದು ಜನಪ್ರಿಯರಾಗಿರುವ ಸೂರ್ಯಕುಮಾರ್ ಅವರು ಈ ಹಿಂದೆ ನವೆಂಬರ್ 2 ರಂದು ಟಿ20 ಬ್ಯಾಟ್ಸ್‌ಮನ್‌ಗಳ ICC ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂಬರ್ ಒನ್ ಪಟ್ಟ ಅಲಂಕರಿಸಿದ್ದರು. ಈಗ 7 ದಿನಗಳ ನಂತರ ಅಂದರೆ ನವೆಂಬರ್ 9 ರಂದು, ಅವರು ತಮ್ಮ ರಾಜತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆದಾಗ ಅವರ ರೇಟಿಂಗ್ ಪಾಯಿಂಟ್ 863 ಆಗಿತ್ತು. ಆದರೆ ಎರಡನೇ ಬಾರಿಗೆ ನಂ.1 ಸ್ಥಾನಕ್ಕೇರಿರುವ ಸೂರ್ಯ ಅವರ ರೇಟಿಂಗ್ ಪಾಯಿಂಟ್​ನಲ್ಲಿ 7 ಅಂಕ ಹೆಚ್ಚಾಗಿದೆ.

ಸೂರ್ಯಕುಮಾರ್ ನಂ.1

ಹೊಸ ಐಸಿಸಿ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ 869 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರ ರೇಟಿಂಗ್ ಪಾಯಿಂಟ್ 842 ರಿಂದ 830 ಕ್ಕೆ ಇಳಿಕೆ ಕಂಡಿದ್ದು ಎರಡನೇ ಸ್ಥಾನದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಮತ್ತು ರಿಜ್ವಾನ್ ಅವರ ರೇಟಿಂಗ್ ಪಾಯಿಂಟ್‌ಗಳಲ್ಲಿ 39 ಪಾಯಿಂಟ್‌ಗಳ ವ್ಯತ್ಯಾಸವಿದೆ. ಇವರಲ್ಲದೆ, ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಟಿ20 ಬ್ಯಾಟ್ಸ್‌ಮನ್‌ಗಳ ಹೊಸ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಅಗ್ರ 10 ಬ್ಯಾಟ್ಸ್‌ಮನ್‌ಗಳಲ್ಲಿ ಸೂರ್ಯಕುಮಾರ್ ಹೊರತುಪಡಿಸಿ ಭಾರತದ ಯಾವುದೇ ಬ್ಯಾಟ್ಸ್‌ಮನ್ ಇಲ್ಲ. ಮತ್ತೊಂದೆಡೆ ಪಾಕಿಸ್ತಾನದ ಬಾಬರ್ ಅಜಮ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದನ್ನೂ ಓದಿ: ‘ಕೊಹ್ಲಿ… ಕೊಹ್ಲಿ’.. ಆಸ್ಟ್ರೇಲಿಯಾದಲ್ಲಿ ಹೆಚ್ಚಿದ ವಿರಾಟ್ ಫೀವರ್; ಕೊಹ್ಲಿ ನೋಡಲು ಮುಗಿಬಿದ್ದ ಫ್ಯಾನ್ಸ್; ವಿಡಿಯೋ

ಟಾಪ್ 10ರಲ್ಲಿ ವಿರಾಟ್‌ಗೆ ಸ್ಥಾನವಿಲ್ಲ

ಆಶ್ಚರ್ಯಕರ ಸಂಗತಿಯೆಂದರೆ, ಅಕ್ಟೋಬರ್‌ನಲ್ಲಿ ICC ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ ಐಸಿಸಿ ಪುರುಷರ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ವಿರಾಟ್ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದು, ತಂಡದ ಪರ 246 ರನ್ ಗಳಿಸಿದ್ದಾರೆ. ಆದಾಗ್ಯೂ, ಬಾಂಗ್ಲಾದೇಶದ ವಿರುದ್ಧ ವಿರಾಟ್ ಅವರ ಕಳಪೆ ಪ್ರದರ್ಶನವು ಅವರನ್ನು ಟಾಪ್ 10 ರಿಂದ ಹೊರದಬ್ಬಿದೆ.

ಫಾರ್ಮ್ ಹಿಟ್, ಸೂರ್ಯ ಫಿಟ್

ಸೂರ್ಯಕುಮಾರ್ ಯಾದವ್ ಸದ್ಯಕ್ಕೆ ಇರುವ ಫಾರ್ಮ್ ನೋಡಿದರೆ ಇದೀಗ ಟಿ20ಯಲ್ಲಿ ಅವರ ರಾಜತ್ವಕ್ಕೆ ಯಾವುದೇ ಧಕ್ಕೆ ಇಲ್ಲದಂತಾಗಿದೆ. ಅದೇನೆಂದರೆ, ಸೂರ್ಯಕುಮಾರ್ ಯಾದವ್ ಅವರ ರೇಟಿಂಗ್ ಅಂಕಗಳು ಈಗ ವಾರಕ್ಕೊಮ್ಮೆ ಹೆಚ್ಚುತ್ತಿದರೂ ಆಶ್ಚರ್ಯಪಡಬೇಕಿಲ್ಲ. ಇದು ಸಂಭವಿಸಿದಲ್ಲಿ, ಟಿ20 ಕ್ರಿಕೆಟ್​ನಲ್ಲಿ ಈ ಹಿಂದೆ ವಿರಾಟ್ ಕೊಹ್ಲಿ ಹೆಸರಿನಲ್ಲಿ ದಾಖಲಾಗಿದ್ದ ದೊಡ್ಡ ದಾಖಲೆಯನ್ನು ಸೂರ್ಯ ಮುರಿಯಲಿದ್ದಾರೆ.

ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ಸೂರ್ಯ

ವಿರಾಟ್ ಕೊಹ್ಲಿ ಪ್ರಸ್ತುತ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು 897 ರೇಟಿಂಗ್ ಪಾಯಿಂಟ್‌ ಪಡೆದ ಮೊದಲ ಬ್ಯಾಟ್ಸ್​ಮನ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಅವರ ಆ ದಾಖಲೆಯಿಂದ ಪ್ರಸ್ತುತ 28 ರೇಟಿಂಗ್ ಪಾಯಿಂಟ್‌ಗಳ ದೂರದಲ್ಲಿದ್ದಾರೆ. ಈಗ ಸೂರ್ಯಕುಮಾರ್ ಇರುವ ಫಾರ್ಮ್‌ ನೋಡಿದರೆ, ಅವರು ವಿರಾಟ್ ಕೊಹ್ಲಿ ಈ ಹಿಂದೆ ನಿರ್ಮಿಸಿದ ದಾಖಲೆಯನ್ನು ಇಷ್ಟರಲ್ಲೇ ಮುರಿಯಲಿದ್ದಾರೆ ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Wed, 9 November 22

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ