ICC T20 World Cup 2021: ಟಿ-20 ವಿಶ್ವಕಪ್ಗೆ 15 ಮಂದಿ ಸದಸ್ಯರ ಟೀಮ್ ಇಂಡಿಯಾ ಈ ದಿನದಂದು ಪ್ರಕಟ
ಈಗಾಗಲೇ ಕೆಲ ತಂಡಗಳು ಟಿ-20 ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಪ್ರಕಟ ಮಾಡಿದೆ. ಆದರೆ, ಟೀಮ್ ಇಂಡಿಯಾ ಇದರ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ, ಸದ್ಯ ಭಾರತ ತಂಡ ಯಾವಾಗ ಪ್ರಕಟ ಆಗುತ್ತೆ ಎಂಬ ಮಾಹಿತಿ ಹೊರಬಿದ್ದಿದೆ.

ಇಡೀ ಕ್ರಿಕೆಟ್ ಜಗತ್ತೇ ಕಾತುರದಿಂದ ಕಾದುಕುಳಿತಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ (ICC T20 World Cup) ಟೂರ್ನಿ ಹತ್ತಿರವಾಗುತ್ತಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟ ಮಾಡಿದ್ದು, ಅಕ್ಟೋಬರ್ 17ಕ್ಕೆ ಚಾಲನೆ ಸಿಗಲಿದೆ. ಯುಎಇ ಹಾಗೂ ಒಮನ್‌ನಲ್ಲಿ ಸಂಪೂರ್ಣ ಟೂರ್ನಿ ನಡೆಯಲಿದ್ದು, ಅಕ್ಟೋಬರ್ 24 ರಂದು ಪಾಕಿಸ್ತಾನ ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ (Ind vs Pak) ತಂಡ ಚುಟುಕು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಟಿ-20 ವಿಶ್ವಕಪ್ಗೆ ತಂಡವನ್ನು ಪ್ರಕಟ ಮಾಡಲು ಸೆಪ್ಟೆಂಬರ್ 10 ಕೊನೇಯ ದಿನವಾಗಿದೆ.
ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಂತಹ ಪ್ರಮುಖ ತಂಡಗಳು ಟಿ-20 ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಪ್ರಕಟ ಮಾಡಿದೆ. ಆದರೆ, ಟೀಮ್ ಇಂಡಿಯಾ ಇದರ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ, ಸದ್ಯ ಭಾರತ ತಂಡ ಯಾವಾಗ ಪ್ರಕಟ ಆಗುತ್ತೆ ಎಂಬ ಮಾಹಿತಿ ಹೊರಬಿದ್ದಿದೆ.
ಸ್ಪೋರ್ಟ್ಸ್ಕೀಡಾ ಮಾಡಿರುವ ವರದಿಯ ಪ್ರಕಾರ, ಟಿ-20 ವಿಶ್ವಕಪ್ ಟೂರ್ನಿಗೆ ಭಾರತದ 15 ಮಂದಿ ಸದಸ್ಯರನ್ನು ಇದೇ ಸೆಪ್ಟೆಂಬರ್ 6 ಅಥವಾ 7 ರಂದು ಬಿಸಿಸಿಐ ಪ್ರಕಟ ಮಾಡಲಿದೆಯಂತೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಸೋಮವಾರ ಈ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ಅಥವಾ ಮಂಗಳವಾರ ಬಿಸಿಸಿಐ ಆಟಗಾರರ ಹೆಸರನ್ನು ಘೋಷಿಸಲಿದೆಯಂತೆ.
ಟೀಮ್ ಇಂಡಿಯಾದ 15 ಮಂದಿ ಸದಸ್ಯರ ಪಟ್ಟಿಯಲ್ಲಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಶಿಖರ್ ಧವನ್ ಸ್ಥಾನ ಇನ್ನೂ ಅಂತಿಮ ಆಗಿಲ್ಲ ಎಂದು ಹೇಳಲಾಗುತ್ತಿದ್ದು, ಆಯ್ಕೆ ಸಮಿತಿಯ ಗಮನ ಸೆಳೆಯದ ಶ್ರೇಯಸ್ ಅಯ್ಯರ್ ಕೂಡ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಕ್ರುನಾಲ್ ಪಾಂಡ್ಯ ಅಥವಾ ಭುವನೇಶ್ವರ್ ಕುಮಾರ್ ಪೈಕಿ ಒಬ್ಬರಿಗೆ ಸ್ಥಾನ ನೀಡುವ ಅಂದಾಜಿದೆ.
ಇನ್ನುಳಿದಂತೆ ಸೂರ್ಯಕುಮಾರ್ ಸ್ಥಾನ ಬಹುತೇಕ ಖಚಿತವಾಗಿದೆ. ಧವನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ ಎಂದಾದರೆ, ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬಹುದು. ಕೆ. ಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ಪ್ರಸಕ್ತ 2021ರ ಐಸಿಸಿ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆದರೆ, ಎರಡನೇ ಸುತ್ತಿನಲ್ಲಿ ಸೂಪರ್ 12ರ ಹಂತದ ಪಂದ್ಯಗಳು ಜರುಗಲಿವೆ. ಯುಎಇ ಹಾಗೂ ಒಮನ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14 ರಂದು ದುಬೈನಲ್ಲಿ ಫೈನಲ್ ಹಣಾಹಣಿಯ ಮೂಲಕ ಅಂತ್ಯವಾಗಲಿದೆ.
Virat Kohli: ರೋಹಿತ್ ಶರ್ಮಾ ಶತಕ ಹೊಡೆಯುತ್ತಿದ್ದಂತೆ ವಿರಾಟ್ ಕೊಹ್ಲಿಯ ರಿಯಾಕ್ಷನ್ ವಿಡಿಯೋ ವೈರಲ್
ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್ ಯತಿರಾಜ್ಗೆ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ ಅಭಿನಂದನೆ
(ICC T20 World Cup 2021 BCCI announce Team India 15-man squad for T20I WC on this date)
