IND vs SL: ಸ್ವಲ್ಪ ಏರುಪೇರಾದರೂ ಲಂಕಾ ತಂಡದ ಪ್ರತಿಯೊಬ್ಬ ಬೌಲರ್​ಗೂ ರನ್​ಗಳ ಪ್ರಸಾದ ಹಂಚಿದ ಸೂರ್ಯ..!

Suryakumar Yadav: ರಾಜ್​ಕೋಟ್ ಟಿ20ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್, ಈ ಮೂಲಕ ಟಿ20ಯಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು.

IND vs SL: ಸ್ವಲ್ಪ ಏರುಪೇರಾದರೂ ಲಂಕಾ ತಂಡದ ಪ್ರತಿಯೊಬ್ಬ ಬೌಲರ್​ಗೂ ರನ್​ಗಳ ಪ್ರಸಾದ ಹಂಚಿದ ಸೂರ್ಯ..!
ಸೂರ್ಯಕುಮಾರ್ ಯಾದವ್
Follow us
TV9 Web
| Updated By: ಪೃಥ್ವಿಶಂಕರ

Updated on:Jan 08, 2023 | 12:53 PM

ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ( India and Sri Lanka) ಅಂತಿಮ ಟಿ20 ಪಂದ್ಯದಲ್ಲಿ ನಡುಗುವ ಚಳಿಯಲ್ಲೂ ಲಂಕಾ ಬೌಲರ್​ಗಳು ಬೆವರುವಂತೆ ಮಾಡಿದ ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ದಾಖಲೆಯ ಶತಕದೊಂದಿಗೆ ಅನೇಕ ದಾಖಲೆಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಸೂರ್ಯ, ಲಂಕಾ ತಂಡವನ್ನು ಪಂದ್ಯದಿಂದಲೇ ಹೊರಹಾಕಿದರು. ಸೂರ್ಯನ ಆಟಕ್ಕೆ ಸುಸ್ತಾದ ಲಂಕಾ ತಂಡಕ್ಕೆ ಆಗಸವನ್ನು ನೋಡುವುದನ್ನು ಬಿಟ್ಟರೆ ಬೇರೆ ಕೆಲಸವೇ ಇಲ್ಲದಂತ್ತಾಗಿತ್ತು. ಆರಂಭಿಕ ಆಘಾತದಿಂದ ಬಳಲಿದ್ದ ಭಾರತದ ಇನ್ನಿಂಗ್ಸ್​ಗೆ ಸ್ಫೋಟಕ ತಿರುವು ನೀಡುವಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್​ಗೆ ಪ್ರಮುಖ ಕಾರಣ ಎಂಬುದರಲ್ಲಿ ಎರಡೂ ಮಾತಿಲ್ಲ. ಬ್ಯಾಟಿಂಗ್​ಗಿಳಿದ ಕೂಡಲೇ ಸ್ಫೋಟಕ ಆಟಕ್ಕೆ ಮುಂದಾದ ಸೂರ್ಯ, ಲಂಕಾ ತಂಡದ ಪ್ರತಿಯೊಬ್ಬ ಬೌಲರ್​ ವಿರುದ್ಧವೂ ರನ್​ಗಳ ಕೋಟೆ ಕಟ್ಟಿದರು.

ರಾಜ್‌ಕೋಟ್ ಟಿ20ಯಲ್ಲಿ ಶ್ರೀಲಂಕಾ ತಂಡ ಸೂರ್ಯಕುಮಾರ್ ಯಾದವ್ ಆರ್ಭಟವನ್ನು ತಡೆಯಲು 5 ಬೌಲರ್‌ಗಳನ್ನು ಪ್ರಯತ್ನಿಸಿತು. ಆದರೆ, ಒಬ್ಬ ಬೌಲರ್ ಕೂಡ ಸೂರ್ಯ ವಿರುದ್ಧ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇದಕ್ಕೆ ವಿರುದ್ಧವಾಗಿ, ಸೂರ್ಯನ ದಾಳಿಗೆ ಸಿಕ್ಕ ವೇಗಿಗಳು ಅಸಹಾಯಕಾರಗಿ ಹೋದರು. ಅದು ಸ್ಪಿನ್ನರ್ ಆಗಿರಲಿ ಅಥವಾ ವೇಗಿಯಾಗಿರಲಿ, ಸೂರ್ಯಕುಮಾರ್ ಯಾದವ್ ಶ್ರೀಲಂಕಾದ ಪ್ರತಿಯೊಬ್ಬ ಬೌಲರ್‌ಗಳನ್ನು ಸಮನಾಗಿ ದಂಡಿಸುವಲ್ಲಿ ಯಶಸ್ವಿಯಾದರು.

IND vs SL: ಮೊದಲು 7 ನೋ ಬಾಲ್, ಈಗ 11 ವೈಡ್; ವೇಗಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ?

45 ಎಸೆತಗಳಲ್ಲಿ ಬಿರುಸಿನ ಶತಕ

ರಾಜ್​ಕೋಟ್ ಟಿ20 ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್, ಈ ಮೂಲಕ ಟಿ20ಯಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಇದು ರಾಜ್‌ಕೋಟ್ ಮೈದಾನದಲ್ಲಿ ಸಿಡಿಸಿದ ಎರಡನೇ ಟಿ20 ಅಂತಾರಾಷ್ಟ್ರೀಯ ಶತಕವೂ ಆಗಿತ್ತು. ಶತಕದ ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ ಸೂರ್ಯ ಕೇವಲ 51 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯರಾಗಿ ಉಳಿದರು. 219.60 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಸೂರ್ಯ ತಮ್ಮ ಈ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಹ ಬಾರಿಸಿದರು.

ಪ್ರತಿ ಬೌಲರ್​ ವಿರುದ್ಧವೂ ರನ್ ಶಿಖರ

ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ದಾಳಿಯಿಂದ ತಪ್ಪಿಸಿಕೊಳ್ಳಲು ಶ್ರೀಲಂಕಾ ತಂಡದ ಯಾವ ಬೌಲರ್​ಗೂ ಸಾಧ್ಯವಾಗಲಿಲ್ಲ. ಆದರೆ ಉಳಿದವರಿಗೆ ಹೋಲಿಸಿದರೆ ವನಿಂದು ಹಸರಂಗ ಮಾತ್ರ ಸೂರ್ಯನೆದುರು ರನ್​ಗಳಿಗೆ ಕೊಂಚ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಹಸರಂಗ ಅವರ 11 ಎಸೆತಗಳನ್ನು ಎದುರಿಸಿದ ಸೂರ್ಯ, 118.2 ಸ್ಟ್ರೈಕ್ ರೇಟ್‌ನಲ್ಲಿ 13 ರನ್ ಗಳಿಸಿದರು. ಇವರಲ್ಲದೆ ಉದಯೋನ್ಮುಖ ಸ್ಪಿನ್ನರ್ ಮಹಿಷ್ ತೀಕ್ಷಣ ಕೂಡ ಕೊಂಚ ಪರಿಣಾಮಕಾರಿ ಎನಿಸಿಕೊಂಡರು. ಈ ಸ್ಪಿನ್ನರ್ ಎದುರು 215 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 28 ರನ್ ಚಚ್ಚಿದರು. ಯಾವ ಬೌಲರ್​ಗೆ, ಎಷ್ಟು ಸ್ಟ್ರೈಕ್ ರೇಟ್‌ನಲ್ಲಿ ಸೂರ್ಯ ರನ್ ಗಳಿಸಿದರು ಎಂಬುದರ ಪಟ್ಟಿ ಇಂತಿದೆ.

ಬೌಲರ್

ಬಾಲ್ ರನ್ ಸ್ಟ್ರೈಕ್ ರೇಟ್
ಹಸರಂಗ 11 13

118.2

ತೀಕ್ಷಣ

13 28 215
ಕರುಣಾರತ್ನೆ 10 23

230

ಮಧುಶಂಕ

8 30 350

ರಜಿತ್

2 7

350

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Sun, 8 January 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ