T20 World Cup 2024: ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಬೃಹತ್ ಮೊತ್ತದ ಸ್ಕೋರ್ ಅನ್ನು ನಿರೀಕ್ಷಿಸುವಂತಿಲ್ಲ. ಏಕೆಂದರೆ ಈ ಮೈದಾನದಲ್ಲಿ ಆಡಲಾದ 4 ಪಂದ್ಯಗಳಲ್ಲಿ ಒಂದೇ ಒಂದು ತಂಡವು 150 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿಲ್ಲ.
ಹೀಗಾಗಿಯೇ ಈ ಮೈದಾನದಲ್ಲಿ 150 ರನ್ಗಳಿಸಿದರೆ ಗೆಲುವು ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಈ ಮೈದಾನದಲ್ಲಿ ಆಡಲಾದ 4 ಪಂದ್ಯಗಳ ಅಂಕಿ ಅಂಶಗಳು…
ಅಂದರೆ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಬಾರಿ ಮೂಡಿಬಂದ ಗರಿಷ್ಠ ಸ್ಕೋರ್ 137 ರನ್ಗಳು. ಕೆನಡಾ ತಂಡ ಕಲೆಹಾಕಿದ ಈ ಗರಿಷ್ಠ ಸ್ಕೋರ್ ಅನ್ನು ಬೆನ್ನತ್ತಲು ಐರ್ಲೆಂಡ್ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನಸ್ಸೌ ಸ್ಟೇಡಿಯಂನಲ್ಲಿ 150 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದರೆ ಚೇಸಿಂಗ್ ಮಾಡುವುದು ಕಷ್ಟಕರ ಎಂದೇ ಹೇಳಬಹುದು.
ಅದರಲ್ಲೂ ಪಾಕ್ ವಿರುದ್ಧ ಭಾರತ ತಂಡವು 150 ರನ್ ಬಾರಿಸಿದರೆ ಟೀಮ್ ಇಂಡಿಯಾ ಗೆಲುವು ಖಚಿತ ಎನ್ನಬಹುದು. ಏಕೆಂದರೆ ಪಾಕಿಸ್ತಾನ್ ತಂಡ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಗೆಲುವಿಗೆ 150 ರನ್ಗಳು ಸಾಕಾಗಬಹುದು.
ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
ಒಂದು ವೇಳೆ ಪಾಕಿಸ್ತಾನ್ ತಂಡ 150 ರನ್ ಬಾರಿಸಿದರೆ ಯಾರು ಗೆಲ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕುತ್ತರ ಟೀಮ್ ಇಂಡಿಯಾ. ಏಕೆಂದರೆ ಇದೇ ಮೈದಾನದಲ್ಲಿ ಬಾಂಗ್ಲಾದೇಶ್ ವಿರುದ್ಧ ಆಡಲಾದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿತ್ತು. ಹೀಗಾಗಿ ಪಾಕ್ ತಂಡ ದೊಡ್ಡ ಮೊತ್ತ ಪೇರಿಸಿದರೂ, ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡದಿಂದ ಚೇಸಿಂಗ್ ಅನ್ನು ನಿರೀಕ್ಷಿಸಬಹುದು.