AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಮೂರನೇ ಟೆಸ್ಟ್​ಗೆ ರಾಹುಲ್- ಜಡೇಜಾ ಲಭ್ಯ; ಇಡೀ ಸರಣಿಗೆ ಕೊಹ್ಲಿ ಡೌಟ್! ವರದಿ

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್​ಕೋಟ್​ನಲ್ಲಿ ನಡೆಯಲ್ಲಿದೆ. ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಈ ಮೂವರ ಬಗ್ಗೆ ಬಿಗ್ ಅಪ್‌ಡೇಟ್‌ ಹೊರಬಿದ್ದಿದೆ.

IND vs ENG: ಮೂರನೇ ಟೆಸ್ಟ್​ಗೆ ರಾಹುಲ್- ಜಡೇಜಾ ಲಭ್ಯ; ಇಡೀ ಸರಣಿಗೆ ಕೊಹ್ಲಿ ಡೌಟ್! ವರದಿ
ಕೊಹ್ಲಿ, ರಾಹುಲ್, ಜಡೇಜಾ
ಪೃಥ್ವಿಶಂಕರ
|

Updated on:Feb 07, 2024 | 9:07 PM

Share

ಭಾರತ ಮತ್ತು ಇಂಗ್ಲೆಂಡ್ (India vs Englans) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್​ಕೋಟ್​ನಲ್ಲಿ ನಡೆಯಲ್ಲಿದೆ. ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಕದನಕ್ಕೆ ಇನ್ನು ವಾರಕ್ಕೂ ಅಧಿಕ ಸಮಯವಿದೆ. ಹೀಗಾಗಿ ಎರಡನೇ ಟೆಸ್ಟ್ ಆಡಿ ಮುಗಿಸಿದ ಬಳಿಕ ಇಂಗ್ಲೆಂಡ್​ ತಂಡ ಅಬುದಾಬಿಗೆ ಪ್ರಯಾಣ ಬೆಳೆಸಿದೆ. ಇತ್ತ ಟೀಂ ಇಂಡಿಯಾ (Team India) ತನ್ನ ತಯಾರಿಯಲ್ಲಿ ನಿರತವಾಗಿದ್ದು, ಬಲಿಷ್ಠ ಪಡೆಯೊಂದಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಇರಾದೆಯಲ್ಲಿದೆ. ಈ ನಡುವೆ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಇಬ್ಬರು ಆಟಗಾರರಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ಕೆಎಲ್ ರಾಹುಲ್ (KL Rahul)  ಮತ್ತು ವಿರಾಟ್ ಕೊಹ್ಲಿಯ (Virat Kohli) ಲಭ್ಯತೆಯ ಬಗ್ಗೆ ಬಿಗ್ ಅಪ್‌ಡೇಟ್‌ ಹೊರಬಿದ್ದಿದೆ.

ಜಡೇಜಾ- ರಾಹುಲ್ ಫಿಟ್?

ವಾಸ್ತವವಾಗಿ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಈ ಇಬ್ಬರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಗಾಯಗೊಂಡಿದ್ದ ಈ ಇಬ್ಬರು ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ನಲ್ಲಿದ್ದರು. ಇದೀಗ ESPNcricinfo ವರದಿ ಮಾಡಿರುವ ಪ್ರಕಾರ ಈ ಇಬ್ಬರು ಆಟಗಾರರು ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

IND vs ENG: ಮೂರನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ‘ಔಟ್’..! ವರದಿ

ಮೇಲೆ ಹೇಳಿದಂತೆ ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನು 8 ದಿನಗಳ ಸಮಯವಿದೆ . ಅಂದರೆ ಫೆಬ್ರವರಿ 15 ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಹೀಗಾಗಿ ಚೇತರಿಕೆಯ ಹಾದಿಯಲ್ಲಿರುವ ಈ ಇಬ್ಬರು ಆಟಗಾರರು ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದು ತಂಡಕ್ಕೆ ಆಯ್ಕೆಗೆ ಲಭ್ಯವಿರುತ್ತಾರೆ ಎಂಬ ಪೂರ್ಣ ಭರವಸೆಯನ್ನು ತಂಡದ ಆಯ್ಕೆ ಮಂಡಳಿ ಇಟ್ಟುಕೊಂಡಿದೆ. ಈ ಇಬ್ಬರ ಪುನರಾಗಮನ ತಂಡಕ್ಕೆ ಆನೆಬಲವನ್ನೇ ನೀಡಲಿದೆ. ಏಕೆಂದರೆ ಈ ಇಬ್ಬರು ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿ, ಅರ್ಧಶತಕದ ಇನ್ನಿಂಗ್ಸ್ ಸಹ ಆಡಿದ್ದರು.

ಟೆಸ್ಟ್‌ ಸರಣಿಯಿಂದ  ಕೊಹ್ಲಿ ಔಟ್?

ಈ ಇಬ್ಬರ ಹೊರತಾಗಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಅದರ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗಳು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ತಂಡದಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ. ಇದೀಗ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿರುವ ಪ್ರಕಾರ ಕೊಹ್ಲಿ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಬಹುದು ಎಂದು ತಿಳಿದುಬಂದಿದೆ. ಇದಲ್ಲದೆ ಕೊಹ್ಲಿ ಐದನೇ ಟೆಸ್ಟ್‌ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Wed, 7 February 24