Virat Kohli Injured: ಭಾರತಕ್ಕೆ ಮತ್ತೊಂದು ಆಘಾತ; ಅಭ್ಯಾಸದ ವೇಳೆ ಕೊಹ್ಲಿಗೆ ಗಾಯ..! ವಿಡಿಯೋ ನೋಡಿ

T20 World Cup 2022: ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಟೀಮ್ ಮೀಡಿಯಾಗೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ.

Virat Kohli Injured: ಭಾರತಕ್ಕೆ ಮತ್ತೊಂದು ಆಘಾತ; ಅಭ್ಯಾಸದ ವೇಳೆ ಕೊಹ್ಲಿಗೆ ಗಾಯ..! ವಿಡಿಯೋ ನೋಡಿ
ಅಭ್ಯಾಸದ ವೇಳೆ ಕೊಹ್ಲಿಗೆ ಗಾಯ
Follow us
TV9 Web
| Updated By: ಪೃಥ್ವಿಶಂಕರ

Updated on:Nov 09, 2022 | 1:41 PM

ಇಂಗ್ಲೆಂಡ್ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ (Team India) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಗಾಯಗೊಂಡಿದ್ದಾರೆ. ನೆಟ್ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ (Harshal Patel) ಅವರ ಚೆಂಡು ವಿರಾಟ್ ಕೊಹ್ಲಿ ಅವರ ತೊಡೆಸಂದಿಗೆ ಬಡಿದಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ.. ವಿರಾಟ್ ಕೊಹ್ಲಿಗೆ ಗಂಭೀರ ಗಾಯವಾಗಿದೆಯಂತೆ. ಅವರು ನೆಟ್ ಅಭ್ಯಾಸವನ್ನು ಮಧ್ಯದಲ್ಲಿ ಬಿಟ್ಟು ಮೈದಾನದಿಂದ ಹೊರನಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಈ ಗಾಯ ಸಂಭವಿಸಿದೆ. ಹರ್ಷಲ್ ಪಟೇಲ್ ಅವರ ವೇಗದ ಬಾಲ್ ವಿರಾಟ್ ಕೊಹ್ಲಿಗೆ ನೋವುಂಟು ಮಾಡಿದೆ. ಗಾಯದ ನಂತರ ವಿರಾಟ್ ಕೊಹ್ಲಿ ತಕ್ಷಣವೇ ಮೈದಾನದಿಂದ ನಿರ್ಗಮಿಸಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ವಿರಾಟ್ ಕೊಹ್ಲಿಯ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಕಿಂಗ್ ಕೊಹ್ಲಿಗೆ ಗಾಯ

ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಟೀಮ್ ಮೀಡಿಯಾಗೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಟೀಂ ಇಂಡಿಯಾ ಕೂಡ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದಿಂದ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ತಲುಪಿತ್ತು. ಈ ಮೆಗಾ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈ ವಿಶ್ವಕಪ್​ನಲ್ಲಿ ವಿರಾಟ್ ಅತಿ ಹೆಚ್ಚು ರನ್ ಗಳಿಸಿದ್ದು, ಅವರೀಗ ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ: NZ Vs PAK Playing XI: ಟಾಸ್ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನ ಬೌಲಿಂಗ್; ಉಭಯ ತಂಡಗಳು ಹೀಗಿವೆ

ಈ ಮೊದಲು ರೋಹಿತ್​ಗೆ ಇಂಜುರಿ

ಮೊನ್ನೆ ಮಂಗಳವಾರ ನಾಯಕ ರೋಹಿತ್ ಶರ್ಮಾ ಕೂಡ ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದು ಗೊತ್ತೇ ಇದೆ. ಅಡಿಲೇಡ್‌ನಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್‌ ಮಾಡುವಾಗ ರೋಹಿತ್‌ ಶರ್ಮಾ ಅವರ ಬಲಗೈಗೆ ಗಾಯವಾಗಿತ್ತು. ಇದರೊಂದಿಗೆ ರೋಹಿತ್ ಕ್ರೀಸ್ ತೊರೆದಿದ್ದರು. ಗಾಯದಿಂದಾಗಿ ಅವರು ಸ್ವಲ್ಪ ಸಮಯದವರೆಗೆ ನೋವಿನಿಂದ ನರಳಬೇಕಾಯಿತು. ಇದನ್ನು ತಿಳಿದ ಫಿಸಿಯೋ ಮತ್ತು ಇತರ ಸಿಬ್ಬಂದಿ ರೋಹಿತ್‌ನ ಗಾಯವನ್ನು ಪರೀಕ್ಷಿಸಲು ಓಡಿ ಬಂದು ಚಿಕಿತ್ಸೆ ನೀಡಿದ್ದರು. ಆ ಬಳಿಕ ಹಿಟ್‌ಮ್ಯಾನ್‌ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದರು. ಏತನ್ಮಧ್ಯೆ ರೋಹಿತ್ ಮತ್ತೆ ಬ್ಯಾಟಿಂಗ್ ಅಭ್ಯಾಸ ಮಾಡುವುದನ್ನು ಕಂಡು ಭಾರತ ತಂಡದ ಜತೆಗೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇಂಗ್ಲೆಂಡ್ ಎದುರಿನ ಸೆಮಿಸ್‌ಗಾಗಿ ಈಗಾಗಲೇ ಅಡಿಲೇಡ್‌ ತಲುಪಿರುವ ಟೀಂ ಇಂಡಿಯಾ ಅಲ್ಲಿ ತನ್ನ ಅಭ್ಯಾಸದಲ್ಲಿ ನಿರತವಾಗಿದೆ. ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ರೋಹಿತ್, ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ಪ್ರಾಕ್ಟೀಸ್ ಸೆಷನ್​ಗೆ ಬಂದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Wed, 9 November 22