RR, IPL 2022: ಬಲಿಷ್ಠ ಬ್ಯಾಟಿಂಗ್- ಬೌಲಿಂಗ್; ಯಾವ ಪ್ಲೇಯಿಂಗ್ 11 ನೊಂದಿಗೆ ಕಣಕ್ಕಿಳಿಯಲಿದೆ ರಾಜಸ್ಥಾನ?
Rajasthan Royals, IPL 2022: 2008 ರ ಚಾಂಪಿಯನ್ ರಾಜಸ್ಥಾನ ಕಳೆದ ತಿಂಗಳು ನಡೆದ ಎರಡು ದಿನಗಳ ಮೆಗಾ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಅತ್ಯುತ್ತಮ ಆಟಗಾರರನ್ನು ಖರೀದಿಸುವ ಮೂಲಕ ಉತ್ತಮ ತಂಡ ಕಟ್ಟಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಹೊಸ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಸೀಸನ್ ತುಂಬಾ ವಿಶೇಷವಾಗಿದ್ದು, ಏಕೆಂದರೆ ಈ ಬಾರಿ ಎಲ್ಲಾ ತಂಡಗಳು ಬದಲಾಗಿವೆ. ಕೆಲವು ಹಳೆಯ ಮತ್ತು ಬಹುತೇಕ ಹೊಸ ಮುಖಗಳೊಂದಿಗೆ ಮತ್ತೆ ಮೈದಾನಕ್ಕಿಳಿಯಲು ಎಲ್ಲಾ ತಂಡಗಳು ಸಿದ್ಧವಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಕೂಡ ಸಜ್ಜಾಗಿದೆ. ಪೂರ್ವಾಭ್ಯಾಸವಾಗಿ ಈ ತಂಡ ಆಫ್-ಸೀಸನ್ ಶಿಬಿರವನ್ನು ಸಹ ಆಯೋಜಿಸಿತು, ಇದರಲ್ಲಿ ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಅನೇಕ ಪ್ರಮುಖ ಆಟಗಾರರು ಭಾಗವಹಿಸಿದ್ದರು. ಸ್ಯಾಮ್ಸನ್ ಹೊರತುಪಡಿಸಿ, ರಾಜಸ್ಥಾನ ಇಂಗ್ಲೆಂಡ್ ದಂತಕಥೆ ಜೋಸ್ ಬಟ್ಲರ್ ಮತ್ತು ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಉಳಿಸಿಕೊಂಡಿತ್ತು. ನಂತರ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನೇ ತನ್ನ ಬದಳಿಕೆಗೆ ಹಾಕಿಕೊಂಡಿದೆ.
2008 ರ ಚಾಂಪಿಯನ್ ರಾಜಸ್ಥಾನ ಕಳೆದ ತಿಂಗಳು ನಡೆದ ಎರಡು ದಿನಗಳ ಮೆಗಾ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಅತ್ಯುತ್ತಮ ಆಟಗಾರರನ್ನು ಖರೀದಿಸುವ ಮೂಲಕ ಉತ್ತಮ ತಂಡ ಕಟ್ಟಿದೆ. ರಾಜಸ್ಥಾನ್ ರಾಯಲ್ಸ್ ಮಾರ್ಚ್ 29 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಬ್ಯಾಟಿಂಗ್ ಪರಿಪೂರ್ಣ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ತಂಡದ ಬ್ಯಾಟಿಂಗ್‌ನ ಆಧಾರ ಸ್ಯಾಮ್ಸನ್, ಬಟ್ಲರ್ ಮತ್ತು ಯಶಸ್ವಿ. ಕಳೆದ ಸೀಸನ್ ಮತ್ತು ಹರಾಜಿನ ನಂತರದ ಸೂಚನೆಗಳನ್ನು ಗಮನಿಸಿದರೆ, ಬಟ್ಲರ್ ಮತ್ತು ಯಶಸ್ವಿ ತಂಡದ ಆರಂಭಿಕರಾಗಿದ್ದರೆ, ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮೂರನೇ ಸ್ಥಾನದಲ್ಲಿರುತ್ತಾರೆ. ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಪ್ಟನ್ ಸ್ಯಾಮ್ಸನ್ ಬರಲಿದ್ದಾರೆ. ಇವರಲ್ಲದೆ, ಶಿಮ್ರಾನ್ ಹೆಟ್ಮೆಯರ್ ಕೂಡ ಆಡುವ XI ನ ಭಾಗವಾಗಲಿದ್ದಾರೆ.
ಆಲ್ ರೌಂಡರ್ ವಿಭಾಗದಲ್ಲಿ ಆಯ್ಕೆ ಕಡಿಮೆ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಈ ತಂಡ ಸ್ವಲ್ಪ ದುರ್ಬಲವಾಗಿದೆ. ತಂಡದಲ್ಲಿ ಜೇಮ್ಸ್ ನೀಶಮ್, ರಿಯಾನ್ ಪರಾಗ್ ಮತ್ತು ಡೇರಿಲ್ ಮಿಚೆಲ್ ಪ್ರಮುಖ ಆಲ್ ರೌಂಡರ್‌ಗಳಾಗಿದ್ದು, ರವಿಚಂದ್ರನ್ ಅಶ್ವಿನ್ ಕೂಡ ಈ ಪಾತ್ರದಲ್ಲಿದ್ದಾರೆ. ಆದಾಗ್ಯೂ, ಇದರಲ್ಲಿ ನೀಶಮ್, ಪರಾಗ್ ಮತ್ತು ಅಶ್ವಿನ್ ಮಾತ್ರ ಆಡುವ ಇಲೆವೆನ್ನಲ್ಲಿ ಅವಕಾಶ ಪಡೆಯಬಹುದು. ಏಕೆಂದರೆ ಈ ವಿಭಾಗದಲ್ಲಿ ಮಿಚೆಲ್ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ.
View this post on Instagram
ಬೌಲಿಂಗ್ ವಿಭಾಗ ಸ್ಟ್ರಾಂಗ್ ರಾಜಸ್ಥಾನದ ಬೌಲಿಂಗ್ ಉತ್ತಮವಾಗಿದೆ. ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಉದಯೋನ್ಮುಖ ಭಾರತೀಯ ವೇಗಿ ಪ್ರಸಿದ್ದ್ ಕೃಷ್ಣ ರೂಪದಲ್ಲಿ ಇಬ್ಬರು ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ. ನಂತರ ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಅಶ್ವಿನ್ ಇದ್ದಾರೆ. ನೀಶಮ್ ಅವರ ಮಧ್ಯಮ ವೇಗ ಮತ್ತು ರಿಯಾನ್ ಪರಾಗ್ ಅವರ ಪಾರ್ಟ್ ಟೈಮ್ ಸ್ಪಿನ್ ಒಟ್ಟಾಗಿ ಉಳಿದವರನ್ನು ಸರಿದೂಗಿಸಬಹುದು.
RR ತಂಡದ ಸಂಭಾವ್ಯ ಪ್ಲೇಯಿಂಗ್ XI ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಮ್ಸ್ ನೀಶಮ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ:Mark Wood Ruled Out: ಲಕ್ನೋ ಸೂಪರ್‌ಜೈಂಟ್ಸ್‌ಗೆ ಬಿಗ್ ಶಾಕ್! ಐಪಿಎಲ್ನಿಂದ ಹೊರಬಿದ್ದ ಪ್ರಮುಖ ಬೌಲರ್