ಭಾರತ ಮತ್ತು ಪಾಕಿಸ್ತಾನ (IND vs PAK) ವಿಶ್ವಕಪ್ ಮುಖಾಮುಖಿಗೆ ಅಕ್ಟೋಬರ್ 14ಕ್ಕಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ವಿಶ್ವಕಪ್‌ನ (ICC World Cup 2023) ಈ ಅಮೋಘ ಪಂದ್ಯ ನಡೆಯಲಿದೆ. ಎಂದಿನಂತೆ ಈ ಪಂದ್ಯಕ್ಕೆ ಕುತೂಹಲ ಕೆರಳಿಸಿದ್ದು, ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಖಚಿತವಾಗಿದೆ. ಈ ಪಂದ್ಯಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಹ ಕ್ರೀಡಾಂಗಣದಲ್ಲಿ ಉಪಸ್ಥಿತರಿರುತ್ತಾರೆ. ಹೀಗಾಗಿ ಕ್ರಿಕೆಟ್ ಲೋಕದ ಈ ಮಹಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಹಮದಾಬಾದ್‌ಗೆ ತೆರಳುತ್ತಿರುವ ಕ್ರಿಕೆಟ್ ಅಭಿಮಾನಿಗಳು ಕೊಂಚ ಈ ಸುದ್ದಿಯತ್ತ ಕಣ್ಣಾಯಿಸುವುದು ಅವಶ್ಯಕವಾಗಿದೆ.
ಕ್ರಿಕೆಟ್ ಲೋಕದಲ್ಲಿ ಭಾರತ- ಪಾಕಿಸ್ತಾನ ಪಂದ್ಯವೆಂದರೆ ಅದಕ್ಕಿರುವ ಮಹತ್ವವೇ ಬೇರೆ. ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಹೀಗಾಗಿ ಈ ಪಂದ್ಯದ ಬಿಸಿ ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿದೆ. ಇದರ ತೀವ್ರತೆಯನ್ನು ಅರಿತ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಟಿಕೆಟ್ ಖರೀದಿ ಇಂದ ಹಿಡಿದು, ಅಹಮದಾಬಾದ್‌ನಲ್ಲಿ ಹೋಟೆಲ್ ಬುಕ್ ಮಾಡುವುದರವರೆಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿದ್ದಾರೆ.
2 ಸಾವಿರಕ್ಕೆ ಖರೀದಿಸಿ 22 ಸಾವಿರಕ್ಕೆ ಮಾರಾಟ..! ಗಗನಕ್ಕೇರಿದ ಭಾರತ- ಪಾಕ್ ಪಂದ್ಯದ ಟಿಕೆಟ್ ಬೆಲೆ
ಆದರೆ ಇತ್ತೀಚೆಗೆ ಈ ಪಂದ್ಯದ ಟಿಕೆಟ್ ಪಡೆದು ಅಹಮದಾಬಾದ್‌ಗೆ ತೆರಳುತ್ತಿರುವ ಅಭಿಮಾನಿಗಳು ತಮ್ಮ ಪರ್ಸ್ ಭಾರವನ್ನು ಕೊಂಚ ಹೆಚ್ಚೆ ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕೆ ಕಾರಣವೂ ಇದ್ದು, ಅಹಮದಾಬಾದ್‌ಗೆ ವಿಮಾನ ಹತ್ತುವುದರಿಂದ ಹಿಡಿದು, ಭಾರತ- ಪಾಕ್ ಪಂದ್ಯದ ಟಿಕೆಟ್, ಹೋಟೆಲ್ ರೂಮ್ಗಳ ಬೆಲೆ 10 ಪಟ್ಟು ಹೆಚ್ಚಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನವನ್ನು ಕ್ರೀಡಾಂಗಣದಲ್ಲಿ ನೋಡಲಿಚ್ಚಿಸುವ ಅಭಿಮಾನಿಗಳು ತಮ್ಮ ಜೇಬಿನಲ್ಲಿ ಲಕ್ಷಕ್ಕೂ ಅಧಿಕ ಹಣವನ್ನು ಇಟ್ಟುಕೊಳ್ಳುವುದು ಸೂಕ್ತ.
ಅಕ್ಟೋಬರ್ 14 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಈ ಪಂದ್ಯವನ್ನು ನೋಡಲಿಚ್ಚಿಸುವವರು, ಹೋಟೆಲ್ನಲ್ಲಿ ತಂಗುವುದಕ್ಕಾಗಿಯೇ ಎರಡು ರಾತ್ರಿಗಳಿಗೆ 43,000 ರೂಗಳಿಗೂ ಅಧಿಕ ಹಣವನ್ನು ವ್ಯಯಿಸಬೇಕಾಗಿದೆ. ಹಾಗೆಯೇ ಈ ಹಿಂದೆ ದೆಹಲಿಯಿಂದ ಅಹಮದಾಬಾದ್‌ಗೆ ತೆರಳಲು ವಿಮಾನ ದರ 3 ಸಾವಿರ ರೂ ಇತ್ತು. ಆದರೀಗ ಅದರ ಬೆಲೆ 10,000 ರೂ. ಗೆ ಏರಿಕೆಯಾಗಿದೆ. ಇನ್ನು ಭಾರತ- ಪಾಕ್ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಖರೀದಿಸುವವರು ಟಿಕೆಟ್ನ ಮೂಲ ಬೆಲೆಗಿಂತ 10 ಪಟ್ಟು ಅಧಿಕ ಹಣವನ್ನು ವ್ಯಯಿಸಬೇಕಾಗಿದೆ.
ವರದಿಯಾಗಿರುವಂತೆ, ಪಂದ್ಯದ ದಿನದಂದು ಅಹಮದಾಬಾದ್‌ಗೆ ಹೋಗಲು ಯೋಜಿಸುತ್ತಿರುವವರು ಮೇಕ್‌ಮೈಟ್ರಿಪ್‌ನಲ್ಲಿ ದೆಹಲಿಯಿಂದ ಅಹಮದಾಬಾದ್‌ಗೆ ವಿಮಾನ ದರ 10,000 ರಿಂದ 12,000 ರೂ. ವ್ಯಯಿಸಬೇಕಾಗಿದೆ. ಅಲ್ಲದೆ ಅಹಮದಾಬಾದ್‌ನಲ್ಲಿ ತ್ರಿ ಸ್ಟಾರ್ ಹೋಟೆಲ್ನಲ್ಲಿ ಎರಡು ರಾತ್ರಿ ತಂಗಲು 40,000‘ ಕ್ಕೂ ಅಧಿಕ ಹಣ ವ್ಯಯಿಸಬೇಕಿದೆ. ಹಾಗೆಯೇ ಸಾಮಾನ್ಯ ಹೋಟೆಲ್ಗಳಲ್ಲಿ ಅಕ್ಟೋಬರ್ 13 ರಿಂದ ಅಕ್ಟೋಬರ್ 15 ರವರೆಗೆ ಪ್ರತಿ ರಾತ್ರಿಗೆ 6,000 ರಿಂದ 24,000 ರೂ. ಚಾರ್ಚ್ ಮಾಡಲಾಗುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Fri, 13 October 23