
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಈ ಹಂತದವರೆಗೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಈ ವಿಶ್ವಕಪ್ನಲ್ಲಿ (ICC World Cup 2023) ನಾಲ್ಕನೇ ಪಂದ್ಯವನ್ನಾಡುತ್ತಿರುವ ರೋಹಿತ್ ಪಡೆ ಗೆಲುವಿನ ಸನಿಹದಲ್ಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿರುವ 256 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ಭಾರತದ ಆರಂಭಿಕರಿಬ್ಬರು 88 ರನ್ಗಳ ಜೊತೆಯಾಟ ನೀಡಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಅರ್ಧಶತಕ ವಂಚಿತರಾದರೆ, ಮತ್ತೊಬ್ಬ ಆರಂಭಿಕ ಶುಭ್ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ವೇಳೆ ಶುಭ್ಮನ್ ಗಿಲ್ (Shubman Gill) ಬಾರಿಸಿದ ಸಿಕ್ಸರ್ಗೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ನೀಡಿದ ಪ್ರತಿಕ್ರಿಯೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದ ಗಿಲ್, ನಂತರ ರೋಹಿತ್ರಂತೆ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಇದೇ ವೇಳೆ ಭಾರತದ ಇನ್ನಿಂಗ್ಸ್ನ 4ನೇ ಓವರ್ 4ನೇ ಎಸೆತವನ್ನು ಎದುರಿಸಿದ ಗಿಲ್, ಆ ಎಸೆತವನ್ನು ಲಾಂಗ್ ಆಫ್ನಲ್ಲಿ ಸೀದಾ ಸಿಕ್ಸರ್ಗಟ್ಟಿದರು. ಗಿಲ್ ಅವರ ಈ ಸಿಕ್ಸರ್ಗೆ ಇಡೀ ಮೈದಾನವೇ ಹುಚ್ಚೆದು ಕುಣಿಯಿತು. ಅದರಲ್ಲೂ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರುವ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಚಪ್ಪಾಳೆ ತಟ್ಟುತ್ತ ನಗುವಿನೊಂದಿಗೆ ಸಂಭ್ರಮಾಚರಣೆ ಮಾಡಿದರು. ಸಾರಾ ನೀಡಿರುವ ಈ ರಿಯಾಕ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ತಂಡ ಸೇರಿಕೊಳ್ಳಲು ಅಹಮದಾಬಾದ್ ತಲುಪಿದ ಶುಭ್ಮನ್ ಗಿಲ್; ಪಾಕ್ ವಿರುದ್ಧ ಕಣಕ್ಕೆ?
ಬಾಂಗ್ಲಾ ಇನಿಂಗ್ಸ್ನ 38ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಗಿಲ್ ತೌಹೀದ್ ಹೃದಯ್ ಅವರ ಕ್ಯಾಚ್ ಪಡೆದರು. ಈ ಕ್ಯಾಚ್ನ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ. ಶಾರ್ದೂಲ್ ಬೌಲ್ ಮಾಡಿದ ಓವರ್ನ ಎರಡನೇ ಎಸೆತವನ್ನು ಹೃದಯ್, ಲೆಗ್ ಸೈಡ್ನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ನ ಮೇಲ್ಭಾಗಕ್ಕೆ ಬಡಿದು ಗಾಳಿಯಲ್ಲಿ ಹೋಗಿ ನೇರವಾಗಿ ಶುಭ್ಮನ್ ಗಿಲ್ ಕೈ ಸೇರಿತು. ಆಗಲೂ ಸಹ ಸಾರಾ ಚಪ್ಪಾಳೆ ತಟ್ಟುವ ಮೂಲಕ ಗೆಳೆಯರೊಂದಿಗೆ ಸಂಭ್ರಮಿಸಿದ್ದರು.
ವಾಸ್ತವವಾಗಿ ಸಾರಾ ತೆಂಡೂಲ್ಕರ್ ಅವರ ವಿಡಿಯೋ ಈ ಪರಿ ವೈರಲ್ ಆಗಲು ಕಾರಣವೂ ಇದೆ. ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಬಹಳ ದಿನಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಇಬ್ಬರು ಸಹ ಹೋಟೆಲ್ಗಳಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಹಲವರ ಮಾತಾಗಿದೆ. ಆದರೆ ಈ ವದಂತಿಯ ಬಗ್ಗೆ ಈ ಇಬ್ಬರು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ