IND vs SL: ಸತತ 40 ವರ್ಷಗಳ ವೈಫಲ್ಯ; ಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಸೃಷ್ಟಿಸಿದ 8 ದಾಖಲೆಗಳಿವು!

IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ ಮತ್ತೊಂದು ಟಿ20 ಸರಣಿ ಮುಗಿದಿದೆ. ಎರಡು ವರ್ಷಗಳಲ್ಲಿ ಸತತ ಎರಡನೇ ಸರಣಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಹಾರ್ದಿಕ್ ಯುವ ಪಡೆ ಯಶಸ್ವಿಯಾಗಿದೆ.

IND vs SL: ಸತತ 40 ವರ್ಷಗಳ ವೈಫಲ್ಯ; ಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಸೃಷ್ಟಿಸಿದ 8 ದಾಖಲೆಗಳಿವು!
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Jan 08, 2023 | 10:35 AM

ಭಾರತ ಮತ್ತು ಶ್ರೀಲಂಕಾ ( India and Sri Lanka) ನಡುವಿನ ಮತ್ತೊಂದು ಟಿ20 ಸರಣಿ ಮುಗಿದಿದೆ. ಎರಡು ವರ್ಷಗಳಲ್ಲಿ ಸತತ ಎರಡನೇ ಸರಣಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಹಾರ್ದಿಕ್ (Hardik Pandya) ಯುವ ಪಡೆ ಯಶಸ್ವಿಯಾಗಿದೆ. ಮೂರು ಪಂದ್ಯಗಳ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 91 ರನ್‌ಗಳಿಂದ ಸೋಲಿಸಿ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು. ಪ್ರತಿ ಬಾರಿಯಂತೆ, ಟೀಂ ಇಂಡಿಯಾ (Team India) ಸರಣಿಯನ್ನು ಗೆದ್ದುಕೊಂಡಿದ್ದು ಮಾತ್ರವಲ್ಲದೆ, ಈ ಸರಣಿಯಲ್ಲಿ ಕೆಲವು ದಾಖಲೆಗಳನ್ನು ಮಾಡಿದೆ. ಅವುಗಳ ವಿವರ ಇಲ್ಲಿದೆ.

ನವೆಂಬರ್ 7 ರಂದು ರಾಜ್‌ಕೋಟ್‌ನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಸೂರ್ಯಕುಮಾರ್ ಯಾದವ್ ಅವರ 112 ರನ್‌ಗಳ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ 228 ರನ್‌ಗಳ ಬಿಗ್ ಸ್ಕೋರ್ ಮಾಡಿತು. ಇದಕ್ಕೆ ಉತ್ತರವಾಗಿ, ಭಾರತೀಯ ಬೌಲರ್‌ಗಳು ಶ್ರೀಲಂಕಾವನ್ನು ಕೇವಲ 137 ರನ್‌ಗಳಿಗೆ ಆಲೌಟ್ ಮಾಡುವುದರೊಂದಿಗೆ, ಪಂದ್ಯವನ್ನು ಗೆದ್ದಿದ್ದಲ್ಲದೆ, ಸರಣಿಯನ್ನು ಕೈವಶ ಮಾಡಿಕೊಂಡರು.

ಟಿ20 ಕ್ರಿಕೆಟ್​ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಟೀಂ ಇಂಡಿಯಾ ಬೌಲರ್ ಯಾರು ಗೊತ್ತಾ?

ಟಿ20 ಸರಣಿಯಲ್ಲಿ ಸೃಷ್ಟಿಯಾದ ದಾಖಲೆಗಳಿವು

  1. ಭಾರತ ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು ಸತತ ಐದನೇ ಬಾರಿಗೆ ತನ್ನದೇ ನೆಲದಲ್ಲಿ ಸೋಲಿಸಿದ ದಾಖಲೆ ಬರೆದಿದೆ. ಇದುವರೆಗೆ ಎರಡು ತಂಡಗಳ ನಡುವೆ ಭಾರತದಲ್ಲಿ 6 ಟಿ20 ಸರಣಿಗಳು ನಡೆದಿದ್ದು, 2009ರ ಮೊದಲ ಸರಣಿ ಮಾತ್ರ 1-1ರಿಂದ ಸಮವಾಗಿತ್ತು. ಅಂದರೆ ಭಾರತದಲ್ಲಿ ಭಾರತವನ್ನು ಸೋಲಿಸಲು ಶ್ರೀಲಂಕಾಕ್ಕೆ ಇನ್ನೂ ಸಾಧ್ಯವಾಗಿಲ್ಲ.
  2. ಇದು ಮಾತ್ರವಲ್ಲದೆ, ಎಲ್ಲಾ ಮೂರು ಫಾರ್ಮ್ಯಾಟ್‌ಗಳನ್ನು ಒಳಗೊಂಡಂತೆ, ಶ್ರೀಲಂಕಾ ಇದುವರೆಗೆ ಭಾರತದಲ್ಲಿ 25 ದ್ವಿಪಕ್ಷೀಯ ಸರಣಿಗಳನ್ನು ಆಡಿದೆ, ಆದರೆ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ. ಶ್ರೀಲಂಕಾವನ್ನು ಎಲ್ಲಾ ಮೂರು ಮಾದರಿಗಳಲ್ಲಿ ಸೋಲಿಸಿರುವ ಏಕೈಕ ದೇಶ ಭಾರತ.
  3. ಟೀಂ ಇಂಡಿಯಾ 2019 ರಿಂದ ತವರಿನಲ್ಲಿ ಯಾವುದೇ ಟಿ20 ಸರಣಿಯನ್ನು ಸೋಲದ ದಾಖಲೆ ಕೂಡ ಬರೆದಿದೆ. ಈ ಅವಧಿಯಲ್ಲಿ ಭಾರತ 12 ಸರಣಿಗಳನ್ನು ಆಡಿದ್ದು, ಅದರಲ್ಲಿ 10 ಸರಣಿಗಳನ್ನು ಗೆದ್ದಿದ್ದರೆ, ಎರಡು (ದಕ್ಷಿಣ ಆಫ್ರಿಕಾ ವಿರುದ್ಧ) ಸರಣಿ ಡ್ರಾ ಆಗಿತ್ತು.
  4. ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ಭಾರತ ನಾಲ್ಕನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಮಾತ್ರ ಭಾರತ 4 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿತ್ತು.
  5. ಅಷ್ಟೇ ಅಲ್ಲ, ತವರು ನೆಲದಲ್ಲಿ ಭಾರತಕ್ಕೆ ಇದು ಎರಡನೇ ಅತಿ ದೊಡ್ಡ ಗೆಲುವು. ತವರಿನಲ್ಲಿ ಭಾರತ 93 ರನ್​ಗಳ ಭಾರೀ ಅಂತರದ ಗೆಲುವು ಸಾಧಿಸಿದೆ. ಪ್ರಾಸಂಗಿಕವಾಗಿ ಈ ದಾಖಲೆ ಸೃಷ್ಟಿಯಾಗಿರುವುದು ಕೂಡ ಶ್ರೀಲಂಕಾ ವಿರುದ್ಧವೇ (2017).
  6. ಟಿ20ಯಲ್ಲಿ ಮೂರನೇ ಶತಕ ಸಿಡಿಸಿದ ಸೂರ್ಯಕುಮಾರ್ , ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ (4) ನಂತರ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
  7. ಅಲ್ಲದೆ ಈ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ ಸೂರ್ಯ, ಅತಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಎರಡನೇ ಟೀಂ  ಇಂಡಿಯಾ ಆಟಗಾರ ಎಂಬ ದಾಖಲೆಯನ್ನು ಬರೆದರು. ಸೂರ್ಯಗೂ ಮೊದಲು, ರೋಹಿತ್ ಶರ್ಮಾ 35 ಎಸೆತಗಳಲ್ಲಿ ಅತಿ ವೇಗದ ಶತಕ ಸಿಡಿಸಿದ್ದರು.
  8. ಈ ಶತಕದ ಇನ್ನಿಂಗ್ಸ್‌ ಮೂಲಕ ಸೂರ್ಯ ತನ್ನ 1500 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ಕೇವಲ 843 ಎಸೆತಗಳನ್ನು ತೆಗೆದುಕೊಂಡಿರುವ ಸೂರ್ಯ ಈ ಮೂಲಕ ಅತಿ ಕಡಿಮೆ ಎಸೆತಗಳಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ 1500 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Sun, 8 January 23

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ