ಆಸ್ಟ್ರೇಲಿಯಾ ಎ ವಿರುದ್ಧದ ಟೆಸ್ಟ್; ಮೊದಲ ದಿನ 257 ರನ್ ಕಲೆಹಾಕಿದ ಭಾರತ ಎ

ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಅನಧಿಕೃತ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತ ಎ ತಂಡ 5 ವಿಕೆಟ್‌ಗೆ 257 ರನ್ ಗಳಿಸಿದೆ. ಕುಮಾರ್ ಕುಶಾಗ್ರ (80), ಸಾಯಿ ಸುದರ್ಶನ್ (57) ಮತ್ತು ತನುಷ್ ಕೋಟ್ಯಾನ್ (68*) ತಂಡಕ್ಕೆ ಆಸರೆಯಾದರು. ಆರಂಭಿಕ ಆಘಾತದ ನಂತರ ಕುಶಾಗ್ರ ಮತ್ತು ಕೋಟ್ಯಾನ್ ಉತ್ತಮ ಜೊತೆಯಾಟ ನೀಡಿದರು. ಆಸ್ಟ್ರೇಲಿಯಾದ ಕೋರಿ ರೊಚ್ಚಿಯೋಲಿ 3 ವಿಕೆಟ್ ಪಡೆದರು. ಎರಡನೇ ದಿನ ಕೋಟ್ಯಾನ್ ಮತ್ತು ಮುಲಾನಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಆಸ್ಟ್ರೇಲಿಯಾ ಎ ವಿರುದ್ಧದ ಟೆಸ್ಟ್; ಮೊದಲ ದಿನ 257 ರನ್ ಕಲೆಹಾಕಿದ ಭಾರತ ಎ
ಭಾರತ ಎ ತಂಡ

Updated on: Sep 22, 2026 | 6:40 PM

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯ ಇಂದಿನಿಂದ ಪಾಂಡಿಚೇರಿಯಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದೇವದತ್ ಪಡಿಕ್ಕಲ್ ನಾಯಕತ್ವದ ಭಾರತ ಎ ತಂಡ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 257 ರನ್ ಕಲೆಹಾಕಿದೆ. 68 ರನ್ ಬಾರಿಸಿ ತನುಷ್ ಕೋಟ್ಯಾನ್ ಮತ್ತು ಶಮ್ಸ್ ಮುಲಾನಿ 10 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಬ್ಬರಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ 80 ರನ್ ಬಾರಿಸಿ ಗಾಯಗೊಂಡು ನಿವೃತ್ತರಾಗಿದ್ದರೆ, ಸಾಯಿ ಸುದರ್ಶನ್ 57 ರನ್​ಗಳ ಇನ್ನಿಂಗ್ಸ್ ಆಡಿದರು.

3 ರನ್​ಗಳಿಗೆ ಸುಸ್ತಾದ ಪಡಿಕ್ಕಲ್

ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸಾಯಿ ಸುದರ್ಶನ್ ಮತ್ತು ಅಮನ್ ಮೊಖಡೆ ಭಾರತ ಎ ಪರ ಇನ್ನಿಂಗ್ಸ್ ಆರಂಭಿಸಿದರು. ಮೊಖಡೆ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಶ್ರೀಲಂಕಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನಾಯಕ ದೇವದತ್ ಪಡಿಕ್ಕಲ್ 3 ರನ್ ಗಳಿಸಲಷ್ಟೇ ಶಕ್ತರಾದರು. ಆ ಬಳಿಕ ಬಂದ ಶೇಖ್ ರಶೀದ್, ಸಾಯಿ ಸುದರ್ಶನ್ ಜೊತೆಗೂಡಿ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ರಶೀದ್ ಔಟಾದ ನಂತರ, ಯಶ್ ರಾಥೋಡ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಭಾರತದ 30.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 86 ರನ್ ಕಲೆಹಾಕಿತ್ತು.

ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?

ಅರ್ಧಶತಕ ಬಾರಿಸಿದ ಮೂವರು

ಇನ್ನು ಗಾಯದ ಕಾರಣದಿಂದಾಗಿ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದ ಸಾಯಿ ಸುದರ್ಶನ್ ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆಯಿತ್ತು, ಆದರೆ ಅರ್ಧಶತಕ ಬಾರಿಸಿದ ನಂತರ ಅವರೂ ಕೂಡ ಔಟಾದರು. ನಂತರ ಕುಮಾರ್ ಕುಶಾಗ್ರ ಮತ್ತು ತನುಷ್ ಕೋಟ್ಯಾನ್ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಕುಶಾಗ್ರ 160 ಎಸೆತಗಳಲ್ಲಿ 82 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರೆ, ಕೋಟ್ಯಾನ್ 134 ಎಸೆತಗಳಲ್ಲಿ 68 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆರಂಭಿಕ ಸಾಯಿ ಸುದರ್ಶನ್ 103 ಎಸೆತಗಳಲ್ಲಿ 57 ರನ್ ಬಾರಿಸಿದರೆ, ಶೇಖ್ ರಶೀದ್ 16 ರನ್ ಬಾರಿಸಿ ಔಟಾದರು. ಆಸ್ಟ್ರೇಲಿಯಾ ಎ ಪರ ಕೋರಿ ರೊಚ್ಚಿಯೋಲಿ 3 ವಿಕೆಟ್ ಪಡೆದರೆ, ಟಾಡ್ ಮರ್ಫಿ ಮತ್ತು ಫರ್ಗಸ್ ಒ’ನೀಲ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us