AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಟೀಮ್ ಇಂಡಿಯಾಗೆ ಭರ್ಜರಿ ಜಯ: ಸರಣಿ ಕ್ಲೀನ್ ಸ್ವೀಪ್

India vs West Indies Test Series: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. 2 ಪಂದ್ಯಗಳ ಈ ಸರಣಿಯ ಎರಡೂ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 140 ರನ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಇದೀಗ ದ್ವಿತೀಯ ಪಂದ್ಯದಲ್ಲೂ ಜಯಭೇರಿ ಬಾರಿಸಿದೆ.

IND vs WI: ಟೀಮ್ ಇಂಡಿಯಾಗೆ ಭರ್ಜರಿ ಜಯ: ಸರಣಿ ಕ್ಲೀನ್ ಸ್ವೀಪ್
Team India
ಝಾಹಿರ್ ಯೂಸುಫ್
|

Updated on: Oct 14, 2025 | 10:32 AM

Share

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್​ಮನ್ ಗಿಲ್ (129) ಶತಕ ಸಿಡಿಸಿದ್ದರು. ಈ ಸೆಂಚುರಿಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ವೆಸ್ಟ್ ಇಂಡೀಸ್ ತಂಡವು ಕೇವಲ 248 ರನ್​ಗಳಿಗೆ ಆಲೌಟ್ ಆಗಿದ್ದರು. ಅತ್ತ 270 ರನ್​ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಫಾಲೋ ಆನ್ ಹೇರಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಜಾನ್​ ಕ್ಯಾಂಪ್​ಬೆಲ್ (115) ಹಾಗೂ ಶೈ ಹೋಪ್ (103) ಶತಕ ಸಿಡಿಸಿದರು.

ಇನ್ನು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಸ್ಟಿನ್ ಗ್ರೀವ್ಸ್ 50 ರನ್​ಗಳ ಕೊಡಗೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 390 ರನ್​ಗಳಿಸಿ ಆಲೌಟ್ ಆಯಿತು.

121 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿ 270 ರನ್​ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 121 ರನ್​ಗಳ ಗುರಿ ಪಡೆಯಿತು. ಅದರಂತೆ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ ಭಾರತ ತಂಡವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ 79 ರನ್​ಗಳ ಜೊತೆಯಾಟವಾಡಿದರು. ಆದರೆ ತಂಡದ ಮೊತ್ತ 88 ರನ್ ಆಗಿದ್ದ ವೇಳೆ ಸಾಯಿ ಸುದರ್ಶನ್ (39) ಔಟಾದರು. ಇದರ ಬೆನ್ನಲ್ಲೇ ಶುಭ್​ಮನ್ ಗಿಲ್ (13) ಕೂಡ ವಿಕೆಟ್ ಒಪ್ಪಿಸಿದರು.

ಆ ನಂತರದ ಜೊತೆಗೂಡಿದ ಕೆಎಲ್ ರಾಹುಲ್ (58) ಹಾಗೂ ಧ್ರುವ್ ಜುರೆಲ್ (6) 35.1 ಓವರ್​ಗಳಲ್ಲಿ ತಂಡವನ್ನು 124 ರನ್​ಗಳ ಗುರಿ ತಲುಪಿಸುವ ಮೂಲಕ ಭಾರತ ತಂಡಕ್ಕೆ 7 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ಶುಭ್​ಮನ್ ಗಿಲ್ (ನಾಯಕ) , ಧ್ರುವ ಜುರೆಲ್ ( ​​ವಿಕೆಟ್ ಕೀಪರ್ ) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಕುಲ್ದೀಪ್ ಯಾದವ್ , ಜಸ್​ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: IPL 2026: ಐಪಿಎಲ್​ ಆಟಗಾರರ ರಿಟೈನ್​ಗೆ ಡೇಟ್ ಫಿಕ್ಸ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ಜಾನ್ ಕ್ಯಾಂಪ್‌ಬೆಲ್ , ತೇಜ್​ನರೈನ್ ಚಂದ್ರಪಾಲ್ , ಅಲಿಕ್ ಅಥನಾಝ್ , ಶೈ ಹೋಪ್ , ರೋಸ್ಟನ್ ಚೇಸ್ (ನಾಯಕ) , ಟೆವಿನ್ ಇಮ್ಲಾಚ್ (ವಿಕೆಟ್ ಕೀಪರ್) , ಜಸ್ಟಿನ್ ಗ್ರೀವ್ಸ್ , ಜೋಮೆಲ್ ವಾರಿಕನ್ , ಖಾರಿ ಪಿಯರೆ , ಆಂಡರ್ಸನ್ ಫಿಲಿಪ್ , ಜೇಡನ್ ಸೀಲ್ಸ್.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ