Ind vs Eng: ಸೆಮಿಫೈನಲ್​ಗೆ ಹಿಟ್​ಮ್ಯಾನ್ ಫಿಟ್; ಪಂತ್- ಕಾರ್ತಿಕ್ ಯಾರಿಗೆ ತಂಡದಲ್ಲಿ ಸ್ಥಾನ?

T20 World Cup 2022: ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಆಯ್ಕೆ ಕುರಿತು ಮಾತನಾಡಿದ ರೋಹಿತ್ ಶರ್ಮಾ, ಇಬ್ಬರೂ ಆಯ್ಕೆಗೆ ಲಭ್ಯರಿದ್ದಾರೆ ಎಂದು ಹೇಳುವ ಮೂಲಕ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರು ಆಡುತ್ತಾರೆ ಎಂಬುದರ ಕುರಿತು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ

Ind vs Eng: ಸೆಮಿಫೈನಲ್​ಗೆ ಹಿಟ್​ಮ್ಯಾನ್ ಫಿಟ್; ಪಂತ್- ಕಾರ್ತಿಕ್ ಯಾರಿಗೆ ತಂಡದಲ್ಲಿ ಸ್ಥಾನ?
rohit sharma
Follow us
TV9 Web
| Updated By: ಪೃಥ್ವಿಶಂಕರ

Updated on:Nov 09, 2022 | 3:53 PM

ಮಂಗಳವಾರ ನಾಯಕ ರೋಹಿತ್ ಶರ್ಮಾ (Rohit Sharma) ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದು ಗೊತ್ತೇ ಇದೆ. ಅಡಿಲೇಡ್‌ನಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್‌ ಮಾಡುವಾಗ ರೋಹಿತ್‌ ಶರ್ಮಾ ಅವರ ಬಲಗೈಗೆ ಗಾಯವಾಗಿತ್ತು. ಇದರೊಂದಿಗೆ ರೋಹಿತ್ ಕ್ರೀಸ್ ತೊರೆದಿದ್ದರು. ಗಾಯದಿಂದಾಗಿ ಅವರು ಸ್ವಲ್ಪ ಸಮಯದವರೆಗೆ ನೋವಿನಿಂದ ನರಳಬೇಕಾಯಿತು. ಇದೀಗ ರೋಹಿತ್ ಶರ್ಮಾ ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ತಾನು ಸಂಪೂರ್ಣ ಫಿಟ್ ಆಗಿದ್ದು, ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್ ನಲ್ಲಿ ಆಡುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೂಲಕ ರೋಹಿತ್ ಫಿಟ್ನೆಸ್ ಕುರಿತ ವದಂತಿಗಳಿಗೆ ತೆರೆಬಿದ್ದಿದೆ.

ಮಂಗಳವಾರ ಚೆಂಡು ನನ್ನ ಕೈಗೆ ಬಡಿದಿತ್ತು. ಆದರೆ ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕೈಯಲ್ಲಿ ಸ್ವಲ್ಪ ಗುರುತು ಇದ್ದರೂ ಈಗ ನೋವು ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ. ಇದಲ್ಲದೇ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಬಗ್ಗೆಯೂ ರೋಹಿತ್ ಶರ್ಮಾ ಪ್ರಮುಖ ಹೇಳಿಕೆ ನೀಡಿದ್ದಾರೆ. ಆದರೆ ಆಡುವ ಹನ್ನೊಂದರಲ್ಲಿ ಯಾರು ಆಡುತ್ತಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿಲ್ಲ.

ಕಾರ್ತಿಕ್ ಮತ್ತು ಪಂತ್ ಸೆಮಿ ಫೈನಲ್‌ನಲ್ಲಿ ಯಾರು ಆಡುತ್ತಾರೆ?

ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಆಯ್ಕೆ ಕುರಿತು ಮಾತನಾಡಿದ ರೋಹಿತ್ ಶರ್ಮಾ, ಇಬ್ಬರೂ ಆಯ್ಕೆಗೆ ಲಭ್ಯರಿದ್ದಾರೆ ಎಂದು ಹೇಳುವ ಮೂಲಕ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರು ಆಡುತ್ತಾರೆ ಎಂಬುದರ ಕುರಿತು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಾರ್ತಿಕ್‌ಗಿಂತ ರಿಷಬ್ ಪಂತ್‌ಗೆ ಆದ್ಯತೆ ನೀಡಬಹುದು . ಈ ಟೂರ್ನಿಯಲ್ಲಿ ಕಾರ್ತಿಕ್ ಸತತವಾಗಿ ವಿಫಲವಾಗುತ್ತಿದ್ದಾರೆ. ಹೀಗಾಗಿ ಎಡಗೈ ಬ್ಯಾಟ್ಸ್‌ಮನ್ ಆಗಿರುವ ರಿಷಬ್ ಪಂತ್​ಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ: IPL 2023: ಮಿನಿ ಹರಾಜಿಗೂ ಮುನ್ನ ಚೆನ್ನೈ ತಂಡದಿಂದ ಈ ನಾಲ್ಕು ಆಟಗಾರರಿಗೆ ಗೇಟ್​ಪಾಸ್..?

ಸೂರ್ಯಕುಮಾರ್ ಮೇಲೆ ಹೊಗಳಿಕೆಯ ಸುರಿಮಳೆ..

ರೋಹಿತ್ ಶರ್ಮಾ ಕೂಡ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ್ದಾರೆ. ‘ಸೂರ್ಯಕುಮಾರ್ ಪ್ರತಿ ಸನ್ನಿವೇಶದಲ್ಲೂ ಮುಕ್ತವಾಗಿ ಆಡುವ ಅಭ್ಯಾಸ ಹೊಂದಿದ್ದಾರೆ. ಸ್ಕೋರ್ 10 ರನ್‌ಗಳಿಗೆ 2 ವಿಕೆಟ್‌ಗಳು ಅಥವಾ 100 ರನ್‌ಗಳಿಗೆ 2 ವಿಕೆಟ್‌ಗಳು ಎಂಬುದನ್ನು ಅವರು ಲೆಕ್ಕಿಸುವುದಿಲ್ಲ. ಸೂರ್ಯಕುಮಾರ್ ಒತ್ತಡವನ್ನು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೆ ಹೆಚ್ಚು ಒತ್ತಡದಲ್ಲಿ ಆಡುವುದನ್ನು ಆನಂದಿಸುತ್ತಾರೆ. ಅದರ ವ್ಯಾಪ್ತಿ ಅಪರಿಮಿತ ಎಂದಿದ್ದಾರೆ.

ಇಂಗ್ಲೆಂಡ್‌ ಪ್ರಬಲ ಎದುರಾಳಿ – ರೋಹಿತ್

ಇಂಗ್ಲೆಂಡ್ ತಂಡವನ್ನು ಪ್ರಬಲ ಎದುರಾಳಿ ಎಂದು ಬಣ್ಣಿಸಿದ ರೋಹಿತ್ ಶರ್ಮಾ, ಆಂಗ್ಲರ ತಂಡ ತುಂಬಾ ಅಪಾಯಕಾರಿ. ಅವರು ಯಾರನ್ನಾದರೂ ಸೋಲಿಸುವ ಸಾಮಥ್ಯ್ರ ಹೊಂದಿದ್ದಾರೆ. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಪ್ರದರ್ಶನವು ಮುಖ್ಯವಾಗಿದೆ. ಆದರೆ, ಅಂತಹ ಪಂದ್ಯಗಳು ವೃತ್ತಿಜೀವನದ ವಿಷಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆಟಗಾರನ ಸಂಪೂರ್ಣ ವೃತ್ತಿಜೀವನವು ಒಂದು ನಾಕೌಟ್ ಪಂದ್ಯದಿಂದ ಬದಲಾಗಬಹುದು ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 9 November 22