IND vs AUS: ಮೂರೇ ದಿನದಲ್ಲಿ ಮುಗಿಯಲಿದೆ ಮೊದಲ ಟೆಸ್ಟ್: ಮ್ಯಾಥ್ಯೂ ಹೇಡನ್
IND vs AUS 1st Test: ಹೇಡನ್ ಅವರ ಹೇಳಿಕೆಯಂತೆ ಮೊದಲ ದಿನದಾಟದಲ್ಲೇ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಮುಕ್ತಾಯಗೊಳಿಸಿದೆ. 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿದೆ.
India vs Australia 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಆರಂಭವಾಗಿದೆ. ಇದರೊಂದಿಗೆ ವಿಸಿಎ ಮೈದಾನದ ಪಿಚ್ ಕುರಿತಾದ ಕುತೂಹಲಕ್ಕೂ ಕೂಡ ತೆರೆ ಬಿದ್ದಿದೆ. ನಿರೀಕ್ಷೆಯಂತೆ ಈ ಪಿಚ್‌ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಗಳು ವಿಜೃಂಭಿಸಿದ್ದಾರೆ. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಅನ್ನು ಕೇವಲ 177 ರನ್ಗಳಿಗೆ ಅಂತ್ಯಗೊಳಿಸಿದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ವರದಿ ನೀಡಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಪಂದ್ಯವು ಬೇಗನೆ ಕೊನೆಗೊಳ್ಳಲಿದೆ ಎಂಬ ಸೂಚನೆ ನೀಡಿದ್ದರು.
ಪಿಚ್ನ ಮೇಲ್ಮೈ ಬಗ್ಗೆ ವರದಿ ನೀಡಿದ್ದ ಹೇಡನ್, ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ವಿಭಿನ್ನ ರೀತಿಯಲ್ಲಿ ಅನುಕೂಲ ಪಡೆಯಲಿದ್ದಾರೆ. ವೇಗದ ಬೌಲರ್‌ಗಳು ಹಾರ್ಡ್ ಲೆಂಗ್ತ್‌ನೊಂದಿಗೆ ಬೌಲ್ ಮಾಡಿದರೆ ವಿಕೆಟ್ ಸಿಗಬಹುದು. ಹಾಗೆಯೇ ಸ್ಪಿನ್ನರ್‌ಗಳಿಗೆ ಈ ಪಿಚ್ ಸಹಕಾರಿಯಾಗಿರಲಿದೆ. ಹೀಗಾಗಿ ಇದೊಂದು ಟರ್ನಿಂಗ್ ಟ್ರ್ಯಾಕ್ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದರು.
ಅಷ್ಟೇ ಅಲ್ಲದೆ ಈ ಪಿಚ್‌ನಲ್ಲಿ ನಾಲ್ಕು ದಿನಗಳ ದಿನದಾಟ ನಡೆಯುವುದು ಕೂಡ ಅನುಮಾನ ಎಂದಿರುವ ಮ್ಯಾಥ್ಯೂ ಹೇಡನ್, ಮೊದಲ ಟೆಸ್ಟ್ ಪಂದ್ಯವು ಮೂರನೇ ದಿನದಲ್ಲಿ ಮುಗಿಯುವ ಸಾಧ್ಯತೆಯನ್ನು ಒತ್ತಿ ಹೇಳಿದ್ದಾರೆ.
ಇದೀಗ ಹೇಡನ್ ಅವರ ಹೇಳಿಕೆಯಂತೆ ಮೊದಲ ದಿನದಾಟದಲ್ಲೇ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಮುಕ್ತಾಯಗೊಳಿಸಿದೆ. 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೂ, ನಾಳೆ ಬೆಳಿಗ್ಗೆ ಸ್ಪಿನ್ ಬೌಲರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Team India: ಭರ್ಜರಿ ಜಯದೊಂದಿಗೆ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ
ಒಂದು ವೇಳೆ ಟೀಮ್ ಇಂಡಿಯಾದ ಮೊದಲ ಇನಿಂಗ್ಸ್ ಬೇಗನೆ ಮುಗಿದರೆ, ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ಸ್ಪಿನ್ ಮೋಡಿ ಮೂಲಕ ಭಾರತೀಯ ಬೌಲರ್‌ಗಳು ಕಟ್ಟಿಹಾಕುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಮೂರನೇ ಅಥವಾ ನಾಲ್ಕನೇ ದಿನದಾಟದಲ್ಲೇ ಪಂದ್ಯ ಮುಗಿಯಲಿದೆಯಾ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಮ್ಯಾಥ್ಯೂ ಹೇಡನ್ ಹೇಳಿದಂತೆ ಮೂರೇ ದಿನಕ್ಕೆ ಮೊದಲ ಟೆಸ್ಟ್ ಪಂದ್ಯ ಮುಗಿಯಲಿದೆಯಾ ಎಂಬುದು 2ನೇ ದಿನದಾಟದಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಕೆಎಲ್ ರಾಹುಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖವಾಜಾ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ , ಮ್ಯಾಟ್ ರೆನ್ಶಾ , ಪೀಟರ್ ಹ್ಯಾಂಡ್ಸ್ಕಾಂಬ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ನಾಥನ್ ಲಿಯಾನ್ , ಟಾಡ್ ಮರ್ಫಿ , ಸ್ಕಾಟ್ ಬೋಲ್ಯಾಂಡ್.