ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ; ಒಂದೇ ತಂಡದಲ್ಲಿ ಆಡಲಿದ್ದಾರೆ ಕೊಹ್ಲಿ- ಬಾಬರ್! ಪಂದ್ಯ ಯಾವಾಗ ಗೊತ್ತಾ?

ವಾಸ್ತವವಾಗಿ, ಮುಂದಿನ ವರ್ಷ ಆಫ್ರೋ ಏಷ್ಯಾ ಕಪ್ ಅನ್ನು ಮರುಪ್ರಾರಂಭಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹೀಗಾಗಿ ಉಭಯ ದೇಶಗಳ ಆಟಗಾರರನ್ನು ಒಂದೇ ತಂಡದಲ್ಲಿ ನೋಡುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ; ಒಂದೇ ತಂಡದಲ್ಲಿ ಆಡಲಿದ್ದಾರೆ ಕೊಹ್ಲಿ- ಬಾಬರ್! ಪಂದ್ಯ ಯಾವಾಗ ಗೊತ್ತಾ?
ಭಾರತ- ಪಾಕ್ ಆಟಗಾರರು
Follow us
TV9 Web
| Updated By: ಪೃಥ್ವಿಶಂಕರ

Updated on:Jun 17, 2022 | 3:57 PM

ಭಾರತ ಮತ್ತು ಪಾಕಿಸ್ತಾನ (India and Pakistan) ನಡುವೆ ದೀರ್ಘ ಕಾಲದಿಂದ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇದೀಗ ಭಾರತ ಮತ್ತು ಪಾಕಿಸ್ತಾನದ ಆಟಗಾರರ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಬರುತ್ತಿದೆ. ಈ ಸುದ್ದಿ ಏನಾದರೂ ಸತ್ಯವಾದರೆ ಎರಡೂ ದೇಶಗಳ ಆಟಗಾರರು ಒಂದೇ ತಂಡದಲ್ಲಿ ಆಡುವುದನ್ನು ನಾವು ಕಾಣಬಹುದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಡೂ ದೇಶಗಳ ಆಟಗಾರರು ಮುಂದಿನ ವರ್ಷ ಅಂದರೆ 2023 ರಲ್ಲಿ ಒಂದು ತಂಡಕ್ಕಾಗಿ ಆಡುವುದನ್ನು ಕಾಣಬಹುದು. ವಾಸ್ತವವಾಗಿ, ಮುಂದಿನ ವರ್ಷ ಆಫ್ರೋ ಏಷ್ಯಾ ಕಪ್ (Afro Asia Cup) ಅನ್ನು ಮರುಪ್ರಾರಂಭಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹೀಗಾಗಿ ಉಭಯ ದೇಶಗಳ ಆಟಗಾರರನ್ನು ಒಂದೇ ತಂಡದಲ್ಲಿ ನೋಡುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಯಾಕೆಂದರೆ ಇಲ್ಲಿಯವರೆಗೆ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಆದರೀಗ ಎರಡೂ ದೇಶದ ಆಟಗಾರರು ಒಂದೇ ತಂಡದಲ್ಲಿ ಆಡುವುದನ್ನು ಕಾಣಲು ಕಾತುರರಾಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಸರಣಿ ನಡೆದಿಲ್ಲ

ಭಾರತ ಮತ್ತು ಪಾಕಿಸ್ತಾನದ ನಡುವೆ ಕೊನೆಯ ದ್ವಿಪಕ್ಷೀಯ ಸರಣಿಯನ್ನು 2012- 2013 ರಲ್ಲಿ ಆಡಲಾಯಿತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಟೆಸ್ಟ್ ಪಂದ್ಯವನ್ನು 2007 ರಲ್ಲಿ ಆಡಲಾಯಿತು. ಪಾಕಿಸ್ತಾನಿ ಆಟಗಾರರು ಐಪಿಎಲ್‌ನಲ್ಲಿ ಕಂಡುಬರುವುದಿಲ್ಲ ಅಥವಾ ಭಾರತೀಯ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡುವುದಿಲ್ಲ. ಆಫ್ರೋ ಏಷ್ಯಾ ಕಪ್ ಕುರಿತು ಮಾತನಾಡುವುದಾದರೆ, ಈ ಪಂದ್ಯಾವಳಿಯನ್ನು 2005 ಮತ್ತು 2007 ರಲ್ಲಿ ಎರಡು ಬಾರಿ ಆಡಲಾಯಿತು. ಆದರೆ ನಂತರ ಪ್ರಸಾರ ಮತ್ತು ರಾಜಕೀಯ ಸಮಸ್ಯೆಗಳಿಂದಾಗಿ ಅದನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ
Image
IND vs SA: ಇಂದು ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಬಲ್ಲ ಐವರು ಕ್ರಿಕೆಟಿಗರಿವರು..!
Image
WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ

ಇದನ್ನೂ ಓದಿ:IND vs IRE: 6 ಎಸೆತಗಳಲ್ಲಿ 6 ಸಿಕ್ಸರ್! ಐಪಿಎಲ್​ನಲ್ಲಿ 413 ರನ್ ಚಚ್ಚಿದ ಬ್ಯಾಟರ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ

ದ್ರಾವಿಡ್, ಅಫ್ರಿದಿ ಜೊತೆಯಾಗಿ ಆಡಿದ್ದಾರೆ

ಈ ಟೂರ್ನಿಯಲ್ಲಿ ಏಷ್ಯಾ ತಂಡದ ಪರವಾಗಿ ರಾಹುಲ್ ದ್ರಾವಿಡ್, ಭಾರತದ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನದ ಶೋಯೆಬ್ ಮಲಿಕ್, ಶಾಹಿದ್ ಅಫ್ರಿದಿ ಜೊತೆಯಾಗಿ ಆಡಿದ್ದರು. ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆಯ ಆಟಗಾರರು ಆಫ್ರೋ ತಂಡದಲ್ಲಿ ಆಡಿದ್ದಾರೆ. ಈ ಪಂದ್ಯಾವಳಿಯ ನವೀಕರಿಸಿದ ಆವೃತ್ತಿಯನ್ನು ಮುಂದಿನ ವರ್ಷ ಜೂನ್-ಜುಲೈನಲ್ಲಿ T20 ಮಾದರಿಯಲ್ಲಿ ಆಡಬಹುದು. ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಟೂರ್ನಿಯ ಕುರಿತು ಹೆಚ್ಚಿನ ಚರ್ಚೆ ನಡೆಯಲಿದೆ. ವಾಸ್ತವವಾಗಿ, ಈ ಆಟವು ಏಷ್ಯಾದಲ್ಲಿ ಎಷ್ಟು ಹರಡಿದೆಯೋ, ಅದೇ ರೀತಿಯಲ್ಲಿ ಈ ಆಟವು ಆಫ್ರಿಕನ್ ದೇಶಗಳಲ್ಲಿ ಹರಡಬೇಕು ಮತ್ತು ಅಲ್ಲಿ ಈ ಆಟವನ್ನು ತಳಮಟ್ಟದಲ್ಲಿ ಬಲಪಡಿಸಬೇಕೆಂದು ಜಯ್ ಶಾ ಹೇಳಿದ್ದಾರೆ. ಇದಲ್ಲದೆ ಈ ಪಂದ್ಯಾವಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ ​​ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ.

Published On - 3:57 pm, Fri, 17 June 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ