IND vs NZ: ಮೈಕಲ್ ವಾನ್​ಗೆ ಹಬ್ಬದೂಟ; ಒಂದೇ ಸಾಲಿನಲ್ಲಿ ಟೀಂ ಇಂಡಿಯಾ ಕಾಲೆಳೆದ ಇಂಗ್ಲೆಂಡ್‌ ಪ್ಲೇಯರ್

IND vs NZ: ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ಆಲೌಟ್ ಆಗಿದ್ದಕ್ಕೆ ಮಾಜಿ ಕ್ರಿಕೆಟಿಗರು ಕೂಡ ರೋಹಿತ್ ಪಡೆಯನ್ನು ಜರಿಯುವ ಕೆಲಸ ಮಾಡಿದ್ದರು. ಅದರಲ್ಲೂ ಟೀಂ ಇಂಡಿಯಾವನ್ನು ಕಾಲೆಳೆಯುವುದಕ್ಕೆ ಸದಾ ಕಾಯುವ ಇಂಗ್ಲೆಂಡ್​ನ ಮಾಜಿ ಆಟಗಾರ ಮೈಕಲ್ ವಾನ್ ತಮ್ಮ ಒಂದು ಸಾಲಿನ ಟ್ವೀಟ್ ಮೂಲಕ ಟೀಂ ಇಂಡಿಯಾವನ್ನು ಗುರಿಯಾಗಿಸಿಕೊಂಡಿದ್ದಾರೆ.

IND vs NZ: ಮೈಕಲ್ ವಾನ್​ಗೆ ಹಬ್ಬದೂಟ; ಒಂದೇ ಸಾಲಿನಲ್ಲಿ ಟೀಂ ಇಂಡಿಯಾ ಕಾಲೆಳೆದ ಇಂಗ್ಲೆಂಡ್‌ ಪ್ಲೇಯರ್
ಮೈಕಲ್ ವಾನ್
Follow us
|

Updated on:Oct 18, 2024 | 11:38 AM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 46 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿತ್ತು. ತಂಡದ ಈ ಕಳಪೆ ಪ್ರದರ್ಶನದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ತಂಡದ ಮಾಜಿ ಆಟಗಾರರಿಂದ ಹಿಡಿದು ಟೀಂ ಇಂಡಿಯಾ ಅಭಿಮಾನಿಗಳವರೆಗೆ ಎಲ್ಲರೂ ತಂಡದ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ವಿರೋಧಿಸಿದ್ದರು. ಆ ಬಳಿಕ ತಂಡ ಕೇವಲ 46 ರನ್​ಗಳಿಗೆ ಆಲೌಟ್ ಆಗಿದ್ದು, ನೆಟ್ಟಿಗರಿಗೆ ಹಬ್ಬದೂಟ ಸಿಕ್ಕಂತ್ತಾಗಿತ್ತು. ಹೀಗಾಗಿ ತರಹೆವಾರಿ ಮೀಮ್ಸ್​ಗಳೊಂದಿಗೆ ಟೀಂ ಇಂಡಿಯಾದ ಕಾಲೆಳೆದಿದ್ದರು. ಮಾಜಿ ಕ್ರಿಕೆಟಿಗರು ಕೂಡ ರೋಹಿತ್ ಪಡೆಯನ್ನು ಜರಿಯುವ ಕೆಲಸ ಮಾಡಿದ್ದರು. ಅದರಲ್ಲೂ ಟೀಂ ಇಂಡಿಯಾವನ್ನು ಕಾಲೆಳೆಯುವುದಕ್ಕೆ ಸದಾ ಕಾಯುವ ಇಂಗ್ಲೆಂಡ್​ನ ಮಾಜಿ ಆಟಗಾರ ಮೈಕಲ್ ವಾನ್ ತಮ್ಮ ಒಂದು ಸಾಲಿನ ಟ್ವೀಟ್ ಮೂಲಕ ಟೀಂ ಇಂಡಿಯಾವನ್ನು ಗುರಿಯಾಗಿಸಿಕೊಂಡಿದ್ದಾರೆ.

ಕನಿಷ್ಠ 36 ರನ್‌ ದಾಟಿದ್ದಾರೆ

ಟೀಂ ಇಂಡಿಯಾವನ್ನು ಸದಾ ಟಾರ್ಗೆಟ್ ಮಾಡುವ ಮೈಕಲ್ ವಾನ್ ಮತ್ತೊಮ್ಮೆ ಭಾರತೀಯ ಬ್ಯಾಟ್ಸ್‌ಮನ್‌ಗಳ ನಾಚಿಕೆಗೇಡಿನ ಪ್ರದರ್ಶನದ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವೀಟ್​ನಲ್ಲಿ ‘ಭಾರತೀಯ ಅಭಿಮಾನಿಗಳೇ, ಇದರಲ್ಲಿ ಒಳ್ಳೆಯದನ್ನು ನೋಡಲು ಪ್ರಯತ್ನಿಸಿ. ಕನಿಷ್ಠ 36 ರನ್‌ಗಳನ್ನು ದಾಟಲು ನಿಮ್ಮ ತಂಡ ಯಶಸ್ವಿಯಾಗಿದೆ’ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. ಅಂದರೆ ತಮ್ಮ ಕುಚೇಷ್ಟೇಯ ಮಾತಿನಿಂದಲೇ ಟೀಂ ಇಂಡಿಯಾವನ್ನು ತೆಗಳಿರುವ ವಾನ್, ಕನಿಷ್ಠ ಪಕ್ಷ ನಿಮ್ಮ ತಂಡ 36 ರನ್​ಗಳ ತನ್ನ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆಯಲ್ಲ ಎಂದು ಸಂತೋಷ ಪಡಿ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಡಿಮೆ ಮೊತ್ತಕೆ ಆಲೌಟ್

ವಾಸ್ತವವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ 36 ರನ್​ಗಳಿಗೆ ಆಲೌಟ್ ಆದ ದಾಖಲೆಯನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಈ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತ್ತು. ಆದರೆ ಈ ಅತ್ಯಲ್ಪ ಮೊತ್ತ ವಿದೇಶಿ ನೆಲದಲ್ಲಿ ದಾಖಲಾಗಿತ್ತು. ಆದರೀಗ ತವರು ನೆಲದಲ್ಲಿ ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ಟೀಂ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ.

ಕಿವೀಸ್ ಮೇಲುಗೈ

ಟೀಂ ಇಂಡಿಯಾವನ್ನು 46 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ತಂಡ ಬರೋಬ್ಬರಿ 345 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 299 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಪ್ರಸ್ತುತ ಮೂರನೇ ದಿನದಾಟದ ಮೊದಲ ಸೆಷನ್ ಮುಗಿದಿದ್ದು, ವಿರಾಮದ ವೇಳೆಗೆ ಕಿವೀಸ್ ತಂಡ 7 ವಿಕೆಟ್ ಕಳೆದುಕೊಂಡು ಈ ಮೊತ್ತ ಕಲೆಹಾಕಿದೆ. ತಂಡದ ಪರ ರಚಿನ್ ರವೀಂದ್ರ ಅಜೇಯ ಶತಕ ಸಿಡಿಸಿ ಆಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 18 October 24

ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ