T20 World Cup 2024: ಪಾಕ್ ವಿರುದ್ಧ ಭಾರತ ಗೆಲ್ಲಲಿದೆ ಎಂದು 5 ಕೋಟಿ ರೂ. ಬಾಜಿ ಕಟ್ಟಿದ ಸ್ಟಾರ್ ಸಿಂಗರ್..!

|

Updated on: Jun 09, 2024 | 5:37 PM

IND vs PAK, T20 World Cup 2024: ಜನಪ್ರಿಯ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದನ್ನು ಹವ್ಯಾಸ ಮಾಡಿಕೊಂಡಿರುವ ಡ್ರೇಕ್ ಇದೀಗ ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ದೊಡ್ಡ ಬೆಟ್ ಕಟ್ಟಿದ್ದಾರೆ. ಈ ಪಂದ್ಯದ ಮೇಲೆ ಡ್ರೇಕ್ 5.42 ಕೋಟಿ ರೂಗಳನ್ನು ಬಾಜಿ ಕಟ್ಟಿದ್ದಾರೆ. ಈ ಪಂದ್ಯವನ್ನು ಭಾರತ ಗೆದ್ದರೆ ಡ್ರೇಕ್​ ಅವರ ಖಾತೆಗೆ ಸುಮಾರು 7.6 ಕೋಟಿ ರೂಗಳು ಬಂದು ಬೀಳಲಿದೆ.

T20 World Cup 2024: ಪಾಕ್ ವಿರುದ್ಧ ಭಾರತ ಗೆಲ್ಲಲಿದೆ ಎಂದು 5 ಕೋಟಿ ರೂ. ಬಾಜಿ ಕಟ್ಟಿದ ಸ್ಟಾರ್ ಸಿಂಗರ್..!
ಓರ್ಬೆ ಡ್ರೇಕ್ ಗ್ರಹಾಂ
Follow us on

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಹೀಗಿರುವಾಗ 2024ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ. ಎರಡೂ ತಂಡಗಳ ಅಭಿಮಾನಿಗಳು ಈಗಾಗಲೇ ತಮ್ಮ ತಮ್ಮ ತಂಡಗಳ ಗೆಲುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೈಟ್ ಶುರು ಮಾಡಿಕೊಂಡಿದ್ದಾರೆ. ಇದರೊಂದಿಗೆ ಕಾಳ ಸಂತೆಯಲ್ಲಿ ಉಭಯ ತಂಡಗಳ ಗೆಲುವಿನ ಸಂಬಂಧಿಸಿದಂತೆ ಭಾರಿ ಮೊತ್ತದ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಈ ಅನುಕ್ರಮದಲ್ಲಿ ಕೆನಡಾದ ಸ್ಟಾರ್ ರ‍್ಯಾಪರ್ ಓರ್ಬೆ ಡ್ರೇಕ್ ಗ್ರಹಾಂ (Aubrey Drake Graham), ಈ ಪಂದ್ಯದಲ್ಲಿ ಭಾರತದ ಗೆಲ್ಲಲಿದೆ ಎಂದು ಬರೋಬ್ಬರಿ 5 ಕೋಟಿ ರೂ. ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ಕೆನಡಾದ ಸ್ಟಾರ್ ರ‍್ಯಾಪರ್ ಆಗಿರುವ ಓರ್ಬೆ ಡ್ರೇಕ್ ಗ್ರಹಾಂ ಅವರು ನಟನೆ ಮತ್ತು ಸಂಗೀತದಿಂದಾಗಿ, ಅನೇಕ ಗ್ರ್ಯಾಮಿ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಡ್ರೇಕ್, ಕ್ರಿಕೆಟ್ ಮಾತ್ರವಲ್ಲದೆ ಫುಟ್‌ಬಾಲ್, ಬಾಸ್ಕೆಟ್‌ಬಾಲ್ ಮತ್ತು ರಗ್ಬಿಯಂತಹ ಕ್ರೀಡೆಗಳಲ್ಲಿಯೂ ಸಹ ಬೆಟ್ಟಿಂಗ್ ಕಟ್ಟುವಲ್ಲಿ ನಿಸ್ಸೀಮರು.

T20 World Cup 2024: ಭಾರತ ವಿರುದ್ಧ ಸೋತರೂ ಪಾಕ್ ತಂಡಕ್ಕಿದೆ ಸೂಪರ್​ 8 ಗೇರುವ ಅವಕಾಶ..!

ಐಪಿಎಲ್‌ನಲ್ಲಿ 4.5 ಕೋಟಿ ರೂ. ಗೆದ್ದಿದ್ದ ಡ್ರೇಕ್

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್-2024 ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಮೇಲೆ ಡ್ರೇಕ್ ಬೆಟ್ಟಿಂಗ್ ಕಟ್ಟಿದ್ದರು. ಅದರಂತೆ ಕೆಕೆಆರ್ ಗೆಲ್ಲಲಿದೆ ಎಂದು 2.5 ಕೋಟಿ ರೂ ಬಾಜಿ ಕಟ್ಟಿದ್ದ ಅವರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆದ ಬಳಿಕ ಸುಮಾರು 4.5 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಜನಪ್ರಿಯ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದನ್ನು ಹವ್ಯಾಸ ಮಾಡಿಕೊಂಡಿರುವ ಡ್ರೇಕ್ ಇದೀಗ ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ದೊಡ್ಡ ಬೆಟ್ ಕಟ್ಟಿದ್ದಾರೆ. ಈ ಪಂದ್ಯದ ಮೇಲೆ ಡ್ರೇಕ್ 5.42 ಕೋಟಿ ರೂಗಳನ್ನು ಬಾಜಿ ಕಟ್ಟಿದ್ದಾರೆ. ಈ ಪಂದ್ಯವನ್ನು ಭಾರತ ಗೆದ್ದರೆ ಡ್ರೇಕ್​ ಅವರ ಖಾತೆಗೆ ಸುಮಾರು 7.6 ಕೋಟಿ ರೂಗಳು ಬಂದು ಬೀಳಲಿದೆ.

ಬೆಟ್ಟಿಂಗ್​ನಲ್ಲಿ ಸಾಕಷ್ಟು ಹಣ ಕಳೆದಿರುವ ಡ್ರೇಕ್

ಮಾಧ್ಯಮ ವರದಿಗಳ ಪ್ರಕಾರ, ಭಾರತ-ಪಾಕಿಸ್ತಾನದ ಪಂದ್ಯದ ದಾಖಲೆಗಳನ್ನು ಪರಿಗಣಿಸಿ ಡ್ರೇಕ್, ಈ ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಟ್ಟಿಂಗ್​ನಲ್ಲಿ ಡ್ರೇಕ್ ಕೋಟ್ಯಂತರ ರೂಪಾಯಿ ಗೆದ್ದಿದ್ದರೆ, ಸಾಕಷ್ಟು ನಷ್ಟ ಕೂಡ ಅನುಭವಿಸಿದ್ದಾರೆ. 2022 ರಲ್ಲಿ ನಡೆದ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಇಸ್ರೇಲ್ ಅಡೆಸಾನ್ಯಾ ಮತ್ತು ಅಲೆಕ್ಸ್ ಪಿರೇರಾ ನಡುವಿನ ಪಂದ್ಯದ ಮೇಲೆ ಡ್ರೇಕ್ ಸುಮಾರು 2 ಮಿಲಿಯನ್ ಬಾಜಿ ಕಟ್ಟಿ ಸೋತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ