ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಆರಂಭಿಸಿರುವ ಟೀಂ ಇಂಡಿಯಾಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ 11 ಓವರ್ಗಳಲ್ಲಿಯೇ ಕಿವೀಸ್ ತಂಡದ ಪ್ರಮುಖ 5 ವಿಕೆಟ್ಗಳು ಉರುಳಿವೆ. ಇತ್ತ ಕಿವೀಸ್ ಪಡೆಗೆ ಸಿಂಹಸ್ವಪ್ನರಾಗಿರುವ ಟೀಂ ಇಂಡಿಯಾ ವೇಗಿಗಳು ತಮ್ಮ ಅದ್ಭುತ ಬೌಲಿಂಗ್ನಿಂದಾಗಿ ಕಿವೀಸ್ ಬ್ಯಾಟರ್ಗಳಿಗೆ ಮೈದಾನದಲ್ಲಿ ನಿಲ್ಲಲೂ ಹೆಚ್ಚಿನ ಸಮಯ ನೀಡುತ್ತಿಲ್ಲ. ಇದೇ ವೇಳೆ ಅದ್ಭುತ ಬೌಲಿಂಗ್ ಜೊತೆಗೆ ಅದ್ಭುತ ಫಿಲ್ಡಿಂಗ್ ಮಾಡಿ ಕಿವೀಸ್ ಆರಂಭಿಕನ ವಿಕೆಟ್ ಉರುಳಿಸಿದ ಪಾಂಡ್ಯ ಅವರ ಕ್ಯಾಚ್ ಇದೀಗ ಪಂದ್ಯದ ಹೈಲೇಟ್ ಆಗಿದೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಇನ್ನೊಂದು ತುದಿಯಲ್ಲಿ ಭದ್ರವಾಗಿ ನೆಲೆಯೂರುವ ಸೂಚನೆ ನೀಡುತ್ತಿದ್ದ ಕಿವೀಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ (Devon Conway) ಆಡಿದ ಸ್ಟ್ರೈಟ್ ಡ್ರೈವ್ ಶಾಟನ್ನು ಕ್ಯಾಚ್ ಆಗಿ ಪರಿವರ್ತಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಕ್ಷಣ ಕಾಲ ಇಡೀ ಕ್ರೀಡಾಂಗಣವೇ ಸೈಲೆಂಟ್ ಆಗುವಂತೆ ಮಾಡಿದರು.
ವಾಸ್ತವವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಟೀಂ ಇಂಡಿಯಾ ವೇಗಿಗಳು ಕಿವೀಸ್ ಬ್ಯಾಟರ್ಗಳನ್ನು ಎರಡಂಕಿ ದಾಟಲು ಅವಕಾಶ ನೀಡಲಿಲ್ಲ. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ ಹಾಗೂ ಫಿನ್ ಅಲೆನ್ಗೆ ಖಾತೆ ತೆರೆಯಲೂ ಕೂಡ ಶಮಿ ಅವಕಾಶ ನೀಡಲಿಲ್ಲ. ಮೊದಲ ಓವರ್ನ 5ನೇ ಎಸೆತದಲ್ಲಿಯೇ ಅಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
IND vs NZ: ಟಾಸ್ ಗೆದ್ದ ಬಳಿಕ ಏನು ಮಾಡಬೇಕು ಎಂಬುದನ್ನೇ ಮರೆತ ನಾಯಕ ರೋಹಿತ್; ವಿಡಿಯೋ ನೋಡಿ
ಬಳಿಕ ಬಂದ ಹೆನ್ರಿ ನಿಕೋಲ್ಸ್ಗೆ ಆರನೇ ಓವರ್ನ 3ನೇ ಎಸೆತದಲ್ಲಿ ಮೊಹಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇತ್ತ 4ನೇ ಆಟಗಾರನಾಗಿ ಕಣಕ್ಕಿಳಿದ ಮಿಚೆಲ್ ಕೂಡ 1 ರನ್ಗಳಿಗೆ ಸುಸ್ತಾಗಿ, ಶಮಿ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ನಾಯಕ ಟಾಮ್ ಲೇಥಮ್ ಜೊತೆಗೂಡಿ ಬಿಗ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡುತ್ತಿದ್ದ ಡೆವೊನ್ ಕಾನ್ವೇಗೆ ಹಾರ್ದಿಕ್ ವಿಲನ್ ಆದರು.
????. ?. ?????! ?
Talk about a stunning grab! ? ?@hardikpandya7 took a BEAUT of a catch on his own bowling ? #TeamIndia | #INDvNZ | @mastercardindia pic.twitter.com/saJB6FcurA
— BCCI (@BCCI) January 21, 2023
ಹಾರ್ದಿಕ್ ಪಾಂಡ್ಯ ಎಸೆದ 10ನೇ ಓವರ್ನ 4ನೇ ಎಸೆತ ಡೆವೊನ್ ಕಾನ್ವೆ ಅವರ ಬ್ಯಾಟ್ಗೆ ತಾಗಿದ ನಂತರ ನೇರವಾಗಿ ಹಾರ್ದಿಕ್ ಪಾಂಡ್ಯ ಕಡೆಗೆ ವೇಗವಾಗಿ ಬಂದಿತು. ಕೂಡಲೇ ಎಚ್ಚೆತ್ತುಕೊಂಡ ಪಾಂಡ್ಯ ತನ್ನ ಎಡಗೈಯಲ್ಲಿ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚನ್ನು ಪೂರ್ಣಗೊಳಿಸಿದರು. ಇದೀಗ ಈ ಸುದ್ದಿ ಬರೆಯುವ ವೇಳೆಗೆ ಕಿವೀಸ್ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ 60 ರನ್ ಗಳಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sat, 21 January 23