IND vs AUS: ಆಸ್ಟ್ರೇಲಿಯಾ ವಿರುದ್ಧ ಜೂಲನ್ ಗೋಸ್ವಾಮಿ ದ್ವಿಶತಕ! ಈ ಸಾಧನೆ ಮಾಡಿದ ಮೊದಲ ಬೌಲರ್
IND vs AUS, WWC 2022: ಐಸಿಸಿ ಮಹಿಳಾ ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಪಂದ್ಯವು ಜೂಲನ್ ಗೋಸ್ವಾಮಿ ಅವರ ODI ವೃತ್ತಿಜೀವನದ 200 ನೇ ಪಂದ್ಯವಾಗಿದೆ. ಇಷ್ಟು ಏಕದಿನ ಪಂದ್ಯಗಳನ್ನು ಆಡಿದ ಮೊದಲ ಮಹಿಳಾ ಬೌಲರ್ ಆಗಿದ್ದಾರೆ.
ಜೂಲನ್ ಗೋಸ್ವಾಮಿ (Jhulan Goswami) ಮಹಿಳಾ ಕ್ರಿಕೆಟ್‌ನ ಅತ್ಯಂತ ಅನುಭವಿ ಆಟಗಾರ್ತಿ. ಈ ಕಾರಣದಿಂದಲೇ ಅವರು ಯಾವುದೇ ಪಂದ್ಯ ಆಡಲಿ, ಯಾವುದೇ ಸರಣಿ ಆಡಲಿ, ಖಂಡಿತಾ ಅವರ ಹೆಸರಿನಲ್ಲಿ ಕೆಲವು ದಾಖಲೆಗಳು ಸೃಷ್ಟಿಯಾಗುತ್ತವೆ. ಜೂಲನ್ ಐಸಿಸಿ ಮಹಿಳಾ ವಿಶ್ವಕಪ್ 2022 (ICC Women’s World Cup 2022)ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಈ ದಾಖಲೆ ಮಾಡಿದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವಿಸ್ಮಯಕಾರಿ ಸಂಗತಿಯೆಂದರೆ ಜೂಲನ್ ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡುವುದಕ್ಕೂ ಮುನ್ನವೆ ಈ ದಾಖಲೆ ಮಾಡಿದ್ದಾರೆ. ಆ ದಾಖಲೆ ಯಾವುದು, ಜೂಲನ್ ಗೋಸ್ವಾಮಿ ಯಾವ ದಾಖಲೆಗೆ ಕೊರಳೊಡ್ಡಿದ್ದಾರೆ ಎಂಬುದನ್ನು ನೋಡಬೇಕಿದೆ. ಈ ದಾಖಲೆಯು ಅತಿ ಹೆಚ್ಚು ODIಗಳನ್ನು ಆಡಿದ ಮಹಿಳಾ ಬೌಲರ್‌ಗೆ ಸಂಬಂಧಿಸಿದ್ದಾಗಿದ್ದು, ಜೂಲನ್ ಗೋಸ್ವಾಮಿ ಈ ವಿಷಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಜೂಲನ್ ಗೋಸ್ವಾಮಿ ದ್ವಿಶತಕ ಐಸಿಸಿ ಮಹಿಳಾ ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಪಂದ್ಯವು ಜೂಲನ್ ಗೋಸ್ವಾಮಿ ಅವರ ODI ವೃತ್ತಿಜೀವನದ 200 ನೇ ಪಂದ್ಯವಾಗಿದೆ. ಇಷ್ಟು ಏಕದಿನ ಪಂದ್ಯಗಳನ್ನು ಆಡಿದ ಮೊದಲ ಮಹಿಳಾ ಬೌಲರ್ ಆಗಿದ್ದಾರೆ. ಇದಕ್ಕೂ ಮೊದಲು ಆಡಿದ 199 ODIಗಳಲ್ಲಿ, ಅವರು 21.83 ಸರಾಸರಿಯಲ್ಲಿ 250 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ 31 ರನ್‌ಗಳಿಗೆ 6 ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಅವಧಿಯಲ್ಲಿ ಅವರು ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ.
? ?????? ??? ?? ???????! ? ?
Congratulations to the legendary #TeamIndia pacer @JhulanG10 as she plays her 2⃣0⃣0⃣th WODI! ? ? #CWC22 | #INDvAUS pic.twitter.com/jQvP25FwoX
— BCCI Women (@BCCIWomen) March 19, 2022
ಮಿಥಾಲಿ ನಂತರ ಜೂಲನ್ ಎರಡನೇ ಆಟಗಾರ್ತಿ ಜೂಲನ್ 200ನೇ ODI ಪಂದ್ಯವನ್ನು ಆಡಿದ ಮೊದಲ ಮಹಿಳಾ ಬೌಲರ್ ಆಗಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ODIಗಳನ್ನು ಆಡಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ಸಾಧನೆ ಜೂಲನ್ ಅವರ ಏಕೈಕ ಆಪ್ತ ಗೆಳತಿ ಹಾಗೂ ಟೀಂ ಇಂಡಿಯಾದ ಅನುಭವಿ ನಾಯಕಿ ಮಿಥಾಲಿ ರಾಜ್ ಹೆಸರಿನಲ್ಲಿದೆ. ಮಿಥಾಲಿ 229 ಪಂದ್ಯಗಳನ್ನು ಆಡಿದ್ದಾರೆ.
2022ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಜೂಲನ್ ಬ್ಯಾಗ್‌ನಲ್ಲಿ ಬಿದ್ದ ಮೂರನೇ ಸಾಧನೆ ಇದಾಗಿದೆ. 200 ಏಕದಿನ ಪಂದ್ಯಗಳನ್ನು ಆಡಿದ ಸಾಧನೆಗೂ ಮುನ್ನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. ಇದಲ್ಲದೆ ಈ ಬಾರಿಯ ವಿಶ್ವಕಪ್‌ನಲ್ಲಿ 250 ಏಕದಿನ ವಿಕೆಟ್‌ಗಳನ್ನು ಪಡೆದ ಸಾಧನೆಯನ್ನೂ ಮಾಡಿದ್ದಾರೆ.
2022ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯ ಜೂಲನ್ ಗೋಸ್ವಾಮಿ ಅವರ 200ನೇ ಏಕದಿನ ಪಂದ್ಯವಾಗಿತ್ತು. ಅಲ್ಲದೆ ಈ ಪಂದ್ಯ ಆಸ್ಟ್ರೇಲಿಯಾದ ಆಟಗಾರ್ತಿ ಬೆತ್ ಮೂನಿ ಅವರ ವೃತ್ತಿ ಜೀವನದ 50ನೇ ಏಕದಿನ ಪಂದ್ಯವೂ ಆಗಿತ್ತು.
ಇದನ್ನೂ ಓದಿ:IND W VS ENG W: ಮಹಿಳಾ ವಿಶ್ವಕಪ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ಜೂಲನ್ ಗೋಸ್ವಾಮಿ..!