ಭಾರತ- ಜಪಾನ್ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಹವಾಮಾನ ವರದಿ ಇಲ್ಲಿದೆ

ಭಾರತ-ಜಪಾನ್ ನಡುವಿನ ಏಕೈಕ T20 ಪಂದ್ಯ ಸೆಪ್ಟೆಂಬರ್ 22 ರಂದು ಸಾನೋದಲ್ಲಿ ನಡೆಯಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ತಂಡಗಳು ಕ್ರಿಕೆಟ್​ನಲ್ಲಿ ಎದುರಾಗಲಿವೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಸಾನೋ ಕ್ರೀಡಾಂಗಣದ ಕಳಪೆ ಒಳಚರಂಡಿ ವ್ಯವಸ್ಥೆ ಆತಂಕ ಹೆಚ್ಚಿಸಿದೆ. ನಾಯಕ ಶ್ರೇಯಸ್ ಅಯ್ಯರ್ ಮಳೆ ಬರದಂತೆ ಆಶಿಸಿದ್ದಾರೆ. ಈ ಐತಿಹಾಸಿಕ ಮುಖಾಮುಖಿ ಕುತೂಹಲ ಕೆರಳಿಸಿದೆ.

ಭಾರತ- ಜಪಾನ್ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಹವಾಮಾನ ವರದಿ ಇಲ್ಲಿದೆ
ಭಾರತ Vs ಜಪಾನ್

Updated on: Sep 21, 2026 | 8:39 PM

ಭಾರತ ಮತ್ತು ಜಪಾನ್ ನಡುವಿನ ಏಕೈಕ ಟಿ20 ಪಂದ್ಯ ಸೆಪ್ಟೆಂಬರ್ 22 ರಂದು ಸಾನೋ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಜಪಾನ್ ತಂಡಗಳು ಕ್ರಿಕೆಟ್​ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಕ್ರಿಕೆಟ್​ನಲ್ಲಿ ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಜಪಾನ್ ಈಗಷ್ಟೇ ಅಂಬೆಗಾಲಿಡುತ್ತಿದೆ. ಹೀಗಾಗಿ ಟೀಂ ಇಂಡಿಯಾಕ್ಕೆ ಗೆಲುವು ಖಚಿತವೆನಿಸಿದರೂ ಕ್ರಿಕೆಟ್ ಶಿಶು ಜಪಾನ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಆದಾಗ್ಯೂ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಪಂದ್ಯದ ದಿನದಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಆದಾಗ್ಯೂ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಹವಾಮಾನವು ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ‘ಪಂದ್ಯ ಆರಂಭವಾಗಲು ತಾವು ಮತ್ತು ತಮ್ಮ ತಂಡ ಕಾತರದಿಂದ ಕಾಯುತ್ತಿದ್ದೇವೆ. ಇದು ನಮಗೆ ರೋಮಾಂಚಕ ಅನುಭವವಾಗಲಿದೆ. ನಾವು ಮೊದಲ ಬಾರಿಗೆ ಜಪಾನ್ ವಿರುದ್ಧ ಆಡುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿಗಳು ಮತ್ತು ಪಿಚ್ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ, ಆದರೆ ನಾನು ಉತ್ತಮ ಪಂದ್ಯವನ್ನು ನಿರೀಕ್ಷಿಸುತ್ತಿದ್ದೇನೆ. ಜಪಾನ್ ವಿರುದ್ಧದ ಪಂದ್ಯಕ್ಕಾಗಿ ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಮಳೆ ಬಾರದೇ ಇರಬೇಕೆಂದು ಆಶಿಸುತ್ತೇವೆ. ಕ್ರೀಡಾಂಗಣಕ್ಕೆ ಬರುವ ಎಲ್ಲಾ ಅಭಿಮಾನಿಗಳು ಉತ್ತಮ ಪಂದ್ಯವನ್ನು ನೋಡಲಿದ್ದಾರೆ’ ಎಂದು ಅಯ್ಯರ್ ಹೇಳಿದ್ದಾರೆ.

ಹವಾಮಾನ ಹೇಗಿರಲಿದೆ?

ಹವಾಮಾನ ವರದಿಯ ಪ್ರಕಾರ, ಸೋಮವಾರ ಸಾನೋದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಮತ್ತು ಮಂಗಳವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಇದೇ ರೀತಿಯ ಹವಾಮಾನ ಮುಂದುವರೆಯುವ ನಿರೀಕ್ಷೆಯಿದೆ. ಇದರರ್ಥ ಪಂದ್ಯದ ಸಮಯದಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಪ್ರಶ್ನೆಯೆಂದರೆ, ಮಳೆಯಿಂದಾಗಿ ಕ್ರೀಡಾಂಗಣದ ಹೊರಾಂಗಣವು ಹಾನಿಗೊಳಗಾದರೆ, ಪಂದ್ಯವು ನಡೆಯುವುದು ಅಸಾಧ್ಯ. ಏಕೆಂದರೆ ಜಪಾನಿನ ಮೈದಾನವು ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ಹೊಂದಿಲ್ಲ. ಭಾರೀ ಮಳೆಯಿಂದಾಗಿ ಟೀಂ ಇಂಡಿಯಾ ತಮ್ಮ ಅಭ್ಯಾಸವನ್ನು ರದ್ದುಗೊಳಿಸಿದೆ.

ಒಂದೇ ದಿನ ಒಂದೇ ಸಮಯದಲ್ಲಿ ಟೀಂ ಇಂಡಿಯಾಕ್ಕೆ 2 ಪಂದ್ಯಗಳು

ಜಪಾನ್‌ನ ಸೌಂದರ್ಯಕ್ಕೆ ಶ್ರೇಯಸ್ ಫಿದಾ

ಜಪಾನ್‌ನ ಸೌಂದರ್ಯಕ್ಕೆ ಮಾರುಹೋಗಿರುವ ಶ್ರೇಯಸ್ ಅಯ್ಯರ್, ‘ಜಪಾನ್ ಸುಂದರ ದೇಶ. ಇಲ್ಲಿನ ಜನರು ನಂಬಲಾಗದಷ್ಟು ಸ್ನೇಹಪರರು. ಆತಿಥ್ಯ ಅದ್ಭುತವಾಗಿದೆ. ನಾನು ಜಪಾನ್ ಮತ್ತು ಟೋಕಿಯೊ ನಗರದ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಇದೀಗ ನಾನು ಅದನ್ನು ಇನ್ನಷ್ಟು ಅನ್ವೇಷಿಸಲು ಬಯಸುತ್ತೇನೆ. ಇಲ್ಲಿನ ಅನುಭವವು ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್‌ಗೆ ಹೋಗುವುದಕ್ಕಿಂತ ಭಿನ್ನವಾಗಿದೆ. ಇಲ್ಲಿನ ಸಂಸ್ಕೃತಿ ವಿಶಿಷ್ಟವಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us