ICC Test Ranking: ಟೆಸ್ಟ್ ರ‍್ಯಾಂಕಿಂಗ್: ಅಗ್ರ ಹತ್ತರಲ್ಲಿ ಆರು ಭಾರತೀಯರು
ICC Test Rankings: ಐಸಿಸಿ ಪ್ರಕಟಿಸಿರುವ ಹೊಸ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ಆರು ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮೂವರು ಸ್ಥಾನ ಪಡೆದರೆ, ಬೌಲಿಂಗ್ ಶ್ರೇಯಾಂಕದಲ್ಲಿ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಟೆಸ್ಟ್ನ ನಂಬರ್ 1 ಬೌಲರ್ ಆಗಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊರಹೊಮ್ಮಿದ್ದಾರೆ.
ಐಸಿಸಿ ಟೆಸ್ಟ್ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆರು ಆಟಗಾರರು ಟಾಪ್-10 ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇವರಲ್ಲಿ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು ಎಂಬುದು ಮತ್ತೊಂದು ವಿಶೇಷ. ಹೊಸ ರ‍್ಯಾಂಕಿಂಗ್ ಪಟ್ಟಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಯಶಸ್ವಿಯಾಗಿದ್ದಾರೆ. ಹಾಗೆಯೇ ಫ್ಯಾಬ್-4 ಫೋರ್ ಖ್ಯಾತಿಯ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ಕೂಡ ಅಗ್ರ ಹತ್ತರಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಮುಂಬರುವ ಸರಣಿಗಳ ಮೂಲಕ ಟಾಪ್-5 ಗೇರುವ ಉತ್ತಮ ಅವಕಾಶ ಹೊಂದಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿ ಅಗ್ರ ಹತ್ತರಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 8ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಟೆಸ್ಟ್ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ..
ಟೆಸ್ಟ್ ಬ್ಯಾಟರ್ಗಳ ಟಾಪ್-10 ರ‍್ಯಾಂಕಿಂಗ್:
- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 859 ರೇಟಿಂಗ್
- ಜೋ ರೂಟ್ (ಇಂಗ್ಲೆಂಡ್)- 840 ರೇಟಿಂಗ್
- ಬಾಬರ್ ಆಝಂ (ಪಾಕಿಸ್ತಾನ್)- 768 ರೇಟಿಂಗ್
- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 768 ರೇಟಿಂಗ್
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 757 ರೇಟಿಂಗ್
- ರೋಹಿತ್ ಶರ್ಮಾ (ಭಾರತ)- 751 ರೇಟಿಂಗ್
- ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 747 ರೇಟಿಂಗ್
- ಯಶಸ್ವಿ ಜೈಸ್ವಾಲ್ (ಭಾರತ)- 740 ರೇಟಿಂಗ್
- ದಿಮುತ್ ಕರುಣರತ್ನೆ (ಶ್ರೀಲಂಕಾ)- 739 ರೇಟಿಂಗ್
- ವಿರಾಟ್ ಕೊಹ್ಲಿ (ಭಾರತ)- 737 ರೇಟಿಂಗ್
ಇದನ್ನೂ ಓದಿ: RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ
ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಬೌಲರ್ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುವಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಬೌಲರ್ಗಳ ಟಾಪ್-10 ರ‍್ಯಾಂಕಿಂಗ್:
- ಆರ್. ಅಶ್ವಿನ್ (ಭಾರತ)- 870 ರೇಟಿಂಗ್
- ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 847 ರೇಟಿಂಗ್
- ಜಸ್ಪ್ರೀತ್ ಬುಮ್ರಾ (ಭಾರತ)- 847 ರೇಟಿಂಗ್
- ಕಗಿಸೊ ರಬಾಡ (ಸೌತ್ ಆಫ್ರಿಕಾ)- 834 ರೇಟಿಂಗ್
- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 820 ರೇಟಿಂಗ್
- ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 801 ರೇಟಿಂಗ್
- ರವೀಂದ್ರ ಜಡೇಜಾ (ಭಾರತ)- 788 ರೇಟಿಂಗ್
- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 746 ರೇಟಿಂಗ್
- ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 733 ರೇಟಿಂಗ್
- ಕೈಲ್ ಜೇಮಿಸನ್ (ನ್ಯೂಝಿಲೆಂಡ್)- 729 ರೇಟಿಂಗ್