IND vs IRE: ಭಾರತ ವಿರುದ್ಧದ ಸರಣಿಗೂ ಮುನ್ನ ಐರ್ಲೆಂಡ್‌ಗೆ ಆಘಾತ; ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ತಂಡದ ಮಾಜಿ ನಾಯಕ

IND vs IRE: 6 ವರ್ಷಗಳ ಕಾಲ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 212 ಪಂದ್ಯಗಳಲ್ಲಿ 5480 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ 23 ಅರ್ಧ ಶತಕ ಮತ್ತು 11 ಶತಕಗಳು ದಾಖಲಾಗಿವೆ.

IND vs IRE: ಭಾರತ ವಿರುದ್ಧದ ಸರಣಿಗೂ ಮುನ್ನ ಐರ್ಲೆಂಡ್‌ಗೆ ಆಘಾತ; ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ತಂಡದ ಮಾಜಿ ನಾಯಕ
ಪೋರ್ಟರ್‌ಫೀಲ್ಡ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 17, 2022 | 5:44 PM

ಭಾರತ ವಿರುದ್ಧದ ಎರಡು ಟಿ20 ಪಂದ್ಯಗಳ ಸರಣಿ (T20 match series against India) ಆರಂಭಕ್ಕೂ ಮುನ್ನ ಐರ್ಲೆಂಡ್‌ನ ದಿಗ್ಗಜ ಆಟಗಾರ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 16, ಗುರುವಾರದಂದು ಐರ್ಲೆಂಡ್‌ನ ಮಾಜಿ ನಾಯಕ ವಿಲಿಯಂ ಪೋರ್ಟರ್‌ಫೀಲ್ಡ್ (William Potterfield) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಪಾಟರ್‌ಫೀಲ್ಡ್ ಐರ್ಲೆಂಡ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ಅವರು ಐರ್ಲೆಂಡ್‌ಗಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಮತ್ತು ದೇಶಕ್ಕಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊನೆಗೂ ತನ್ನ ಈ ಸುದೀರ್ಘ ಪಯಣಕ್ಕೆ ಅಂತ್ಯ ಹಾಡಿದ್ದು, ಗುರುವಾರ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದರು.

ಐರ್ಲೆಂಡ್‌ಗೆ ಸುದೀರ್ಘ ನಾಯಕತ್ವ

2008 ರಲ್ಲಿ, ಟ್ರೆಂಟ್ ಜಾನ್ಸ್ಟನ್ ನಿರ್ಗಮನದ ನಂತರ, ಪೋರ್ಟರ್‌ಫೀಲ್ಡ್​ಗೆ ತಂಡದ ನಾಯಕತ್ವವನ್ನು ನೀಡಲಾಯಿತು. ಅವರು 253 ಪಂದ್ಯಗಳಲ್ಲಿ ದೇಶದ ನಾಯಕರಾಗಿದ್ದರು. ಈ ಮೂಲಕ ಐರ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವವಹಿಸಿದ ಆಟಗಾರನಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. ಪೋರ್ಟರ್‌ಫೀಲ್ಡ್ ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ವೆಸ್ಟ್ ಇಂಡೀಸ್​ನ ಕಿಂಗ್​ಸ್ಟನ್​ನಲ್ಲಿ ನಡೆದ ಈ ಏಕದಿನ ಪಂದ್ಯದಲ್ಲಿ ತಂಡ 2-1 ಅಂತರದಲ್ಲಿ ಸರಣಿ ಗೆದ್ದರೂ ಖಾತೆ ತೆರೆಯಲೂ ಸಾಧ್ಯವಾಗದೆ ಗೋಲ್ಡನ್ ಡಕ್ ಆದರು.

ಇದನ್ನೂ ಓದಿ
Image
ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ; ಒಂದೇ ತಂಡದಲ್ಲಿ ಆಡಲಿದ್ದಾರೆ ಕೊಹ್ಲಿ- ಬಾಬರ್! ಪಂದ್ಯ ಯಾವಾಗ ಗೊತ್ತಾ?
Image
IND vs SA: ಇಂದು ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸಬಲ್ಲ ಐವರು ಕ್ರಿಕೆಟಿಗರಿವರು..!
Image
WI vs BAN: 6 ಆಟಗಾರರು ಶೂನ್ಯಕ್ಕೆ ಔಟ್! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮುಜುಗರದ ದಾಖಲೆ ಬರೆದ ಬಾಂಗ್ಲಾದೇಶ

ಇದನ್ನೂ ಓದಿ:IND vs IRE: ಹಾರ್ದಿಕ್ ಭಾರತದ 9ನೇ ಟಿ20 ನಾಯಕ; 23 ವರ್ಷಗಳ ನಂತರ ಗುಜರಾತ್ ಆಟಗಾರನಿಗೆ ನಾಯಕತ್ವ!

ವಿಶ್ವಕಪ್‌ನಲ್ಲಿ ಶತಕ

ಎಡಗೈ ಸ್ಟಾರ್ ಬ್ಯಾಟ್ಸ್‌ಮನ್ ಏಕದಿನ ವೃತ್ತಿಜೀವನದಲ್ಲಿ 11 ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ಆಡಿದ 2015 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಶತಕವನ್ನು ಗಳಿಸಿದರು, ಇದು ಅವರ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ ಸೇರಿದೆ. ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧವೂ ಶತಕ ಬಾರಿಸಿದ್ದರು. ಪೋರ್ಟರ್‌ಫೀಲ್ಡ್ ಐರ್ಲೆಂಡ್‌ ಪರ ಎರಡು ಬಾರಿ ODI ವಿಶ್ವಕಪ್ ಮತ್ತು ಐದು ಬಾರಿ T20 ವಿಶ್ವಕಪ್‌ನ ಭಾಗವಾಗಿದ್ದಾರೆ. ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 16 ವರ್ಷಗಳ ಕಾಲ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 212 ಪಂದ್ಯಗಳಲ್ಲಿ 5480 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ 23 ಅರ್ಧ ಶತಕ ಮತ್ತು 11 ಶತಕಗಳು ದಾಖಲಾಗಿವೆ.

ಪೋರ್ಟರ್‌ಫೀಲ್ಡ್ 16 ವರ್ಷಗಳ ಪ್ರಯಾಣ ಅಂತ್ಯ

ನಿವೃತ್ತಿ ಘೋಷಿಸಿದ ಪೋರ್ಟರ್‌ಫೀಲ್ಡ್, ‘ನನ್ನ ದೇಶಕ್ಕಾಗಿ 16 ವರ್ಷಗಳ ಕಾಲ ಆಡುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾನು ಬಾಲ್ಯದಿಂದಲೂ ಬಯಸಿದ ವಿಷಯ. ನಿವೃತ್ತಿಯ ಈ ನಿರ್ಧಾರವು ಕಷ್ಟಕರವಾಗಿದೆ ಆದರೆ 2006 ರಲ್ಲಿ ಪ್ರಾರಂಭವಾದ ಪ್ರಯಾಣವು ತುಂಬಾ ಅದ್ಭುತವಾಗಿದೆ ಎಂದು ನನಗೆ ಸಂತೋಷವಾಗಿದೆ. ನನ್ನ ವೃತ್ತಿ ಜೀವನದಲ್ಲಿ ಹವ್ಯಾಸಿ ತಂಡ ಟೆಸ್ಟ್ ಆಡುವುದನ್ನು ನೋಡಿದ್ದೇನೆ. ನಾನು ಮೊದಲು ಮತ್ತು ನನ್ನೊಂದಿಗೆ ಆಡಿದವರು ಐರ್ಲೆಂಡ್ ತಂಡ ಬಲಿಷ್ಠವಾಗಲು ಸಹಾಯ ಮಾಡಿದರು ಎಂದಿದ್ದಾರೆ.

Published On - 5:44 pm, Fri, 17 June 22

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ