ತಿರುವಂತನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ಇಂದು ಭಾರತ-ಸೌತ್ ಆಫ್ರಿಕಾ (India vs South Africa) ತಂಡಗಳು ಮುಖಾಮುಖಿಯಾಗಲಿದೆ. 3 ಪಂದ್ಯಗಳ ಈ ಟಿ20 ಸರಣಿಗೂ ಮುನ್ನ ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರಿಗೆ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ಭವ್ಯ ಸ್ವಾಗತ ಕೋರಿದ್ದಾರೆ. ಮಂಗಳವಾರ ಅಖಿಲ ಕೇರಳ ವಿರಾಟ್ ಕೊಹ್ಲಿ ಅಭಿಮಾನಿಗಳ ಬಳಗ ಕಿಂಗ್ ಕೊಹ್ಲಿ (Virat Kohli) ಕಟೌಟ್ ಅನ್ನು ಗ್ರೀನ್ಫೀಲ್ಡ್ ಮೈದಾನದಲ್ಲಿ ಬಳಿ ನಿಲ್ಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕಟೌಟ್ ಕೂಡ ರಾರಾಜಿಸಲಾರಂಭಿಸಿದೆ.
ಟೀಮ್ ಇಂಡಿಯಾ ತಿರುವನಂತಪುರಂಗೆ ಆಗಮಿಸಿದ ಬೆನ್ನಲ್ಲೇ ಗ್ರೀನ್ಫೀಲ್ಡ್ ಸ್ಟೇಡಿಯಂ ಬಳಿಕ ವಿರಾಟ್ ಕೊಹ್ಲಿ 100 ಅಡಿಯ ಕಟೌಟ್ ಅನಾವರಣಗೊಳಿಸಲಾಗಿತ್ತು. ಇದೀಗ ನಾವೇನು ಕಡಿಮೆ ಇಲ್ಲ ಎಂಬಂತೆ ಅಖಿಲ ಕೇರಳ ರೋಹಿತ್ ಶರ್ಮಾ ಅಭಿಮಾನಿಗಳ ಬಳಗ ಕೂಡ ಕಿಂಗ್ ಕೊಹ್ಲಿಯ ಬೃಹತಾಕಾರದ ಕಟೌಟ್ ಬಳಿಯೇ ಹಿಟ್ಮ್ಯಾನ್ ಅವರ ಕಟೌಟ್ ನಿಲ್ಲಿಸಿದ್ದಾರೆ.
ಸಾಮಾನ್ಯವಾಗಿ ಚಿತ್ರನಟರುಗಳ ಅಭಿಮಾನಿಗಳ ಜಿದ್ದಾಜಿದ್ದಿಗೆ ಸೀಮಿತವಾಗಿದ್ದ ಕಟೌಟ್ ಅಭಿಮಾನವು ಇದೀಗ ಕ್ರಿಕೆಟ್ ಪ್ರೇಮಿಗಳ ಅಂಗಳಕ್ಕೂ ಕಾಲಿಟ್ಟಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳು ಕಟೌಟ್ ಫೈಟ್ಗೆ ಇಳಿದಿದ್ದಾರೆ.
ಇದೀಗ 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ಉಭಯ ಆಟಗಾರರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರೀನ್ಫೀಲ್ಡ್ ಮೈದಾನದಲ್ಲಿ ಯಾರು ಅಬ್ಬರಿಸಲಿದ್ದಾರೆ ಎಂಬ ಕುತೂಹಲ ಹಿಟ್ಮ್ಯಾನ್-ಕಿಂಗ್ ಕೊಹ್ಲಿ ಅಭಿಮಾನಿಗಳಲ್ಲಿ ಮನೆಮಾಡಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರ ಅಭಿಮಾನಿಗಳ ನಡುವೆ ಕಟೌಟ್ ಪ್ರತಿಷ್ಠೆ ಶುರುವಾಗಿದ್ದು, ಇದು ಮುಂದೆ ಯಾವ ಮಟ್ಟಕ್ಕೆ ಹೋಗಲಿದೆ ಕಾದು ನೋಡಬೇಕಿದೆ.
Which cut out is best cut-out #RohitSharma? #ViratKohli? #SanjuSamson
Like @imVkohli
Retweet @ImRo45#INDvsSA pic.twitter.com/KrXWEwsUFg— Vy Ganesh (@ganesh_vy) September 27, 2022
ಭಾರತ-ಸೌತ್ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ:
ಭಾರತ ಟಿ20 ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ಟಿ20 ತಂಡ:
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಝ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.