‘ಸಂಜುಗೆ ಭಾರತ ತಂಡದಲ್ಲಿ ಅವಕಾಶ ನೀಡದಿರುವ ನಿರ್ಧಾರ ಸರಿ ಇದೆ’; ಶ್ರೀಶಾಂತ್ ಅಚ್ಚರಿಯ ಹೇಳಿಕೆ

Sanju Samson: ಮುಂಬರುವ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾವನ್ನು ಪ್ರಕಟಿಸಿ ಈಗಾಗಲೇ ದಿನಗಳು ಕಳೆದಿವೆ. ಆದರೂ ತಂಡದ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟಿಗರಿಂದ ಅಪಸ್ವರ ಕೇಳಿಬರುತ್ತಲೇ ಇದೆ. ಅದರಲ್ಲೂ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್​ರನ್ನು ವಿಶ್ವಕಪ್ ಸೇರಿದಂತೆ ಏಷ್ಯನ್ ಗೇಮ್ಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗಿಟ್ಟಿರುವುದು ಮಾಜಿ ಆಟಗಾರರ ಕೋಪಕ್ಕೆ ಕಾರಣವಾಗಿದೆ.

‘ಸಂಜುಗೆ ಭಾರತ ತಂಡದಲ್ಲಿ ಅವಕಾಶ ನೀಡದಿರುವ ನಿರ್ಧಾರ ಸರಿ ಇದೆ’; ಶ್ರೀಶಾಂತ್ ಅಚ್ಚರಿಯ ಹೇಳಿಕೆ
ಸಂಜು ಸ್ಯಾಮ್ಸನ್, ಎಸ್ ಶ್ರೀಶಾಂತ್
Follow us
ಪೃಥ್ವಿಶಂಕರ
|

Updated on:Sep 24, 2023 | 12:45 PM

ಮುಂಬರುವ ಏಕದಿನ ವಿಶ್ವಕಪ್​ಗೆ (ODI World Cup 2023) ಟೀಂ ಇಂಡಿಯಾವನ್ನು ಪ್ರಕಟಿಸಿ ಈಗಾಗಲೇ ದಿನಗಳು ಕಳೆದಿವೆ. ಆದರೂ ತಂಡದ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟಿಗರಿಂದ ಅಪಸ್ವರ ಕೇಳಿಬರುತ್ತಲೇ ಇದೆ. ಅದರಲ್ಲೂ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್​ರನ್ನು (Sanju Samson) ವಿಶ್ವಕಪ್ ಸೇರಿದಂತೆ ಏಷ್ಯನ್ ಗೇಮ್ಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗಿಟ್ಟಿರುವುದು ಮಾಜಿ ಆಟಗಾರರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಆಯ್ಕೆ ಮಂಡಳಿಯನ್ನು ಗುರಿಯಾಗಿಸಿಕೊಂಡಿರುವ ಕ್ರಿಕೆಟ್ ಪಂಡಿತರು ಸಂಜು ಸ್ಯಾಮ್ಸನ್​ಗೆ ಆಯ್ಕೆ ಮಂಡಳಿ ಅನ್ಯಾಯ ಮಾಡಿದೆ ಎನ್ನುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಸ್ಯಾಮ್ಸನ್‌ ಅವರ ಸಹ ಆಟಗಾರ ಶ್ರೀಶಾಂತ್ (S. Sreesanth), ಆಯ್ಕೆ ಮಂಡಳಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ವಾಸ್ತವವಾಗಿ ದೇಶಿ ಕ್ರಿಕೆಟ್​ನಲ್ಲಿ ಸಂಜು ಸ್ಯಾಮ್ಸನ್ ಕೇರಳ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಇದೇ ರಾಜ್ಯದ ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಆಟಗಾರನಾದ ಶ್ರೀಶಾಂತ್ ಅವರು ಈಗ ಸಂಜು ಸ್ಯಾಮ್ಸನ್ ಬಗ್ಗೆ ಮಹತ್ವದ ವಿಷಯಗಳನ್ನು ಹೇಳಿದ್ದು, ಅವರು (ಸಂಜು) ತಮ್ಮೊಳಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಹುಲ್ ಆಗಮನವಾಗುತ್ತಿದ್ದಂತೆ ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!

ಇದು ಸರಿಯಾದ ನಿರ್ಧಾರ

ಸಂಜು ಸ್ಯಾಮ್ಸನ್ ಏಕದಿನ ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಮಾತನಾಡಿರುವ ಶ್ರೀಶಾಂತ್, ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಆಟಗಾರನು ತನ್ನನ್ನು ತಾನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಗವಾಸ್ಕರ್‌ ಅವರಿಂದ ಹಿಡಿದು ರವಿಶಾಸ್ತ್ರಿಯವರೆಗೆ ಎಲ್ಲರೂ ಸಂಜು ಅವರನ್ನು ಉತ್ತಮ ಆಟಗಾರನೆಂದು ಪರಿಗಣಿಸುತ್ತಾರೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರು ತಮ್ಮ ಆಟದ ವಿಧಾನವನ್ನು ಬದಲಾಯಿಸಬೇಕಾಗಿದೆ. ಏಕೆಂದರೆ ಯಾರಾದರೂ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಡಲು ಸಲಹೆ ನೀಡಿದರೆ, ಸಂಜು ಸಲಹೆ ನೀಡಿದವರ ಮಾತನ್ನು ಕೇಳುವುದಿಲ್ಲ. ಇದು ತಪ್ಪು. ಏಕೆಂದರೆ ನೀವು ತಂಡ ಮತ್ತು ವಿಕೆಟ್ ಪ್ರಕಾರ ಆಡಬೇಕಾಗುತ್ತದೆ.

10 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ

ಸಂಜುಗೆ ಅವಕಾಶ ಸಿಗದಿದ್ದಾಗ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಲಾಟೆ ಮಾಡುತ್ತಾರೆ. ನಾವಿಬ್ಬರು ಮಲಯಾಳಿಗಳಾಗಿರುವುದರಿಂದ ನಾನು ಕೂಡ ಸಂಜು ಅವರನ್ನು ಬೆಂಬಲಿಸುತ್ತೇನೆ. ಆದರೆ ಇದು ಪ್ರತಿ ಬಾರಿಯೂ ಸರಿಯಲ್ಲ. ಸಂಜುಗೆ ಟೀಮ್ ಇಂಡಿಯಾ ಪರ ಆಡಿದ ಅನುಭವವಿದೆ. ಹಾಗೆಯೇ 10 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ ಮತ್ತು ನಾಯಕರೂ ಆಗಿದ್ದಾರೆ. ಆದರೆ ಈ ಅವಧಿಯಲ್ಲಿ ಅವರು ಎಂದಿಗೂ ಸ್ಥಿರತೆಯನ್ನು ತೋರಿಸಿಲ್ಲ. ಇದು ಅವರನ್ನು ಕಡೆಗಣಿಸಲು ಕಾರಣವಾಗಿದೆ.

ವಾಸ್ತವವಾಗಿ ವಿಶ್ವಕಪ್ ತಂಡ ಅಥವಾ ಏಷ್ಯನ್ ಗೇಮ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿಲ್ಲ. ಅದಕ್ಕಾಗಿಯೇ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕೆಲವು ಪ್ರವಾಸಗಳಲ್ಲಿ ಸಂಜು ಸ್ಯಾಮ್ಸನ್ ಖಂಡಿತವಾಗಿಯೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಅವಕಾಶ ಪಡೆದರೂ, ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಸಂಜು ಭಾರತ ಪರ ಇದುವರೆಗೆ 13 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಕೇವಲ 390 ರನ್ ಕಲೆಹಾಕಿದ್ದಾರೆ. ಹಾಗೆಯೇ 24 ಟಿ20 ಪಂದ್ಯಗಳಲ್ಲಿ ಅವರು ಕೇವಲ 374 ರನ್ ಬಾರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Sun, 24 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್