
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಇಂದಿನಿಂದ ಅಂದರೆ ಜುಲೈ 27 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲ್ಲಿದೆ. ವೇಳಾಪಟ್ಟಿಯ ಪ್ರಕಾರ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನ ತನ್ನ ತಂಡದ ಹೊಸ ಏಕದಿನ ಜೆರ್ಸಿಯನ್ನು ಬಿಸಿಸಿಐ (BCCI) ಅನಾವರಣಗೊಳಿಸಿದೆ. ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಮುಂತಾದ ಆಟಗಾರರು ಹೊಸ ಡ್ರೀಮ್ ಇಲೆವೆನ್ ಏಕದಿನ ಜೆರ್ಸಿಯನ್ನು (new Dream11 ODI jerseys) ತೊಟ್ಟು ಕ್ಯಾಮೆರಗಳಿಗೆ ಪೋಸ್ ನೀಡಿದ್ದಾರೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 1 ನಿಮಿಷ 18 ಸೆಕೆಂಡ್ಗಳ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಆಟಗಾರರು ಹೊಸ ಏಕದಿನ ಜೆರ್ಸಿ ತೊಟ್ಟು ಮಿರಮಿರ ಮಿಂಚಿದ್ದಾರೆ. ವಾಸ್ತವವಾಗಿ ಯಾವುದೇ ಜೆರ್ಸಿಯಾಗಲಿ ಅಥವಾ ಕಿಟ್ ಆಗಲಿ, ಅದರ ಮೊದಲ ಪ್ರಚಾರದ ವೀಡಿಯೋಗಳಲ್ಲಿ ಸಾಮಾನ್ಯವಾಗಿ ಕೊಹ್ಲಿ ಮತ್ತು ರೋಹಿತ್ ಹೆಚ್ಚು ಗಮನ ಸೆಳೆಯುತ್ತಾರೆ. ಆದರೆ ಬಿಸಿಸಿಐ ಈಗ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಹಾಗೂ ರೋಹಿತ್ ಕಾಣಿಸಿಕೊಂಡಿಲ್ಲ.
IND vs WI: ಸಿರಾಜ್ ಬದಲು ಯಾರಿಗೆ ಚಾನ್ಸ್? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ
ಈ ಬಾರಿ ಅನುಭವದ ಜೋಡಿಗಿಂತ ಯುವಕರಿಗೆ ಆದ್ಯತೆ ನೀಡಲಾಗಿದ್ದು, ಗಿಲ್, ಸ್ಯಾಮ್ಸನ್ ಮತ್ತು ಕಿಶನ್ ಅವರಲ್ಲದೆ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಚಹಾಲ್ ಮತ್ತು ಉನದ್ಕಟ್ ಕೂಡ ಕಾಣಿಸಿಕೊಂಡಿದ್ದಾರೆ.
ಬಿಸಿಸಿಐ ಕಿಟ್ ಪ್ರಾಯೋಜಕತ್ವವನ್ನು ಮುಂದಿನ 5 ವರ್ಷಗಳವರೆಗೆ ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ಈ ಒಪ್ಪಂದವು ಮಾರ್ಚ್ 2028 ರವರೆಗೆ ಇರಲ್ಲಿದ್ದು, ಈ ಅವಧಿಯಲ್ಲಿ ಟೀಂ ಇಂಡಿಯಾ ಎಲ್ಲಾ ಸ್ವರೂಪದ ಕ್ರಿಕೆಟ್ನಲ್ಲಿ ಅಡಿಡಾಸ್ ಕಂಪನಿಯ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಪುರುಷರ, ಮಹಿಳಾ ಮತ್ತು ಯುವ ತಂಡಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಪಂದ್ಯಗಳು, ತರಬೇತಿ ಮತ್ತು ಪ್ರಯಾಣದ ಉಡುಗೆಗಳನ್ನು ಸಹ ಅಡಿಡಾಸ್ ಪೂರೈಸಲಿದೆ. ಈ ಹಿಂದೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾ ಅಡಿಡಾಸ್ ಪಾಯೋಜಕತ್ವದ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ