ಸಂಜು ಬದಲು ವೈಭವ್​ಗೆ ಸಿಗುತ್ತಾ ಅವಕಾಶ? ತಂಡದಲ್ಲಿ 1 ಬದಲಾವಣೆ ಖಚಿತ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 2ನೇ T20 ಪಂದ್ಯ ಸೆಪ್ಟೆಂಬರ್ 15ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ ಗೆಲ್ಲುವ ಗುರಿಯಲ್ಲಿರುವ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ಬಗ್ಗೆ ಕುತೂಹಲವಿದೆ. ಗಾಯಗೊಂಡಿರುವ ವರುಣ್ ಚಕ್ರವರ್ತಿ ಬದಲಿಗೆ ರವಿ ಬಿಷ್ಣೋಯ್ ಆಡುವ ಸಾಧ್ಯತೆ ಇದೆ. ಸತತ ವೈಫಲ್ಯ ಅನುಭವಿಸುತ್ತಿರುವ ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಅವಕಾಶವೇ ಎಂಬ ಚರ್ಚೆ ನಡೆಯುತ್ತಿದೆ. ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಸಂಜು ಬದಲು ವೈಭವ್​ಗೆ ಸಿಗುತ್ತಾ ಅವಕಾಶ? ತಂಡದಲ್ಲಿ 1 ಬದಲಾವಣೆ ಖಚಿತ
ಟೀಂ ಇಂಡಿಯಾ

Updated on: Sep 14, 2026 | 10:11 PM

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 15 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡವು ಈಗ ಸರಣಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಆದರೆ ಅದಕ್ಕೂ ಮುನ್ನ ಈ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡು ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಬೇರೆಯವರು ಆಡುವುದು ಖಚಿತ. ವರುಣ್ ಜೊತೆಗೆ ಪ್ಲೇಯಿಂಗ್ 11 ನಿಂದ ಯಾರು ಹೊರಬೀಳಬಹುದು ಎಂಬುದನ್ನು ನೋಡುವುದಾದರೆ..

ಸಂಜು ಸ್ಯಾಮ್ಸನ್‌ಗೆ ಕೊನೆಯ ಅವಕಾಶ?

ಸತತ ಅವಕಾಶಗಳು ಸಿಗುತ್ತಿದ್ದರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ಸಂಜು ಸ್ಯಾಮ್ಸನ್​ರನ್ನು ಈ ಪಂದ್ಯದಿಂದ ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗುತ್ತದೆಯೇ ಎಂಬುದು ಪ್ರಶ್ನೆ. ಆದರೆ ಏಕೈಕ ಪಂದ್ಯದ ಬಳಿಕ ಸಂಜುರನ್ನು ಪ್ಲೇಯಿಂಗ್ 11ನಿಂದ ಕೈಬಿಡುವ ಸಾಧ್ಯತೆಗಳಿಲ್ಲ. ಹೀಗಾಗಿ ಮ್ಯಾನೇಜ್​ಮೆಂಟ್ ಎರಡನೇ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಬಹುದು. ಏಕೆಂದರೆ 2026 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಪಂದ್ಯಾವಳಿಯ ನಂತರ, ಸ್ಯಾಮ್ಸನ್ ಅವರ ಬ್ಯಾಟ್ ಮೌನವಾಗಿದ್ದು, ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 43 ರನ್‌ಗಳನ್ನು ಗಳಿಸಿದ್ದಾರೆ. ಆದಾಗ್ಯೂ ಸಂಜುಗೆ ಕೊನೆಯ ಅವಕಾಶ ಸಿಗುವುದಂತೂ ಖಚಿತ.

ಉಳಿದಂತೆ ಅಭಿಷೇಕ್ ಶರ್ಮಾ ಉತ್ತಮ ಫಾರ್ಮ್​ನಲ್ಲಿದ್ದು ಅವರು ಇನ್ನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಿದರೆ, ಆ ನಂತರ ನಾಯಕ ಶ್ರೇಯಸ್ ಅಯ್ಯರ್ ಬರಲಿದ್ದಾರೆ. ಉಪನಾಯಕ ತಿಲಕ್ ವರ್ಮಾ ಆಡುವುದು ಖಚಿತ. ಉಳಿದಂತೆ ಮೊದಲ ಪಂದ್ಯದಲ್ಲಿ ಇನ್ನ್ಯಾರಿಗೂ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ನಾಳೆಯೇ ಭಾರತ- ಅಫ್ಘನ್ 2ನೇ ಟಿ20 ಪಂದ್ಯ; ಎಷ್ಟು ಗಂಟೆಗೆ ಆರಂಭ?

ವರುಣ್ ಬದಲು ರವಿ

ಬೌಲಿಂಗ್ ವಿಭಾಗದ ವಿಚಾರಕ್ಕೆ ಬರುವುದಾದರೆ.. ಜಸ್ಪ್ರೀತ್ ಬುಮ್ರಾ ಎಂದಿನಂತೆ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ್ದ ಅರ್ಷದೀಪ್ ಆಡುವುದು ಖಚಿತ. ಆದಾಗ್ಯೂ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿಗೆ ಬದಲಿಯಾಗಿ ರವಿ ಬಿಷ್ಣೋಯಿ ಆಡುವ ಸಾಧ್ಯತೆಗಳಿವೆ. ಉಳಿದಂತೆ ತಂಡದಲ್ಲಿ ಯಾವ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ರವಿ ಬಿಷ್ಣೋಯಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Mon, 14 September 26

Loading...
Unable to load recommendations.
Follow Us