IND vs WI: ಮತ್ತೊಮ್ಮೆ ಮುಗ್ಗರಿಸಿದ ಟೀಂ ಇಂಡಿಯಾ; 2ನೇ ಟಿ20 ಪಂದ್ಯದಲ್ಲೂ ಸೋಲು..!

India vs West Indies: ಮೊದಲ ಟಿ20 ಪಂದ್ಯವನ್ನು 5 ರನ್​ಗಳಿಂದ ಸೋತಿದ್ದ ಹಾರ್ದಿಕ್ ಪಡೆ ಇದೀಗ ಸತತ ಎರಡನೇ ಟಿ20 ಪಂದ್ಯದಲ್ಲೂ ಸೋಲು ಕಂಡಿದೆ.

IND vs WI: ಮತ್ತೊಮ್ಮೆ ಮುಗ್ಗರಿಸಿದ ಟೀಂ ಇಂಡಿಯಾ; 2ನೇ ಟಿ20 ಪಂದ್ಯದಲ್ಲೂ ಸೋಲು..!
ಹಾರ್ದಿಕ್ ಪಾಂಡ್ಯ (ವಿಕೆಟ್ ಒಪ್ಪಿಸಿದ ದೃಶ್ಯ)
Follow us
ಪೃಥ್ವಿಶಂಕರ
|

Updated on:Aug 07, 2023 | 5:54 AM

ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ (Team India) ಟಿ20 ಸರಣಿಯಲ್ಲೂ ಅದೇ ಪದ್ಧತಿಯನ್ನು ಮುಂದುವರೆಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮೊದಲ ಟಿ20 ಪಂದ್ಯವನ್ನು 5 ರನ್​ಗಳಿಂದ ಸೋತಿದ್ದ ಹಾರ್ದಿಕ್ ಪಡೆ ಇದೀಗ ಸತತ ಎರಡನೇ ಟಿ20 ಪಂದ್ಯದಲ್ಲೂ ಸೋಲು ಕಂಡಿದೆ. ಗಯಾನಾದ ಪೊವಿಡೆನ್ಸ್ ಸ್ಟೇಡಿಯಂನಲ್ಲಿ (Providence Stadium in Guyana) ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಣ ಎರಡನೇ ಟಿ20 ಪಂದ್ಯವನ್ನೂ ಸಹ ಆತಿಥೇಯ ವಿಂಡೀಸ್ 2 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ತಿಲಕ್ ವರ್ಮಾ (Tilak Varma) ಅವರ ಅರ್ಧಶತಕದ ನೆರವಿನಿಂದಾಗಿ ವಿಂಡೀಸ್ ಪಡೆಗೆ 153 ರನ್​ಗಳ ಸಾಧಾರಣ ಸವಾಲನ್ನು ನೀಡಿತ್ತು. ಈ ಸವಾಲನ್ನು ಬೆನ್ನಟ್ಟಿದ ವಿಂಡೀಸ್ ಪಡೆ 8 ವಿಕೆಟ್​ ಕಳೆದುಕೊಂಡು 18.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 2-0 ಅಂತರದಿಂದ ಏಕಪಕ್ಷೀಯ ಮುನ್ನಡೆ ಸಾಧಿಸಿದೆ. ವೆಸ್ಟ್ ಇಂಡೀಸ್ ಪರ 67 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ನಿಕೋಲಸ್ ಪೂರನ್ (Nicholas Pooran) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮತ್ತೊಮ್ಮೆ ಕೈಕೊಟ್ಟ ಟಾಪ್ ಆರ್ಡರ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ತಂಡದ ಟಾಪ್ ಆರ್ಡರ್ ಮತ್ತೊಮ್ಮೆ ಕೈಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಇಡೀ ವಿಂಡೀಸ್ ಪ್ರವಾಸದಲ್ಲಿ ರನ್ ಬರ ಎದುರಿಸುತ್ತಿರುವ ಗಿಲ್​ಗೆ (8) ಮತ್ತೊಮ್ಮೆ 10ರ ಗಡಿ ದಾಟಲು ಸಾಧ್ಯವಾಗದೆ ಮೂರನೇ ಓವರ್‌ನಲ್ಲಿಯೇ ಪೆವಿಲಿಯನ್‌ ಸೇರಿಕೊಂಡರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ (1) ಅವರ ಕಳಪೆ ಫಾರ್ಮ್​ ಮತ್ತೊಮ್ಮೆ ಮುಂದುವರಿದು ಈ ಬಾರಿ ಅದೃಷ್ಟ ಅವರಿಗೆ ಕೈಕೊಟ್ಟಿತು. ಸೂರ್ಯ ಸಹ ಕೇವಲ 3 ಎಸೆತಗಳನ್ನು ಆಡಿ ಕೈಲ್ ಮೇಯರ್ಸ್ ಅವರ ಅತ್ಯುತ್ತಮ ಎಸೆತದಲ್ಲಿ ರನ್ ಔಟ್ ಆದರು. ಈ ಮೂಲಕ ಸೂರ್ಯ ಅವರಿಗೆ 50ನೇ ಟಿ20 ಪಂದ್ಯದಲ್ಲಿ ಹೆಚ್ಚಿನ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

IND vs WI: ಟೆಸ್ಟ್, ಏಕದಿನದ ಬಳಿಕ ಟಿ20 ಸರಣಿಯಲ್ಲೂ ಸೂರ್ಯ- ಗಿಲ್ ಫ್ಲಾಪ್

ಅದೇ ಸಮಯದಲ್ಲಿ, ಇಶಾನ್ ಕಿಶನ್ (27) ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಂತರಾದರೂ, ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. 10ನೇ ಓವರ್‌ನಲ್ಲಿ ಇಶಾನ್ ಅವರನ್ನು ರೊಮಾರಿಯೊ ಶೆಫರ್ಡ್ ಬೌಲ್ಡ್ ಮಾಡಿದರು. ಮತ್ತೊಮ್ಮೆ ನಿರಾಸೆ ಮೂಡಿಸಿದ ಸಂಜು ಸ್ಯಾಮ್ಸನ್ (7) ಬಂದ ತಕ್ಷಣ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿ ಸ್ಟಂಪ್ ಔಟ್ ಆದರು.

ಏಕಾಂಗಿ ಹೋರಾಟ ನಡೆಸಿದ ತಿಲಕ್

ಮೂವರು ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರಿಂದ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕಿಕೊಂಡಿತ್ತು. ಆದರೆ ತಂಡದ ಪರ ತನ್ನ ಅದ್ಭುತ ಫಾರ್ಮ್​ ಮುಂದುವರೆಸಿದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (51) ಸತತ ಎರಡನೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಟಿ20 ಮಾದರಿಗೆ ಪಾದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ತಂಡದ ಪರ ಗರಿಷ್ಠ 39 ರನ್ ಸಿಡಿಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಲು ಸಾಧ್ಯವಾಗದ ಅವರು ಈ ಬಾರಿ 50ರ ಗಡಿ ದಾಟಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ನಾಯಕ ಹಾರ್ದಿಕ್ ಪಾಂಡ್ಯ (24) ಎರಡು ಸಿಕ್ಸರ್ ಬಾರಿಸಿದರೂ ಅವರಿಗೂ ಸಹ ಕೊನೆಯವರೆಗೂ ನಿಲ್ಲಲು ಸಾಧ್ಯವಾಗಲಿಲ್ಲ. ಅಕ್ಷರ್ ಪಟೇಲ್ ಸಹ ಒಂದಂಕಿಗೆ ಸುಸ್ತಾದರು. ಹೀಗಾಗಿ ತಂಡವು 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.

ವಿಂಡೀಸ್‌ಗೆ ಕೆಟ್ಟ ಆರಂಭ

ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಕಳಪೆ ಆರಂಭ ಪಡೆದುಕೊಂಡಿತ್ತಾದರೂ ಬೌಲಿಂಗ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ಓವರ್ ಬೌಲ್ ಮಾಡಿದ ನಾಯಕ ಹಾರ್ದಿಕ್ ಪಾಂಡ್ಯ (3/35) ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಬ್ರಾಂಡನ್ ಕಿಂಗ್ ಅವರ ವಿಕೆಟ್ ಪಡೆದರು. ಆ ಬಳಿಕ ಅದೇ ಓವರ್​ನಲ್ಲಿ ಜಾನ್ಸನ್ ಚಾರ್ಲ್ಸ್ ಅವರನ್ನು ಬಲಿ ಪಡೆದರು. ಹೀಗಾಗಿ ಮೊದಲ ಓವರ್‌ನಲ್ಲಿಯೇ ವಿಂಡೀಸ್ 2 ವಿಕೆಟ್ ಕಳೆದುಕೊಂಡಿತು. ಆದರೆ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ನಿಕೋಲಸ್ ಪೂರನ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು.

ಪೂರನ್ ಸ್ಫೋಟಕ ಅರ್ಧಶತಕ

ಪೂರನ್‌ಗೆ ಕ್ಯಾಪ್ಟನ್ ರೋವ್‌ಮನ್ ಪೊವೆಲ್ ಅವರಿಂದಲೂ ಉತ್ತಮ ಸಾಥ್ ಸಿಕ್ಕಿತು. ಇಬ್ಬರ ನಡುವೆ 57 ರನ್‌ಗಳ ಜೊತೆಯಾಟ ನಡೆಯಿತು. ಇದರಲ್ಲಿ ಪೊವೆಲ್ ಕೇವಲ 22 ರನ್ ಗಳಿಸಿದರೆ ಪೂರನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಮತ್ತೊಮ್ಮೆ ಹಾರ್ದಿಕ್ ಪೊವೆಲ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟವನ್ನು ಮುರಿದರು. ಆದರೆ ಪೂರನ್ (67) ದೃಢವಾಗಿ ನಿಂತು ಭಾರತದ ವಿರುದ್ಧ ಐದನೇ ಅರ್ಧಶತಕವನ್ನು ಬಾರಿಸಿದರು. 14ನೇ ಓವರ್‌ನ ಕೊನೆಯ ಎಸೆತದಲ್ಲಿ ಪೂರನ್ ಅವರನ್ನು ಮುಖೇಶ್ ಕುಮಾರ್ ಔಟ್ ಮಾಡಿದರು.

ಇಲ್ಲಿಂದ ಪಂದ್ಯ ತಿರುವು ಪಡೆಯಿತು. ವೆಸ್ಟ್ ಇಂಡೀಸ್ 16 ನೇ ಓವರ್​ನಲ್ಲಿ ಕೇವಲ 1 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಈ ಪೈಕಿ ಚಹಾಲ್ (2/19) ಸ್ವತಃ ಎರಡು ವಿಕೆಟ್‌ಗಳನ್ನು ಕಬಳಿಸಿದರೆ, ಒಂದು ವಿಕೆಟ್ ರನ್ ಔಟ್ ಮೂಲಕ ಬಂತು. ಈ ವಿಕೆಟ್​ಗಳಲ್ಲಿ ಶಿಮ್ರಾನ್ ಹೆಟ್ಮೆಯರ್ ವಿಕೆಟ್ ಕೂಡ ಸೇರಿತ್ತು. ಹೀಗಾಗಿ 8 ವಿಕೆಟ್​ಗಳನ್ನು ಕಳೆದುಕೊಂಡ ವೆಸ್ಟ್ ಇಂಡೀಸ್​ಗೆ ಸೋಲು ಖಚಿತ ಎನಿಸಿತು. ಆದರೆ ಇಲ್ಲಿಂದ ಗೆಲುವಿನ ಇನ್ನಿಂಗ್ಸ್​ ಆಡಿದ ಬಾಲಂಗೋಚಿಗಳಾದ ಅಕಿಲ್ ಹೊಸೈನ್ ಮತ್ತು ಅಲ್ಜಾರಿ ಜೋಸೆಫ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 am, Mon, 7 August 23

ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!