ಅತ್ಯಂತ ಹೀನಾಯ ದಾಖಲೆಯನ್ನು ಇಂಗ್ಲೆಂಡ್ಗೆ ವರ್ಗಾಯಿಸಿದ ಟೀಮ್ ಇಂಡಿಯಾ
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಸರಣಿಯ ಮೊದಲೆರಡು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 4 ವಿಕೆಟ್ಗಳ ಗೆಲುವು ದಾಖಲಿಸಿದ್ದ ಭಾರತ ತಂಡವು, ದ್ವಿತೀಯ ಪಂದ್ಯದಲ್ಲೂ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 300+ ಸ್ಕೋರ್ಗಳಿಸಿ ಸೋತ ತಂಡವೆಂಬ ಹಣೆಪಟ್ಟಿ ಟೀಮ್ ಇಂಡಿಯಾ ಹೆಸರಿಗಿತ್ತು. ಆದರೆ ಈ ಹಣೆಪಟ್ಟಿಯಲ್ಲಿ ಭಾರತ ತಂಡ ಕಳಚಿದೆ. ಅದು ಕೂಡ ಇಂಗ್ಲೆಂಡ್ಗೆ ಸೋಲುಣಿಸಿ, ಆ ಹೀನಾಯ ದಾಖಲೆಯನ್ನು ಆಂಗ್ಲರ ಹೆಸರಿಗೆ ವರ್ಗಾಯಿಸುವ ಮೂಲಕ ಎಂಬುದು ವಿಶೇಷ.
ಹೌದು, ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಅತೀ ಹೆಚ್ಚು ಬಾರಿ 300+ ರನ್ಗಳಿಸಿ ಸೋತ ತಂಡವೆಂಬ ಹೀನಾಯ ದಾಖಲೆಯೊಂದನ್ನು ಬರೆದಿತ್ತು. ಭಾರತ ತಂಡವು 136 ಬಾರಿ 300 ಕ್ಕೂ ಅಧಿಕ ರನ್ಗಳಿಸಿದೆ. ಈ ವೇಳೆ 27 ಬಾರಿ ಸೋಲುಂಡಿದೆ. ಹೀಗೆ ಅತ್ಯಧಿಕ ಬಾರಿ 300+ ರನ್ಗಳಿಸಿ ಸೋತ ತಂಡವೆಂಬ ಹಣೆಪಟ್ಟಿ ಟೀಮ್ ಇಂಡಿಯಾ ಹೆಸರಿಗಿತ್ತು.
ಆದರೆ ಕಟಕ್ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವುದರೊಂದಿಗೆ ಈ ಹೀನಾಯ ದಾಖಲೆ ಇಂಗ್ಲೆಂಡ್ ತಂಡದ ಪಾಲಾಗಿದೆ. ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 305 ರನ್ಗಳನ್ನು ಬೆನ್ನತ್ತಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300+ ಸ್ಕೋರ್ಗಳಿಸಿ ಅತೀ ಹೆಚ್ಚು ಬಾರಿ ಸೋತ ತಂಡವೆಂಬ ಅಪಕೀರ್ತಿ ಇಂಗ್ಲೆಂಡ್ ಪಾಲಾಯಿತು. ಆಂಗ್ಲರು 99 ಪಂದ್ಯಗಳಲ್ಲಿ 300 ಕ್ಕೂ ಅಧಿಕ ಸ್ಕೋರ್ ಗಳಿಸಿದ್ದಾರೆ. ಈ ವೇಳೆ 28 ಬಾರಿ ಸೋಲುವ ಮೂಲಕ 300+ ಸ್ಕೋರ್ಗಳಿಸಿ ಅತ್ಯಧಿಕ ಬಾರಿ ಸೋಲುಂಡ ಹಣೆಪಟ್ಟಿಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಭಾರತದಲ್ಲಿ ಮುಂದುವರೆದ ಇಂಗ್ಲೆಂಡ್ ತಂಡದ 41 ವರ್ಷಗಳ ಗೆಲುವಿನ ಕನಸು
ಅತ್ಯಧಿಕ ಬಾರಿ 300+ ಸ್ಕೋರ್ಗಳಿಸಿ ಸೋಲುಂಡ ತಂಡಗಳು:
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300+ ಸ್ಕೋರ್ಗಳಿಸಿ ಅತೀ ಹೆಚ್ಚು ಬಾರಿ ಸೋತ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದೆ. ಇನ್ನು ನಂತರದ ಸ್ಥಾನದಲ್ಲಿ ಭಾರತ ತಂಡವಿದೆ.
- ಇಂಗ್ಲೆಂಡ್ ತಂಡವು 99 ಪಂದ್ಯಗಳಲ್ಲಿ 300+ ಸ್ಕೋರ್ಗಳಿಸಿದ್ದು, ಈ ವೇಳೆ 28 ಬಾರಿ ಸೋಲನುಭವಿಸಿದೆ.
- ಭಾರತ ತಂಡವು 136 ಪಂದ್ಯಗಳಲ್ಲಿ 300 ಕ್ಕಿಂತ ಅಧಿಕ ಸ್ಕೋರ್ಗಳಿಸಿದೆ. ಈ ವೇಳೆ 27 ಬಾರಿ ಸೋಲುಂಡಿದೆ.
- ವೆಸ್ಟ್ ಇಂಡೀಸ್ ತಂಡವು 62 ಪಂದ್ಯಗಳಲ್ಲಿ 300+ ಸ್ಕೋರ್ಗಳಿಸಿದ್ದು, ಈ ವೇಳೆ 23 ಬಾರಿ ಸೋಲನುಭವಿಸಿದೆ.
- ಶ್ರೀಲಂಕಾ ತಂಡ 87 ಪಂದ್ಯಗಳಲ್ಲಿ 300 ಕ್ಕೂ ಅಧಿಕ ಸ್ಕೋರ್ ಕಲೆಹಾಕಿದೆ. ಈ ವೇಳೆ 19 ಪಂದ್ಯಗಳಲ್ಲಿ ಪರಾಜಯಗೊಂಡಿದೆ.
