IND vs IRE: ಅಭ್ಯಾಸಕ್ಕೂ ಅವಕಾಶ ನೀಡದ ಮಳೆ; 2ನೇ ಟಿ20 ಪಂದ್ಯ ರದ್ದು?

India vs Ireland 2nd T20: ಭಾರತ ಮತ್ತು ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಇಂದು ಸಂಜೆ ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ. ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಭಾರತ ಸೋತಿದ್ದರಿಂದ, ಈ ಪಂದ್ಯ ರದ್ದಾದರೆ ಸರಣಿಯನ್ನು ಕಳೆದುಕೊಳ್ಳಲಿದೆ. ಇದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದ್ದು, ಐರ್ಲೆಂಡ್ ಇತಿಹಾಸ ನಿರ್ಮಿಸಲಿದೆ.

IND vs IRE: ಅಭ್ಯಾಸಕ್ಕೂ ಅವಕಾಶ ನೀಡದ ಮಳೆ; 2ನೇ ಟಿ20 ಪಂದ್ಯ ರದ್ದು?
Ind Vs Ire Weather

Updated on: Jun 28, 2026 | 4:10 PM

ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಅಂದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಆದರೆ ಈ ಮೊದಲೇ ಹವಮಾನ ಇಲಾಖೆ ವರದಿಮಾಡಿರುವ ಪ್ರಕಾರ, ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಿರಂತರವಾಗಿ ಮಳೆ (Belfast weather forecast) ಸುರಿಯುತ್ತಿದೆ. ಇದರಿಂದಾಗಿ ಉಭಯ ತಂಡಗಳು ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಲಾಗಿದೆ. ಇದೀಗ ಮಳೆಯಿಂದಾಗಿ ಪಂದ್ಯ ರದ್ದಾದರೆ, ಟೀಂ ಇಂಡಿಯಾಕ್ಕೆ ಇದು ದೊಡ್ಡ ಆಘಾತವಾಗಲಿದೆ. ಏಕೆಂದರೆ ಭಾರತ ಈಗಾಗಲೇ ಮೊದಲ ಟಿ20 ಪಂದ್ಯವನ್ನು ಸೋತಿರುವ ಕಾರಣ ಈ ಪಂದ್ಯ ರದ್ದಾದರೆ ಸರಣಿಯನ್ನು ಕಳೆದುಕೊಳ್ಳಲಿದೆ.

ಮಳೆಯಿಂದ ಅಭ್ಯಾಸ ರದ್ದು

ಮಳೆಯಿಂದಾಗಿ ಬೆಲ್‌ಫಾಸ್ಟ್‌ನ ಸಂಪೂರ್ಣ ಮೈದಾನವು ಒದ್ದೆಯಾಗಿದ್ದ ಕಾರಣ ಶನಿವಾರದ ತರಬೇತಿ ಶಿಬಿರವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕಾಯಿತು. ಇದೀಗ ಪಂದ್ಯದ ದಿನವೂ ಮಳೆಯಾಗುವ ಸೂಚನೆ ಇದೆ. ಇದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಇಂದು ನಡೆಯಬೇಕಿದ್ದ ಎರಡನೇ ಪಂದ್ಯವೂ ಮಳೆಯಿಂದಾಗಿ ರದ್ದಾದರೆ, ಭಾರತ ತಂಡವು ಐರ್ಲೆಂಡ್ ವಿರುದ್ಧ 0-1 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಐರ್ಲೆಂಡ್‌ನಂತಹ ಸಣ್ಣ ತಂಡದ ವಿರುದ್ಧ ಸರಣಿಯನ್ನು ಕಳೆದುಕೊಳ್ಳುವುದು ಭಾರತಕ್ಕೆ ಕ್ರಿಕೆಟ್ ಇತಿಹಾಸದಲ್ಲಿ ಅನಿರೀಕ್ಷಿತ ಮತ್ತು ದೊಡ್ಡ ಹೊಡೆತವಾಗುತ್ತದೆ.

ಹವಾಮಾನ ವರದಿ

ಹವಾಮಾನ ವರದಿಯ ಪ್ರಕಾರ, ಪಂದ್ಯ ದಿನದಂದು ಬೆಲ್‌ಫಾಸ್ಟ್​ನಲ್ಲಿ ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಿದೆ. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮಳೆ ಬೀಳಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಟಾಸ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟು ಇದೆ. ಅದಕ್ಕೂ ಒಂದು ಗಂಟೆ ಮೊದಲು ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಟಾಸ್ ನಂತರ ಒಂದು ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ.

ರಾತ್ರಿ 8:30 ರ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಪಂದ್ಯವನ್ನು ಕಡಿಮೆ ಓವರ್‌ಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ ಪಂದ್ಯವು ಮಳೆಯಿಂದ ರದ್ದಾದರೆ, ಐರ್ಲೆಂಡ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Sun, 28 June 26

Follow Us