
ಇಂಟರ್ನ್ಯಾಷನಲ್ ಕ್ರಿಕೆಟ್ ಬೋರ್ಡ್ (ಐಸಿಸಿ) ಟೆಸ್ಟ್ ಕ್ರಿಕೆಟ್ಗೆ ಮೇಜರ್ ಸರ್ಜರಿ ಮಾಡಲಿದೆಯಾ? ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಹೌದು. ಆದರೆ ಅದು ಈಗಲ್ಲ. ಬದಲಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ 5ನೇ ಆವೃತ್ತಿಯಲ್ಲಿ. ಅಂದರೆ 2027 ರಿಂದ ಶುರುವಾಗಲಿರುವ WTC ಆವೃತ್ತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಐಸಿಸಿ ಚಿಂತಿಸಿದೆ.
ಇದಕ್ಕಾಗಿ ಬಲಿಷ್ಠ ಹಾಗೂ ದುರ್ಬಲ ತಂಡಗಳನ್ನು ವಿಂಗಡಿಸಲು ನಿರ್ಧರಿಸಲಾಗಿದೆ. ಅಂದರೆ ಟೆಸ್ಟ್ನ ಕ್ರಿಕೆಟ್ನಲ್ಲಿ ಬಲಾಢ್ಯರು ಎನಿಸಿಕೊಂಡಿರುವ ತಂಡಗಳು ಒಂದೆಡೆ ಕಣಕ್ಕಿಳಿದರೆ, ದುರ್ಬಲ ತಂಡಗಳ ನಡುವೆ 4 ದಿನಗಳ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿದೆ.
ಇಲ್ಲಿ ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಭಾರತ ತಂಡಗಳು ಕಾಣಿಸಿಕೊಳ್ಳುವುದು ಖಚಿತ. ಈ ತಂಡಗಳ ಪಂದ್ಯಗಳಿಗೆ ಹೆಚ್ಚಿನ ಪ್ರೇಕ್ಷಕರು ಸೇರುತ್ತಿರುವುದರಿಂದ ಟೆಸ್ಟ್ ಕ್ರಿಕೆಟ್ನ ಮೂಲ ಸ್ವರೂಪದ ಭವ್ಯತೆಯನ್ನು ಕಾಪಾಡಿಕೊಳ್ಳಿದ್ದಾರೆ. ಅಂದರೆ ಈ ಹಿಂದಿನಂತೆ 5 ದಿನಗಳ ಟೆಸ್ಟ್ ಪಂದ್ಯಗಳಳನ್ನಾಡಲಿದ್ದಾರೆ.
ಇನ್ನು ದುರ್ಬಲ ತಂಡಗಳ ಪಟ್ಟಿಯಲ್ಲಿ ಬಾಂಗ್ಲಾದೇಶ್, ಝಿಂಬಾಬ್ವೆ, ಶ್ರೀಲಂಕಾ, ಅಫ್ಘಾನಿಸ್ತಾನ್ ಸೇರಿದಂತೆ ಒಂದಷ್ಟು ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳು ಆಡಲಿರುವ ಟೆಸ್ಟ್ ಪಂದ್ಯಗಳನ್ನು 4 ದಿನಗಳಿಗೆ ಸೀಮಿತಗೊಳಿಸಲಾಗುತ್ತದೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ದಿನದಾಟದಲ್ಲಿ 90 ಓವರ್ಗಳನ್ನು ಆಡಲಾಗುತ್ತದೆ. ಆದರೆ 4 ದಿನದಾಟದ ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ದಿನ ಕನಿಷ್ಠ 98 ಓವರ್ಗಳನ್ನು ಆಡಿಸಲು ಚಿಂತಿಸಲಾಗಿದ. ಹೀಗೆ ಮಾಡುವುದರಿಂದ ಹೆಚ್ಚುವರಿ 32 ಓವರ್ಗಳನ್ನು ಆಡಿಸಬಹುದು. ಅಂದರೆ ಒಂದು ದಿನದಾಟದ ಕಡಿತದಿಂದ 58 ಓವರ್ಗಳು ಮಾತ್ರ ಕಡಿಮೆಯಾಗಲಿದೆ.
ಅಷ್ಟೇ ಅಲ್ಲದೆ ನಾಲ್ಕು ದಿನದಾಟಗಳ ಪಂದ್ಯಗಳಿಂದ ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಇದರಿಂದ ಉದಯೋನ್ಮುಖ ತಂಡಗಳಿಗೆ ಉತ್ತಮ ವೇಳಾಪಟ್ಟಿ ರೂಪಿಸಬಹುದು. ಅಲ್ಲದೆ ಕ್ರಿಕೆಟ್ ಮಂಡಳಿಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಬಹುದು.
ಟೆಸ್ಟ್ ಕ್ರಿಕೆಟ್ನಲ್ಲಿ ಬಲಾಢ್ಯ ಹಾಗೂ ದುರ್ಬಲ ತಂಡಗಳನ್ನು ವಿಂಗಡಿಸಿದರೆ, ಹೊಸ ಶ್ರೇಯಾಂಕ ಪಟ್ಟಿಯನ್ನು ರೂಪಿಸುವ ಸಾಧ್ಯತೆಯಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಮುಂಬರುವ ದಿನಗಳಲ್ಲಿ ಬಲಾಢ್ಯರ ಪಟ್ಟಿಗೆ ಸೇರ್ಪಡೆಯಾಗಲಿದೆ. ಅಂದರೆ ದುರ್ಬಲ ತಂಡಗಳ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆಯುವ ತಂಡಗಳಿಗೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮುಂಬರುವ ಆವೃತ್ತಿಯಲ್ಲಿ ಬಲಾಢ್ಯರ ಪಟ್ಟಿಯಲ್ಲಿ ಕಣಕ್ಕಿಳಿಯಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: IND vs ENG: ವಿರಾಟ್ ಕೊಹ್ಲಿಯ ಸ್ಥಾನ ತುಂಬುವವರು ಇವರೇ..!
ಈ ಮೂಲಕ ಏಕಪಕ್ಷೀಯವಾಗಿ ಸಾಗುವ ಟೆಸ್ಟ್ ಸರಣಿಗಳಿಗೆ ಬ್ರೇಕ್ ಹಾಕಲು ಐಸಿಸಿ ಪ್ಲ್ಯಾನ್ ರೂಪಿಸುತ್ತಿದ್ದು, ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 202-29 ರ ಸರಣಿಯಲ್ಲಿ 4 ದಿನಗಳ ಟೆಸ್ಟ್ ಪಂದ್ಯಗಳನ್ನು ಪರಿಚಯಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತಿಸಿದೆ.
Published On - 10:59 am, Thu, 19 June 25