AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಬೌಂಡರಿ ತಡೆದು ಭಾರತದ ಗೆಲುವಿಗೆ ಮುನ್ನುಡಿ ಬರೆದ ಅಂಪೈರ್; ವಿಡಿಯೋ ನೋಡಿ

IND vs AUS: ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಅರ್ಷದೀಪ್ ಮಾಡಿದ ಕೊನೆಯ ಓವರ್​ ಕಾರಣವಾದರೆ, ಇನ್ನೊಂದು ರೀತಿಯಲ್ಲಿ ಸ್ಟ್ರೈಕ್ ಅಂಪೈರ್ ಕೂಡ ಭಾರತದ ಗೆಲುವಿಗೆ ಸಹಾಯ ಮಾಡಿದರು. ಅಲ್ಲದೆ ಚೆಂಡಿನಿಂದ ಸರಿಯಾಗಿ ಪೆಟ್ಟು ಕೂಡ ತಿಂದರು.

IND vs AUS: ಬೌಂಡರಿ ತಡೆದು ಭಾರತದ ಗೆಲುವಿಗೆ ಮುನ್ನುಡಿ ಬರೆದ ಅಂಪೈರ್; ವಿಡಿಯೋ ನೋಡಿ
ಬೌಂಡರಿ ತಡೆದ ಅಂಪೈರ್
ಪೃಥ್ವಿಶಂಕರ
|

Updated on:Dec 04, 2023 | 10:21 AM

Share

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆದ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಆಸ್ಟ್ರೇಲಿಯಾವನ್ನು (India vs Australia) ಸೋಲಿಸಿತು. ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿತು. ವಾಸ್ತವವಾಗಿ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಕೊನೆಯವರೆಗೂ ಗೆಲುವಿನ ಫೆವರೇಟ್ ಎನಿಸಿಕೊಂಡಿತ್ತು. ಆದರೆ ಕೊನೆಯ ಓವರ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ (Arshdeep Singh), ಆಸೀಸ್ ಗೆಲುವನ್ನು ಕಸಿದುಕೊಂಡರು. ಇನ್ನು ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಅರ್ಷದೀಪ್ ಮಾಡಿದ ಕೊನೆಯ ಓವರ್​ ಕಾರಣವಾದರೆ, ಇನ್ನೊಂದು ರೀತಿಯಲ್ಲಿ ಸ್ಟ್ರೈಕ್ ಅಂಪೈರ್ ಕೂಡ ಭಾರತದ ಗೆಲುವಿಗೆ ಸಹಾಯ ಮಾಡಿದರು. ಅಲ್ಲದೆ ಚೆಂಡಿನಿಂದ ಸರಿಯಾಗಿ ಪೆಟ್ಟು ಕೂಡ ತಿಂದರು.

ಆಕಸ್ಮಿಕವಾಗಿ ಬೌಂಡರಿ ತಡೆದ ಅಂಪೈರ್

ವಾಸ್ತವವಾಗಿ ಭಾರತ ನೀಡಿದ 160 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ನಾಯಕ ಮ್ಯಾಥ್ಯೂ ವೇಡ್ ಸ್ಟ್ರೈಕ್​ನಲ್ಲಿ ಇದ್ದಿದ್ದರಿಂದ ಆಸ್ಟ್ರೇಲಿಯಾ ಗೆಲುವು ಖಚಿತ ಎನಿಸಿತು. ಆದರೆ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ನೀಡದ ಅರ್ಷದೀಪ್, ಮೂರನೇ ಎಸೆತದಲ್ಲಿ ವೇಡ್ ಅವರನ್ನು ಔಟ್ ಮಾಡಿದರು. ಹೀಗಾಗಿ ಕೊನೆಯ 3 ಎಸೆತಗಳಲ್ಲಿ ಆಸೀಸ್​ಗೆ 10 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಟ್ರೈಕ್​ಗೆ ಬಂದ ಜೇಸನ್ ಬೆಹ್ರೆನ್ಡಾರ್ಫ್ ಸಿಂಗಲ್ ತೆಗೆದುಕೊಂಡರು. ಅಂತಿಮವಾಗಿ ಆಸೀಸ್ 2 ಎಸೆತಗಳಲ್ಲಿ 9 ರನ್ ಕಲೆಹಾಬೇಕಾಗಿತ್ತು.

IND vs AUS: ಬೆಂಗಳೂರಿನಲ್ಲಿ ಮೊದಲ ಬಾರಿಗೆ ತಲೆ ಬಾಗಿದ ಆಸ್ಟ್ರೇಲಿಯಾ..!

ಓವರ್​ನ ಐದನೇ ಎಸೆತವನ್ನು ಎದುರಿಸಿದ ನಾಥನ್ ಎಲ್ಲಿಸ್ ಬೌಲರ್ ತಲೆಯ ಮೇಲೆ ಬೌಂಡರಿ ಬಾರಿಸಲು ಯತ್ನಿಸಿದರು. ಚೆಂಡನ್ನು ತಡೆಯಲು ಅರ್ಷದೀಪ್ ಸಹ ಯತ್ನಿಸಿದರಾದರೂ ಚೆಂಡು ಅವರ ಕೈಗೆ ತಾಗಿ ಅಂಪೈರ್ ತೊಡೆಗೆ ತಗುಲಿತು. ಸ್ವಲ್ಪ ಸಮಯದವರೆಗೆ ನೋವಿನಿಂದ ಬಳಲಿದ ಅಂಪೈರ್ ನಂತರ ಚೇತರಿಸಿಕೊಂಡರು. ಅದೃಷ್ಟವಶಾತ್ ಅಂಪೈರ್‌ಗೆ ಗಂಭೀರ ಗಾಯವಾಗಲಿಲ್ಲ.

4 ರನ್ ಬರಬೇಕಾದಲ್ಲಿ ಕೇವಲ ಒಂದು ರನ್

ಆದರೆ ಇದರಿಂದ ಆಸ್ಟ್ರೇಲಿಯಾಕ್ಕೆ ಬರಬೇಕಾಗಿದ್ದ ಬೌಂಡರಿ ಕೈತಪ್ಪಿತು. ಈ ಚೆಂಡು ಅಂಪೈರ್​ಗೆ ತಾಕದೇ ಇದ್ದಿದ್ದರೆ ನೇರವಾಗಿ ಬೌಂಡರಿ ಸೇರುತ್ತಿತ್ತು. ಆದರೆ 4 ರನ್ ಬರಬೇಕಾದ ಜಾಗದಲ್ಲಿ ಕೇವಲ ಒಂದು ರನ್ ಬಂದಿತು. ಹೀಗಾಗಿ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 8 ರನ್ ಬೇಕಾಯಿತು. ಅರ್ಷದೀಪ್ ತಮ್ಮ ಕೊನೆಯ ಎಸೆತದಲ್ಲಿ ಒಂದೇ ಒಂದು ರನ್ ನೀಡಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಅಂಪೈರ್​ನಿಂದಾಗಿ ಚೆಂಡು ಬೌಂಡರಿ ದಾಟದಿರುವುದು ಆಸೀಸ್ ಆಟಗಾರರ ಅಸಮಾಧಾನಕ್ಕೆ ಕಾರಣವಾಯಿತು. ಎಲ್ಲಿಸ್ ಕೂಡ ಹತಾಶೆಯಿಂದ ನಮ್ಮ ಸೋಲಿಗೆ ನೀವೇ ಕಾರಣರೆಂಬಂತೆ ಅಂಪೈರ್ ಕಡೆ ನೋಡಿದರು.

ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನ

ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವಲ್ಲಿ ಮುಖೇಶ್ ಕುಮಾರ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಈ ಬಲಗೈ ವೇಗದ ಬೌಲರ್ ನಾಲ್ಕು ಓವರ್‌ಗಳಲ್ಲಿ 32 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ರವಿ ಬಿಷ್ಣೋಯ್ ನಾಲ್ಕು ಓವರ್‌ಗಳಲ್ಲಿ 29 ರನ್ ನೀಡಿ ಎರಡು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಉತ್ತಮ ಬೌಲಿಂಗ್ ಮಾಡಿ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Mon, 4 December 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ