IND vs AUS: ಭಾರತ ಪ್ರವಾಸಕ್ಕೂ ಮುನ್ನವೇ ಆಸೀಸ್​ಗೆ ಬಿಗ್ ಶಾಕ್; ತಂಡದ ಸ್ಟಾರ್ ವೇಗಿ ಮೊದಲ ಟೆಸ್ಟ್​ನಿಂದ ಔಟ್!

IND vs AUS: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ 18 ಸದಸ್ಯರ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದು, ಅದರಲ್ಲಿ 4 ಸ್ಪಿನ್ನರ್‌ಗಳನ್ನು ಹೊರತುಪಡಿಸಿ 6 ವೇಗದ ಬೌಲರ್‌ಗಳು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದ 6 ಬೌಲರ್‌ಗಳಲ್ಲಿ ಸ್ಟಾರ್ಕ್ ಕೂಡ ಒಬ್ಬರಾಗಿದ್ದಾರೆ.

IND vs AUS: ಭಾರತ ಪ್ರವಾಸಕ್ಕೂ ಮುನ್ನವೇ ಆಸೀಸ್​ಗೆ ಬಿಗ್ ಶಾಕ್; ತಂಡದ ಸ್ಟಾರ್ ವೇಗಿ ಮೊದಲ ಟೆಸ್ಟ್​ನಿಂದ ಔಟ್!
ಆಸ್ಟ್ರೇಲಿಯಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jan 11, 2023 | 3:08 PM

ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ (India vs Australia) ತನ್ನ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಆದರೆ ಪ್ರವಾಸ ಆರಂಭವಾಗುವ ಮುನ್ನವೇ ಕಾಂಗರೂಗಳಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಇಂಜುರಿಯಿಂದಾಗಿ ಮೊದಲ ಟೆಸ್ಟ್​ನಿಂದ ಹೊರಗುಳಿಯಲ್ಲಿದ್ದಾರೆ. ತನ್ನ ನೆಲದಲ್ಲಿಯೇ ಸರಣಿ ಸೋಲಿಗೆ ಈಗ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಆಗಮಿಸುತ್ತಿರುವ ಕಾಂಗರೂಗಳಿಗೆ ಸ್ಟಾರ್ಕ್​ ಅಲಭ್ಯತೆ ಕೊಂಚ ಹಿನ್ನಡೆ ಉಂಟು ಮಾಡಿದೆ. ವಾಸ್ತವವಾಗಿ, ಬಾರ್ಡರ್ ಗವಾಸ್ಕರ್ (Border Gavaskar Trophy) ಸರಣಿಯಲ್ಲಿ ಭಾರತ ಎರಡು ಬಾರಿ ಆಸ್ಟ್ರೇಲಿಯಾವನ್ನು ಸ್ವಂತ ಅವರ ನೆಲದಲ್ಲಿಯೇ ಸೋಲಿಸಿದೆ. ಹೀಗಾಗಿ ಭಾರತವನ್ನು ಭಾರತದಲ್ಲಿಯೇ ಸೋಲಿಸುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿರುವ ಆಸೀಸ್​ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಪಾತ್ರ ಮಹತ್ವದ್ದಾಗಿದೆ.

ಮೊದಲ ಟೆಸ್ಟ್​ನಿಂದ ಸ್ಟಾರ್ಕ್ ಔಟ್

ಮೊದಲ ಟೆಸ್ಟ್​ನಿಂದ ಸ್ಟಾರ್ಕ್​ ಹೊರಗುಳಿದಿರುವ ಸುದ್ದಿಯನ್ನು ಇದೀಗ ಆಸ್ಟ್ರೇಲಿಯಾ ದೃಢಪಡಿಸಿದ್ದು, ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಡುವುದಿಲ್ಲ. ಬೆರಳಿನ ಗಾಯದಿಂದಾಗಿ ಎಡಗೈ ಬೌಲರ್ ಸ್ಟಾರ್ಕ್ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿಕೊಂಡಿದೆ.

IND vs AUS: ಭಾರತ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ಬರೋಬ್ಬರಿ 4 ಸ್ಪಿನ್ನರ್‌ಗಳಿಗೆ ತಂಡದಲ್ಲಿ ಸ್ಥಾನ

ಎರಡನೇ ಟೆಸ್ಟ್​ಗೆ ತಂಡದಲ್ಲಿ ಎಂಟ್ರಿ

ಮೆಲ್ಬೋರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಆಡುವಾಗ ಸ್ಟಾರ್ಕ್ ಅವರ ಬೆರಳಿಗೆ ಗಾಯವಾಗಿತ್ತು. ಈ ಗಾಯದಿಂದಾಗಿ ಅವರು ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು. ಈಗ ಭಾರತ ವಿರುದ್ಧದ ಮೊದಲ ಟೆಸ್ಟ್​ನಿಂದ ಹೊರಗುಳಿಯುವ ಸ್ಟಾರ್ಕ್​, ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಪ್ರಕಟಿಸಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಗಾಯಗೊಂಡಿದ್ದ ಗ್ರೀನ್, ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂಬುದನ್ನು ಖಚಿತ ಪಡಿಸಿದೆ.

ಇದಕ್ಕೂ ಮೊದಲು ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ 18 ಸದಸ್ಯರ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದು, ಅದರಲ್ಲಿ 4 ಸ್ಪಿನ್ನರ್‌ಗಳನ್ನು ಹೊರತುಪಡಿಸಿ 6 ವೇಗದ ಬೌಲರ್‌ಗಳು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದ 6 ಬೌಲರ್‌ಗಳಲ್ಲಿ ಸ್ಟಾರ್ಕ್ ಕೂಡ ಒಬ್ಬರಾಗಿದ್ದಾರೆ.

ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡ

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾಮಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Wed, 11 January 23