IND vs SL: ಟೀಂ ಇಂಡಿಯಾದ ಪ್ರಯೋಗ ಫಲಿಸಲಿಲ್ಲ; ರಾಹುಲ್-ಹಾರ್ದಿಕ್ ಪರಿಹಾರ ಕಂಡುಕೊಳ್ಳುವುದು ಹೇಗೆ?

IND vs SL: ಮೊದಲ ಪಂದ್ಯದಲ್ಲಿ ಈ ಜೋಡಿ 27 ರನ್ ಸೇರಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 12 ರನ್ ಸೇರಿಸಲಷ್ಟೇ ಶಕ್ತವಾಯಿತು. ಮೂರನೇ ಪಂದ್ಯದಲ್ಲಿ, ಈ ಜೋಡಿಗೆ ಎರಡಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ.

IND vs SL: ಟೀಂ ಇಂಡಿಯಾದ ಪ್ರಯೋಗ ಫಲಿಸಲಿಲ್ಲ; ರಾಹುಲ್-ಹಾರ್ದಿಕ್ ಪರಿಹಾರ ಕಂಡುಕೊಳ್ಳುವುದು ಹೇಗೆ?
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Jan 08, 2023 | 11:31 AM

ಟಿ20 ವಿಶ್ವಕಪ್​ನಲ್ಲಿ (T20 World Cup) ಹೀನಾಯ ಸೋಲಿನ ನಂತರ ಟೀಂ ಇಂಡಿಯಾದ ಟಿ20 ತಂಡದಲ್ಲಿ ಪ್ರಮುಖ ಬದಲಾವಣೆಗೆ ಮುಂದಾಗಿದ್ದ ಬಿಸಿಸಿಐ (BCCI), ವರ್ಷದ ಮೊದಲ ಸರಣಿಯಲ್ಲಿಯೇ ವಿಭಿನ್ನ ಪ್ರಯೋಗಕ್ಕೆ ಕೈ ಹಾಕುವ ಸೂಚನೆಯನ್ನು ಈ ಮೊದಲೇ ನೀಡಿತ್ತು. ಇದಕ್ಕೆ ಪೂರಕವೆಂಬಂತೆ ಲಂಕಾ ವಿರುದ್ಧದ ಸರಣಿಯಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಿದ್ದ ಬಿಗ್​ ಬಾಸ್, ಹಾರ್ದಿಕ್ ಪಾಂಡ್ಯಗೆ (Hardik Pandya) ತಂಡದ ನಾಯಕತ್ವವಹಿಸಿತ್ತು. ಹಾಗೆಯೇ ತಂಡದಲ್ಲಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ನೀಡಿದ್ದ ಬಿಸಿಸಿಐ, 2024ರ ಟಿ20 ವಿಶ್ವಕಪ್​ಗೆ ಭವಿಷ್ಯದ ತಂಡವನ್ನು ಕಟ್ಟುವುದಕ್ಕೆ ಈಗಿನಿಂದಲೇ ಬುನಾದಿ ಹಾಕಿತ್ತು. ಆದರೆ ಈ ಸರಣಿಯನ್ನೇನೋ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾಕ್ಕೆ (Team India) ಕೆಲವು ಸಮಸ್ಯೆಗಳಿಗೆ ಪರಿಹಾರವೇ ಸಿಗಲಿಲ್ಲ. ಒಂದೆಡೆ ಯುವ ವೇಗಿಗಳಿಗೆ ಹೆಚ್ಚು ಅವಕಾಶ ನೀಡಿದ್ದ ಆಡಳಿತ ಮಂಡಳಿಗೆ ಡೆತ್​ ಓವರ್​ಗಳ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಇತ್ತ ಬಹಳ ತಿಂಗಳುಗಳಿಂದ ಆರಂಭಿಕರ ಸಮಸ್ಯೆ ಎದುರಿಸುತ್ತಿದ್ದ ಟೀಂ ಇಂಡಿಯಾ ಈ ಸರಣಿಯಲ್ಲಾದರೂ ಪರಿಹಾರ ಕಂಡುಕೊಳ್ಳುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಸರಣಿಯಲ್ಲೂ ಆರಂಭಿಕರ ಪ್ರದರ್ಶನ ಅಟ್ಟರ್ ಫ್ಲಾಪ್ ಆಯಿತು. ಹೀಗಾಗಿ ಈ ಸರಣಿಯಲ್ಲೂ ಸಮಸ್ಯೆಗೆ ಪರಿಹಾರ ಸಿಗದೆ ಇರುವುದು ಬಿಸಿಸಿಐ ಅನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.

ಮೊದಲೇ ಹೇಳಿದಂತೆ ಆರಂಭಿಕ ಜೋಡಿಯ ವಿಚಾರ ಭಾರತೀಯ ಕ್ರಿಕೆಟ್‌ನಲ್ಲಿ ಬಹಳ ದಿನಗಳಿಂದ ಆತಂಕದ ವಿಷಯವಾಗಿದೆ. ಟೀಂ ಇಂಡಿಯಾದ ಆರಂಭಿಕ ಜೋಡಿಗಳಿಗೆ ಬಹಳ ದಿನಗಳಿಂದ ಮಾಡಬೇಕಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಆರಂಭಿಕರು ವೈಯಕ್ತಿಕವಾಗಿ ಉತ್ತಮ ಆಟ ಪ್ರದರ್ಶಿಸಿದರೂ ಜೋಡಿಯಾಗಿ ಭಾರತ ಇಲ್ಲಿ ವೈಫಲ್ಯ ಕಂಡಿದೆ. ಹೀಗಾಗಿ ಶ್ರೀಲಂಕಾ ಸರಣಿಯಲ್ಲಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಜೋಡಿಗೆ ಅವಕಾಶ ನೀಡಲಾಗಿತ್ತು. ಆದರೆ ಇವರಿಬ್ಬರೂ ಕೂಡ ಆರಂಭಿಕ ಜೋಡಿಯಾಗಿ ವಿಫಲರಾದರು.

IND vs SL: ‘ಖಂಡಿತ ನಿರಾಶೆಗೊಳ್ಳುತ್ತಿದ್ದೆ’! ಸೂರ್ಯನ ಆಟಕ್ಕೆ ಫಿದಾ ಆಗಿರುವ ಪಾಂಡ್ಯ ಹೇಳಿದ್ದೇನು ಗೊತ್ತಾ?

ಆರಂಭಿಕರ ಫ್ಲಾಪ್ ಶೋ

ಈ ಇಬ್ಬರೂ ಯುವ ಆಟಗಾರರಾಗಿರುವುದರ ಜೊತೆಗೆ ಒಬ್ಬರು ಬಲಗೈ ಬ್ಯಾಟರ್ ಆಗಿದ್ದರೆ, ಇನ್ನೊಬ್ಬ ಎಡಗೈ ದಾಂಡಿಗ. ಹೀಗಾಗಿ ಈ ಸಂಯೋಜನೆಯನ್ನು ಕ್ರಿಕೆಟ್‌ನಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಂಯೋಜನೆಯಿಂದಾಗಿ ಎದುರಾಳಿ ತಂಡದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ತೊಂದರೆಗೊಳಗಾಗುವುದನ್ನು ನಾವು ಸಾಕಷ್ಟು ಪಂದ್ಯಗಳಲ್ಲಿ ನೋಡಿದ್ದೇವೆ. ಆದರೆ ಈ ಬಾರಿ ಟೀಂ ಇಂಡಿಯಾಗೆ ಈ ಸಂಯೋಜನೆ ಫಲ ನೀಡಲಿಲ್ಲ. ಇಶಾನ್ ಮತ್ತು ಗಿಲ್ ಇಬ್ಬರೂ ಜೊತೆಯಾಗಿ ಒಂದೇ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ.

ಮೊದಲ ಪಂದ್ಯದಲ್ಲಿ ಈ ಜೋಡಿ 27 ರನ್ ಸೇರಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 12 ರನ್ ಸೇರಿಸಲಷ್ಟೇ ಶಕ್ತವಾಯಿತು. ಮೂರನೇ ಪಂದ್ಯದಲ್ಲಿ, ಈ ಜೋಡಿಯು ಎರಡಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ, ಒಟ್ಟು ಮೂರು ರನ್‌ಗಳಿಸುವುಷ್ಟರಲ್ಲೇ ಈ ಜೋಡಿ ಮುರಿದು ಬಿತ್ತು. ಈ ಸರಣಿಯಲ್ಲಿ ಈ ಜೋಡಿಯ ಒಟ್ಟು ರನ್‌ಗಳನ್ನು ನೋಡಿದರೆ ಕೇವಲ 42 ರನ್‌ಗಳು ದಾಖಲಾಗಿವೆ. ಮಧ್ಯಮ ಕ್ರಮಾಂಕಕ್ಕೆ ಹೊರೆಯಾಗದಂತೆ ತಂಡಕ್ಕೆ ಬಲವಾದ ಆರಂಭವನ್ನು ನೀಡುವುದು ಆರಂಭಿಕ ಜೋಡಿಯ ಕೆಲಸವಾಗಿದೆ. ಆರಂಭಿಕರು ಉತ್ತಮ ಜೊತೆಯಾಟ ನಡೆಸಿದರೆ ಅದು ತಂಡವನ್ನು ಸುಲಭವಾಗಿ ದೊಡ್ಡ ಸ್ಕೋರ್‌ಗೆ ಕೊಂಡೊಯ್ಯುತ್ತದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಇಶಾನ್ ಮತ್ತು ಗಿಲ್ ಮೇಲೆ ಇರಿಸಲಾದ ನಿರೀಕ್ಷೆಗಳು ಮತ್ತೊಮ್ಮೆ ಹುಸಿಯಾಗಿವೆ.

ಮತ್ತೆ ಬದಲಾವಣೆಗೆ ಮುಂದಾಗುತ್ತಾ ಮಂಡಳಿ?

ಈಗ ಈ ಜೋಡಿಗೆ ಮತ್ತೊಮ್ಮೆ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ಸಿಗುತ್ತಾ ಅಥವಾ ಒಂದಿಷ್ಟು ಬದಲಾವಣೆ ಕಾಣಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಸಿಸಿಐ ಮತ್ತು ಟೀಂ ಮ್ಯಾನೇಜ್‌ಮೆಂಟ್ 2024ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ, ಆಟಗಾರರಿಗೆ ಈ ಮಾದರಿಯಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುವುದು ಅವಶ್ಯಕ. ಕೋಚ್ ರಾಹುಲ್ ದ್ರಾವಿಡ್ ಕೂಡ ಕೇವಲ ಕೆಲವೇ ಕೆಲವು ವೈಫಲ್ಯಗಳ ಆಧಾರದ ಮೇಲೆ ಆಟಗಾರನನ್ನು ಬದಲಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಜೋಡಿಗೆ ಭವಿಷ್ಯದಲ್ಲಿ ಇನ್ನಷ್ಟು ಅವಕಾಶಗಳು ಸಿಗುವುದು ಖಚಿತ.

ವೈಯಕ್ತಿಕ ಪ್ರದರ್ಶನವೂ ಹೇಳಿಕೊಳ್ಳುವಂತಿರಲಿಲ್ಲ

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇಶಾನ್ ಮತ್ತು ಗಿಲ್ ಅವರ ವೈಯಕ್ತಿಕ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಇಲ್ಲಿಯೂ ಇಬ್ಬರೂ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗಿಲ್ ಏಳು ರನ್ ಗಳಿಸಿದರೆ, ಪುಣೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಐದು ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ ಗಿಲ್, 46 ರನ್ ಗಳಿಸಿದರು. ಆದರೆ ತಂಡಕ್ಕೆ ಸ್ಫೋಟಕ ಆರಂಭಿಕ ಆಟಗಾರನ ಅಗತ್ಯವಿರುವಾಗ ಅವರು ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಇಶಾನ್​ಗೆ ಈ ಕೆಲಸ ಮಾಡುವುದು ಕರಗತವಾಗಿದೆ. ಸಾಮಾನ್ಯವಾಗಿ ಆರಂಭಿಕರಾಗಿ ಕಣಕ್ಕಿಳಿದಾಗ ಬಿರುಸಿನ ಬ್ಯಾಟಿಂಗ್ ಮಾಡುವುದು ಕಿಶನ್​ ಅವರ ಆಟದ ಶೈಲಿಯಾಗಿದೆ. ಮೊದಲ ಪಂದ್ಯದಲ್ಲಿ ಈ ಕೆಲಸ ಮಾಡಿದ್ದ ಇಶಾನ್ 37 ರನ್ ಗಳಿಸಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಎರಡು ಮತ್ತು ಒಂದು ರನ್ ಗಳಿಸಿ ಪೆವಿಲಿಯನ್​ಗೆ ಸೇರಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Sun, 8 January 23

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ