IND vs WI: 2 ಗಂಟೆ ತಡವಾಗಿ ಶುರುವಾಗಲಿದೆ ಭಾರತ- ವೆಸ್ಟ್ ಇಂಡೀಸ್ 2ನೇ ಟಿ20 ಪಂದ್ಯ
IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ನಿಗದಿತ ಸಮಯದಿಂದ ಎರಡು ಗಂಟೆಗಳ ವಿಳಂಬದೊಂದಿಗೆ ಪ್ರಾರಂಭವಾಗಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India and West) ನಡುವಿನ ಐದು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ನಿಗದಿತ ಸಮಯದಿಂದ ಎರಡು ಗಂಟೆಗಳ ವಿಳಂಬದೊಂದಿಗೆ ಪ್ರಾರಂಭವಾಗಲಿದೆ. ಸರಣಿಯ ಎರಡನೇ ಪಂದ್ಯವು ಎರಡು ತಂಡಗಳ ನಡುವೆ ಸೋಮವಾರ, ಆಗಸ್ಟ್ 1 ರಂದು ಸೇಂಟ್ ಕಿಟ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು, ಆದರೆ ಈಗ ಅದು ರಾತ್ರಿ 10 ಗಂಟೆಗೆ ಪ್ರಾರಂಭವಾಗಲಿದೆ. ಈಗ ವಿಳಂಬಕ್ಕೆ ಕಾರಣ ಅಚ್ಚರಿ ಮೂಡಿಸಿದೆ. ಈ ವಿಳಂಬಕ್ಕೆ ಮಳೆ, ಕೆಟ್ಟ ಹವಾಮಾನ ಅಥವಾ ಆರ್ದ್ರ ಮೈದಾನದಿಂದ ಆಗುತ್ತಿಲ್ಲ, ಬದಲಿಗೆ ಆಟಗಾರರು ಸರಿಯಾದ ಸಮಯಕ್ಕೆ ಮೈದಾನ ತಲುಪಲು ಅಸಾಧ್ಯವಾಗಿರುವುದೇ ಕಾರಣ.
ಆಗಸ್ಟ್ 1 ರ ಸೋಮವಾರ ಸಂಜೆ ಪಂದ್ಯ ಪ್ರಾರಂಭವಾಗುವ ಸುಮಾರು ಎರಡೂವರೆ ಗಂಟೆಗಳ ಮೊದಲು ಕ್ರಿಕೆಟ್ ವೆಸ್ಟ್ ಇಂಡೀಸ್ ವಿಳಂಬದ ಬಗ್ಗೆ ಮಾಹಿತಿ ನೀಡುವ ಮಾಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿತು. ಇದೀಗ ಪಂದ್ಯ ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ) ಆರಂಭವಾಗಲಿದೆ ಎಂದು ವಿಂಡೀಸ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಂಡೀಸ್ ಬೋರ್ಡ್ ತನ್ನ ಹೇಳಿಕೆಯಲ್ಲಿ ನೀಡಿರುವ ಕಾರಣ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡಿರಲಿಲ್ಲ.
*CWI STATEMENT* Delayed start time for 2nd Goldmedal T20I Cup match, powered by Kent Water Purifiers | New Start Time: 12:30PM AST (11:30am Jamaica/10pm India)https://t.co/q1J5FBdZAh https://t.co/dy59uajSr8
— Windies Cricket (@windiescricket) August 1, 2022
ವಾಸ್ತವವಾಗಿ ಪಂದ್ಯದ ಮೊದಲು ಉಭಯ ತಂಡದ ಆಟಗಾರರ ಲಗೇಜ್ಗಳು ಸರಿಯಾದ ಸಮಯಕ್ಕೆ ತಲುಪಿಲ್ಲ. ಇದರಿಂದಾಗಿ ಪಂದ್ಯವನ್ನು 2 ಗಂಟೆ ತಡವಾಗಿ ಆರಂಭ ಮಾಡುವುದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ವಿಂಡೀಸ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದ ವೀಸಾ ಸಮಸ್ಯೆ
ಈ ಪರಿಸ್ಥಿತಿಗೆ ಅಭಿಮಾನಿಗಳು, ಪ್ರಸಾರಕರು ಮತ್ತು ಪ್ರಾಯೋಜಕರಿಗೆ ವಿಂಡೀಸ್ ಮಂಡಳಿಯು ವಿಷಾದ ವ್ಯಕ್ತಪಡಿಸಿದೆ. ಅಂದಹಾಗೆ, ಇದು ಈ ಸರಣಿಗೆ ಸಂಬಂಧಿಸಿದ ಏಕೈಕ ಸಮಸ್ಯೆಯಲ್ಲ, ಇದು ವಿಂಡೀಸ್ ಮಂಡಳಿಗೆ ಸಮಸ್ಯೆಯಾಗಿ ಉಳಿದಿದೆ. ಇತ್ತೀಚಿನ ವರದಿಗಳ ಪ್ರಕಾರ, ಸರಣಿಯ ಕೊನೆಯ ಎರಡು ಪಂದ್ಯಗಳಿಗೆ, ಎರಡೂ ತಂಡಗಳ ಅನೇಕ ಆಟಗಾರರು ಇನ್ನೂ ಯುನೈಟೆಡ್ ಸ್ಟೇಟ್ಸ್‌ಗೆ ವೀಸಾಗಳನ್ನು ಪಡೆದಿಲ್ಲ, ಈ ಕಾರಣದಿಂದಾಗಿ ವಿಂಡೀಸ್ ಮಂಡಳಿಯು ಈ ಪಂದ್ಯಗಳನ್ನು ಆಯೋಜಿಸಲು ತುರ್ತು ಯೋಜನೆಗಳನ್ನು ಮಾಡಲು ಪ್ರಾರಂಭಿಸಿದೆ. ಸರಣಿಯ ಮೊದಲ ಮೂರು ಪಂದ್ಯಗಳು ಕೆರಿಬಿಯನ್ ದ್ವೀಪದಲ್ಲಿ ನಡೆಯಲಿದ್ದರೆ, ಕೊನೆಯ ಎರಡು ಪಂದ್ಯಗಳು ಯುಎಸ್ ರಾಜ್ಯದ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿವೆ. ಈ ಪಂದ್ಯಗಳು ಆಗಸ್ಟ್ 6 ಮತ್ತು 7 ರಂದು ನಡೆಯಲಿವೆ.
Published On - 6:02 pm, Mon, 1 August 22