AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ವಿಶ್ರಾಂತಿಯಲ್ಲಿರುವ ರೋಹಿತ್- ಕೊಹ್ಲಿ ತಂಡವನ್ನು ಸೇರಿಕೊಳ್ಳುವುದು ಯಾವಾಗ?

IND vs AUS: ಏಷ್ಯಾಕಪ್ ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ಜೊತೆಗೆ ಇಬ್ಬರು ಬ್ಯಾಟರ್‌ಗಳಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಇದೀಗ ಅವರು ಭಾರತ ಕ್ರಿಕೆಟ್ ತಂಡದ ಶಿಬಿರವನ್ನು ಮತ್ತೆ ಸೇರುವ ಸಮಯ ಬಂದಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೆಪ್ಟೆಂಬರ್ 25, ಸೋಮವಾರ ರಾಜ್‌ಕೋಟ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

IND vs AUS: ವಿಶ್ರಾಂತಿಯಲ್ಲಿರುವ ರೋಹಿತ್- ಕೊಹ್ಲಿ ತಂಡವನ್ನು ಸೇರಿಕೊಳ್ಳುವುದು ಯಾವಾಗ?
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Sep 24, 2023 | 10:24 AM

Share

ಆಸ್ಟ್ರೇಲಿಯಾ ವಿರುದ್ಧದ (India vs Australia) 3 ಏಕದಿನ ಸರಣಿಯ ಎರಡನೇ ಪಂದ್ಯ ಇಂದು ಇಂದೋರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಸರಣಿ ಗೆಲ್ಲಲು ಪ್ರಯತ್ನಿಸಲಿದ್ದರೆ, ಇತ್ತ ಆಸ್ಟ್ರೇಲಿಯ ಸರಣಿಯಲ್ಲಿ ಡ್ರಾ ಸಾಧಿಸುವತ್ತ ಕಣ್ಣಿಟ್ಟಿದೆ. ಇದಕ್ಕೂ ಮೊದಲು ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಇನ್ನು ಇಂದೋರ್‌ನಲ್ಲಿ (Holkar Cricket Stadium, Indore) ಭಾರತ ಎರಡನೇ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದ್ದು, ಒಟ್ಟಾರೆ ಇದು ಇಲ್ಲಿ ಭಾರತದ 7ನೇ ಏಕದಿನ ಪಂದ್ಯವಾಗಿದೆ. ಈ ಪಂದ್ಯ ಮುಗಿಯುವುದರೊಂದಿಗೆ ಹಿರಿಯ ಆಟಗಾರರ ವಿಶ್ರಾಂತಿಯ ಅವಧಿಯೂ ಮುಗಿಯಲ್ಲಿದ್ದು, ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ತಂಡದ ಪ್ರಮುಖ ಆಟಗಾರರು ತಂಡವನ್ನು ಸೇರಿಕೊಳ್ಳುವ ತವಕದಲ್ಲಿದ್ದಾರೆ.

ಹಿರಿಯ ಆಟಗಾರರ ಆಗಮನ

ವಾಸ್ತವವಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇನ್ನು ಕೆಲವು ಆಗಾರರಿಗೆ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿತ್ತು. ಏಷ್ಯಾಕಪ್ ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ಜೊತೆಗೆ ಇಬ್ಬರು ಬ್ಯಾಟರ್‌ಗಳಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಇದೀಗ ಅವರು ಭಾರತ ಕ್ರಿಕೆಟ್ ತಂಡದ ಶಿಬಿರವನ್ನು ಮತ್ತೆ ಸೇರುವ ಸಮಯ ಬಂದಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೆಪ್ಟೆಂಬರ್ 25, ಸೋಮವಾರ ರಾಜ್‌ಕೋಟ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

‘ನಂ.1 ಪಟ್ಟ ಮುಖ್ಯವಲ್ಲ’; ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಕ್ಕೆ ಬುದ್ಧಿಮಾತು ಹೇಳಿದ ಗಂಭೀರ್

ರೋಹಿತ್​ಗೆ ನಾಯಕತ್ವ

ಸರಣಿಯ ಮೊದಲ 2 ಪಂದ್ಯಗಳಲ್ಲಿ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿದ್ದಾರೆ. ಆದರೆ ಪಂದ್ಯದ ಫಿಟ್‌ನೆಸ್ ಮತ್ತು ಸಿದ್ಧತೆಗಳ ಅಗತ್ಯವಿರುವುದರಿಂದ, ರೋಹಿತ್, ಕೊಹ್ಲಿ ಮತ್ತು ಹಾರ್ದಿಕ್ ಮೂವರ ತಂಡವು ಎರಡನೇ ಏಕದಿನ ಪಂದ್ಯದ ಒಂದು ದಿನದ ನಂತರ ಸೋಮವಾರ ತಂಡವನ್ನು ಸೇರಿಕೊಳ್ಳಲಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಎಂದಿನಂತೆ ಹಾರ್ದಿಕ್ ಪಾಂಡ್ಯ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದು, ಕಿಂಗ್ ಕೊಹ್ಲಿ ತಮ್ಮ ಅದ್ಭುತ ಫಾರ್ಮ್​ ಮುಂದುವರೆಸುವ ತವಕದಲ್ಲಿದ್ದಾರೆ.

ವಿಶ್ವಕಪ್ ಅಭ್ಯಾಸ ಪಂದ್ಯ ಆರಂಭ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ನಂತರ, ಭಾರತವು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3 ರಂದು ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಅಭ್ಯಾಸ ಪಂದ್ಯವನ್ನಾಡಲಿದೆ. ಅಂತಹ ದೊಡ್ಡ ಪಂದ್ಯಾವಳಿಯ ಮುಂದೆ ತಂಡವು ಹೇಗೆ ಆಡುತ್ತದೆ ಮತ್ತು ಪ್ರದರ್ಶನ ನೀಡುತ್ತದೆ ಎಂಬುದನ್ನು ಪರೀಕ್ಷಿಸಲು ಮೆನ್ ಇನ್ ಬ್ಲೂ ತಮ್ಮ ಪೂರ್ಣ ತಂಡವನ್ನು ಆಸೀಸ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆ ಇದೆ.

3ನೇ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ ಆಗಿದ್ದರೆ ), ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ