AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಎರಡನೇ ಟೆಸ್ಟ್​, ಜೋ ರೂಟ್ vs ಟೀಮ್ ಇಂಡಿಯಾ

India vs England 2nd Test: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ. ಇವರ ಬದಲಿಗೆ ಟೀಮ್ ಇಂಡಿಯಾದಲ್ಲಿ ಸರ್ಫರಾಝ್ ಖಾನ್, ವಾಷಿಂಗ್ಟನ್ ಸುಂದರ್ ಹಾಗೂ ಸೌರಭ್ ಕುಮಾರ್ ಸ್ಥಾನ ಪಡೆದಿದ್ದಾರೆ.

IND vs ENG: ಎರಡನೇ ಟೆಸ್ಟ್​, ಜೋ ರೂಟ್ vs ಟೀಮ್ ಇಂಡಿಯಾ
Joe Root vs Team India
TV9 Web
| Edited By: |

Updated on: Jan 30, 2024 | 2:40 PM

Share

ಫೆಬ್ರವರಿ 2 ರಿಂದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಜೋ ರೂಟ್ ವರ್ಸಸ್ ಟೀಮ್ ಇಂಡಿಯಾ ಎಂದು ಬಿಂಬಿತವಾಗಿದೆ. ಇದಕ್ಕೆ ಮುಖ್ಯ ಕಾರಣ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ಪೇರಿಸಿರುವ ರನ್​ಗಳು.

136 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ ಇದುವರೆಗೆ 11447 ರನ್ ಕಲೆಹಾಕಿದ್ದಾರೆ. ಇದರಲ್ಲಿ 5 ದ್ವಿಶತಕಗಳು, 30 ಶತಕಗಳು ಹಾಗೂ 60 ಅರ್ಧಶತಕಗಳು ಸೇರಿವೆ.

ಆದರೆ ಮತ್ತೊಂದೆಡೆ ಎರಡನೇ ಪಂದ್ಯಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಆಟಗಾರರು ಟೆಸ್ಟ್​ ಕ್ರಿಕೆಟ್​ನಲ್ಲಿ ಕಲೆಹಾಕಿರುವ ಒಟ್ಟು ರನ್​ 10726. ಅಂದರೆ ಪ್ರಸ್ತುತ ಭಾರತ ತಂಡದಲ್ಲಿರುವ ಯಾವುದೇ ಬ್ಯಾಟರ್ 5 ಸಾವಿರಕ್ಕಿಂತ ಹೆಚ್ಚು ರನ್ ಕಲೆಹಾಕಿಲ್ಲ.

ಹಾಗೆಯೇ ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಅತ್ಯಧಿಕ ರನ್ ಕಲೆಹಾಕಿರುವುದು ರೋಹಿತ್ ಶರ್ಮಾ. ಹಿಟ್​ಮ್ಯಾನ್ ಹೆಸರಿನಲ್ಲಿ 3801 ಟೆಸ್ಟ್​ ರನ್​ಗಳಿದ್ದರೆ, ಅಶ್ವಿನ್ ಖಾತೆಯಲ್ಲಿ 32,22 ಟೆಸ್ಟ್​ ರನ್​ಗಳಿವೆ. ಇವರಿಬ್ಬರನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟರ್ ಕೂಡ 3 ಸಾವಿರ ಟೆಸ್ಟ್ ರನ್​ಗಳ ಗಡಿ ತಲುಪಿಲ್ಲ.

ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಭಾರತ ತಂಡದ ಎಲ್ಲಾ ಆಟಗಾರರ ಒಟ್ಟು ರನ್ ಸೇರಿಸಿದರೂ ಜೋ ರೂಟ್​ಗಿಂತ 721 ರನ್​ಗಳ ಮುನ್ನಡೆ ಹೊಂದಿದ್ದಾರೆ. ಹೀಗಾಗಿಯೇ 2ನೇ ಟೆಸ್ಟ್ ಪಂದ್ಯವನ್ನು ಭಾರತ vs ಜೋ ರೂಟ್ ಎಂದು ಬಿಂಬಿಸಲಾಗುತ್ತಿದೆ.

  • ಭಾರತ ತಂಡದಲ್ಲಿರುವ ಆಟಗಾರರ ಒಟ್ಟು ಟೆಸ್ಟ್​ ರನ್ಸ್​- 10726
  • ಜೋ ರೂಟ್ ಅವರ ಟೆಸ್ಟ್ ರನ್ಸ್​- 11447

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಸರ್ಫರಾಝ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಅವೇಶ್ ಖಾನ್.

ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್, ಒಲೀ ರಾಬಿನ್ಸನ್, ಜೇಮ್ಸ್ ಅ್ಯಂಡರ್ಸನ್, ಡೇನಿಯಲ್ ಲಾರೆನ್ಸ್, ಗಸ್ ಅಟ್ಕಿನ್ಸನ್.