AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನಲ್ಲಿ ಗೋಲ್ಡನ್ ಬ್ಯಾಟ್ ಮತ್ತು ಗೋಲ್ಡನ್ ಬಾಲ್​ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ

ICC World Cup Award Lists: ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಐಸಿಸಿ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು 1975 ರಿಂದ ಪ್ರಾರಂಭಿಸಲಾಯಿತು. ಈ ಬಾರಿ ವಿರಾಟ್ ಕೊಹ್ಲಿ ಗೋಲ್ಡನ್​ ಬ್ಯಾಟ್ ಪ್ರಶಸ್ತಿ ಗೆಲ್ಲುವ ರೇಸ್ ನಲ್ಲಿ ಮುಂದಿದ್ದಾರೆ.

ವಿಶ್ವಕಪ್​ನಲ್ಲಿ ಗೋಲ್ಡನ್ ಬ್ಯಾಟ್ ಮತ್ತು ಗೋಲ್ಡನ್ ಬಾಲ್​ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ
ICC World Cup 2023
TV9 Web
| Updated By: ಝಾಹಿರ್ ಯೂಸುಫ್|

Updated on: Nov 18, 2023 | 10:58 PM

Share

ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 19, 2023 ರಂದು ನಡೆಯಲಿದೆ. ಆಸ್ಟ್ರೇಲಿಯಾ ತಂಡ ಐದು ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಭಾರತ-ವೆಸ್ಟ್ ಇಂಡೀಸ್ ತಂಡ ತಲಾ 2 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಪಾಕಿಸ್ತಾನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ವಿಶ್ವಕಪ್ ಗೆದ್ದಿವೆ. ಇನ್ನು ಪ್ರತಿ ವಿಶ್ವಕಪ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಐಸಿಸಿಯಿಂದ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆ ಪ್ರಶಸ್ತಿಗಳಾವುವು ಎಂದು ತಿಳಿಯೋಣ…

ಗೋಲ್ಡನ್ ಬ್ಯಾಟ್​ ಪ್ರಶಸ್ತಿ:

ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಐಸಿಸಿ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು 1975 ರಿಂದ ಪ್ರಾರಂಭಿಸಲಾಯಿತು. ಈ ಬಾರಿ ವಿರಾಟ್ ಕೊಹ್ಲಿ ಗೋಲ್ಡನ್​ ಬ್ಯಾಟ್ ಪ್ರಶಸ್ತಿ ಗೆಲ್ಲುವ ರೇಸ್ ನಲ್ಲಿ ಮುಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಆ್ಯಡಂ ಝಂಪಾ ಗೋಲ್ಡನ್ ಬಾಲ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದುವರೆಗಿನ ವಿಶ್ವಕಪ್​ನಲ್ಲಿ ಗೋಲ್ಡನ್ ಬ್ಯಾಟ್ ಗೆದ್ದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ…

ವಿಶ್ವಕಪ್ ಬ್ಯಾಟ್ಸ್‌ಮನ್ ದೇಶ ರನ್​ಗಳು
1975 ಗ್ಲೆನ್ ಟರ್ನರ್ ನ್ಯೂಝಿಲೆಂಡ್ 333
1979 ಗಾರ್ಡನ್ ಗ್ರೀನೀಸ್ ವೆಸ್ಟ್ ಇಂಡೀಸ್ 253
1983 ಡೇವಿಡ್ ಗೋವರ್ ಇಂಗ್ಲೆಂಡ್ 384
1987 ಗ್ರಹಾಂ ಗೂಚ್ ಇಂಗ್ಲೆಂಡ್ 471
1992 ಮಾರ್ಟಿನ್ ಕ್ರೋವ್ ನ್ಯೂಝಿಲೆಂಡ್ 456
1996 ಸಚಿನ್ ತೆಂಡೂಲ್ಕರ್    ಭಾರತ 523
1999 ರಾಹುಲ್ ದ್ರಾವಿಡ್    ಭಾರತ 461
2003 ಸಚಿನ್ ತೆಂಡೂಲ್ಕರ್    ಭಾರತ 673
2007  ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾ 659
2011  ತಿಲಕರತ್ನೆ ದಿಲ್ಶನ್ ಶ್ರೀಲಂಕಾ 500
2015 ಮಾರ್ಟಿನ್ ಗಪ್ಟಿಲ್ ನ್ಯೂಝಿಲೆಂಡ್ 547
2019  ರೋಹಿತ್ ಶರ್ಮಾ    ಭಾರತ 648

ಗೋಲ್ಡನ್ ಬಾಲ್ ಪ್ರಶಸ್ತಿ:

ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಪ್ರಸ್ತುತ ಇದನ್ನು “ಐಸಿಸಿ ಗೋಲ್ಡನ್ ಬಾಲ್” ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು ಪಡೆದ ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ…

ವಿಶ್ವಕಪ್ ಬೌಲರ್ ದೇಶ ವಿಕೆಟ್
1975 ಗ್ಯಾರಿ ಗಿಲ್ಮೋರ್ / ಬರ್ನಾರ್ಡ್ ಜೂಲಿಯನ್ ಆಸ್ಟ್ರೇಲಿಯಾ/ ವೆಸ್ಟ್ ಇಂಡೀಸ್ 11/11
1979 ಮೈಕ್ ಹೆಡ್ರಿಕ್ ಇಂಗ್ಲೆಂಡ್ 10
1983 ರೋಜರ್ ಬಿನ್ನಿ    ಭಾರತ 18
1987 ಕ್ರೇಗ್ ಮ್ಯಾಕ್‌ಡರ್ಮಾಟ್ ಆಸ್ಟ್ರೇಲಿಯಾ 18
1992  ವಾಸಿಂ ಅಕ್ರಮ್ ಪಾಕಿಸ್ತಾನ 18
1996 ಅನಿಲ್ ಕುಂಬ್ಳೆ    ಭಾರತ 15
1999 ಜೆಫ್ ಅಲಾಟ್ / ಶೇನ್ ವಾರ್ನ್ ನ್ಯೂಝಿಲೆಂಡ್ / ಆಸ್ಟ್ರೇಲಿಯಾ 20 / 20
2003 ಚಾಮಿಂಡ ವಾಸ್ ಶ್ರೀಲಂಕಾ 23
2007 ಗ್ಲೆನ್ ಮೆಕ್‌ಗ್ರಾತ್ ಆಸ್ಟ್ರೇಲಿಯಾ 26
2011 ಝಹೀರ್ ಖಾನ್/ ಶಾಹಿದ್ ಅಫ್ರಿದಿ  ಭಾರತ/ ಪಾಕಿಸ್ತಾನ 21/21
2015 ಮಿಚೆಲ್ ಸ್ಟಾರ್ಕ್/ಟ್ರೆಂಟ್ ಬೌಲ್ಟ್ ಆಸ್ಟ್ರೇಲಿಯಾ/ನ್ಯೂಝಿಲೆಂಡ್ 22/22
2019 ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ 27

ಪ್ಲೇಯರ್ ಆಫ್ ದಿ ಟೂರ್ನಮೆಂಟ್:

ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು. ಪ್ರಸ್ತುತ “ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಎಂದು ಹೆಸರಿಸಲಾಗಿದೆ. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..

ವರ್ಷ ಆಟಗಾರ ದೇಶ ಪ್ರದರ್ಶನ
1992 ಮಾರ್ಟಿನ್ ಕ್ರೋವ್ ನ್ಯೂಝಿಲೆಂಡ್ 456 ರನ್
1996 ಸನತ್ ಜಯಸೂರ್ಯ ಶ್ರೀಲಂಕಾ 221 ರನ್ ಮತ್ತು 6 ವಿಕೆಟ್
1999  ಲ್ಯಾನ್ಸ್ ಕ್ಲುಜ್ನರ್ ದಕ್ಷಿಣ ಆಫ್ರಿಕಾ 281 ರನ್ ಮತ್ತು 17 ವಿಕೆಟ್
2003 ಸಚಿನ್ ತೆಂಡೂಲ್ಕರ್ ಭಾರತ 673 ರನ್ ಮತ್ತು 2 ವಿಕೆಟ್
2007 ಗ್ಲೆನ್ ಮೆಕ್‌ಗ್ರಾತ್ ಆಸ್ಟ್ರೇಲಿಯಾ 26 ವಿಕೆಟ್‌ಗಳು
2011 ಯುವರಾಜ್ ಸಿಂಗ್ ಭಾರತ 362 ರನ್ ಮತ್ತು 15 ವಿಕೆಟ್
2015 ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ 22 ವಿಕೆಟ್
2019  ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ 578 ರನ್ ಮತ್ತು 2 ವಿಕೆಟ್

ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ:

ವಿಶ್ವಕಪ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..

ವರ್ಷ ಆಟಗಾರ ಪ್ರದರ್ಶನ
1975 ಕ್ಲೈವ್ ಲಾಯ್ಡ್ 102 ರನ್‌ಗಳು
1979 ವಿವಿಯನ್ ರಿಟಾರ್ಡ್ಸ್ 138* ರನ್‌ಗಳು
1983  ಮೊಹಿಂದರ್ ಅಮರನಾಥ್ 3 ವಿಕೆಟ್ ಮತ್ತು 26 ರನ್
1987 ಡೇವಿಡ್ ಬೂನ್ 75 ರನ್‌ಗಳು
1992 ವಾಸಿಂ ಅಕ್ರಮ್ 33 ರನ್​ ಮತ್ತು 3 ವಿಕೆಟ್
1996 ಅರವಿಂದ ಡಿಸಿಲ್ವಾ 107* ರನ್ ಮತ್ತು 3 ವಿಕೆಟ್
1999  ಶೇನ್ ವಾರ್ನ್ 4 ವಿಕೆಟ್​
2003 ರಿಕಿ ಪಾಂಟಿಂಗ್ 140* ರನ್​
2007 ಆ್ಯಡಂ ಗಿಲ್‌ಕ್ರಿಸ್ಟ್ 149 ರನ್‌
2011 ಮಹೇಂದ್ರ ಸಿಂಗ್ ಧೋನಿ 91* ರನ್‌
2015 ಜೇಮ್ಸ್ ಫಾಕ್ನರ್ 3 ವಿಕೆಟ್
2019 ಬೆನ್ ಸ್ಟೋಕ್ಸ್ 84* ರನ್‌

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ