AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಮೆಲ್ಬೋರ್ನ್ ಟೆಸ್ಟ್ ಸೋಲಿಗೆ ರೋಹಿತ್ ಶರ್ಮಾ ದೂರಿದ್ದು ಯಾರನ್ನ?

IND vs AUS: ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿದೆ. ರೋಹಿತ್ ಶರ್ಮಾ ಪಂದ್ಯದ ನಂತರ ನೀಡಿದ ಹೇಳಿಕೆಯಲ್ಲಿ ಯುವ ಆಟಗಾರರನ್ನು ಪರೋಕ್ಷವಾಗಿ ದೂಷಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಅವರು ಉತ್ತಮ ಪ್ರದರ್ಶನ ನೀಡಿದ್ದರೂ, ರೋಹಿತ್ ಅವರ ಹೇಳಿಕೆ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

IND vs AUS: ಮೆಲ್ಬೋರ್ನ್ ಟೆಸ್ಟ್ ಸೋಲಿಗೆ ರೋಹಿತ್ ಶರ್ಮಾ ದೂರಿದ್ದು ಯಾರನ್ನ?
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on: Dec 30, 2024 | 4:47 PM

Share

ಮೆಲ್ಬೋರ್ನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಇದೀಗ ಸತತ ಮೂರನೇ ಬಾರಿಗೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲುವುದರಿಂದ ವಂಚಿತವಾಗಿದೆ. ಕಳೆದೆರಡು ಮುಖಾಮುಖಿಯಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದ್ದ ಟೀಂ ಇಂಡಿಯಾಕ್ಕೆ ಈ ಬಾರಿ ಅದು ಸಾಧ್ಯವಾಗಲಿಲ್ಲ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ ರೋಹಿತ್ ಪಡೆಯ ವಿರುದ್ಧ ಇದೀಗ ಅಭಿಮಾನಿಗಳು ಹಿಡಿ ಶಾಪ ಹಾಕುತ್ತಿದ್ದಾರೆ. ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ ತಂಡದ ಸೋಲಿನ ಮರಣೋತ್ತರ ಪರೀಕ್ಷೆ ಮಾಡಿರುವ ರೋಹಿತ್ ಯುವ ಆಟಗಾರರ ಮೇಲೆ ಗೂಬೆ ಕೂರಿಸಿದ್ದಾರೆ.

ರೋಹಿತ್ ಶರ್ಮಾ ವಿಚಿತ್ರ ಹೇಳಿಕೆ

ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ‘ಪಂದ್ಯ ಸೋತಾಗ ಹೆಚ್ಚು ನೋವಾಗುತ್ತದೆ. ತಂಡದ ಬ್ಯಾಟ್ಸ್‌ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ನಮಗೆ ಪಂದ್ಯವನ್ನು ಗೆಲ್ಲುವ ಅವಕಾಶವಿತ್ತು. ಕೊನೆಯ ಪಕ್ಷ ನಾವು ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದಿತ್ತು. ನಾವು ಪ್ರಯತ್ನಿಸಿದೆವಾದರೂ ಅದು ಸಾಧ್ಯವಾಗಲಿಲ್ಲ. ಇತ್ತ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿತ್ತು ರನ್ ಗಳಿಸಿದವರು ಇನ್ನೂ ಹೆಚ್ಚು ಸಮಯ ಆಡಬಹುದಿತ್ತು. ಆದರೆ ಅವರು ಕೂಡ ವಿಕೆಟ್ ಕೈಚೆಲ್ಲಿದರು. ಆದರೆ ಅವರು ಇನ್ನು ಹೊಸಬರು, ಅವರಿನ್ನು ಕಲಿಯುತ್ತಿದ್ದಾರೆ ಎಂದಿದ್ದಾರೆ.

ಇನ್ನು ಸೋಲಿನ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ‘ಸೋತಿರುವುದು ತುಂಬಾ ನಿರಾಸೆ ತಂದಿದೆ. ನಾವು ಕೊನೆಯವರೆಗೂ ಹೋರಾಡಲು ಬಯಸಿದ್ದೆವು ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಸೆಷನ್ ಅಷ್ಟೇ ಅಲ್ಲ, ಇಡೀ ಪಂದ್ಯದಲ್ಲಿ ಎಲ್ಲಿ ತಪ್ಪು ನಡೆದಿದೆ ಎಂಬುದನ್ನು ನೋಡಬೇಕಿದೆ. ಇಡೀ ಟೆಸ್ಟ್ ಪಂದ್ಯದಲ್ಲಿ ನಮಗೆ ಅವಕಾಶವಿತ್ತು. ಆದರೆ ನಾವು ಆಸ್ಟ್ರೇಲಿಯ ತಂಡಕ್ಕೆ ಹಲವು ಅವಕಾಶಗಳನ್ನು ನೀಡಿದ್ದೇವೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗೆ 90 ರನ್‌ ಕಲೆಹಾಕಿತ್ತು. ಆದರೆ ಅಲ್ಲಿಂದ ನಾವು ಎಚ್ಚರ ತಪ್ಪಿದೆವು ಎಂದಿದ್ದಾರೆ.

ಯುವ ಆಟಗಾರರ ತಪ್ಪೇ?

ವಾಸ್ತವವಾಗಿ ರೋಹಿತ್ ಸೋಲಿಗೆ ಕಾರಣವನ್ನು ನೀಡುವ ಸಮಯದಲ್ಲಿ ರನ್ ಗಳಿಸಿದವರು ಕ್ರೀಸ್‌ನಲ್ಲಿ ಇನ್ನು ಹೆಚ್ಚು ಹೊತ್ತು ಕಾಲ ಕಳೆಯಬಹುದಾಗಿತ್ತು ಎಂದಿದ್ದಾರೆ. ಇದರರ್ಥ ರೋಹಿತ್, ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಅವರನ್ನು ಪರೋಕ್ಷವಾಗಿ ಸೋಲಿಗೆ ಮಾಡುತ್ತಿರುವ ಹಾಗಿದೆ. ವಾಸ್ತವವಾಗಿ ಈ ಇಬ್ಬರೂ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರು. ಆದರೆ ಚಹಾ ವಿರಾಮದ ನಂತರ, ಮೊದಲು ಪಂತ್ ಔಟಾದರೆ ಆ ನಂತರ ಯಶಸ್ವಿ ಜೈಸ್ವಾಲ್ ಕೂಡ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಆದರೂ ಈ ಇಬ್ಬರು ತಂಡದ ಸೋಲಿನ ಅಂತರವನ್ನು ತಗ್ಗಿಸಿದಲ್ಲದೆ, ಆಸೀಸ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿದರು. ಹೀಗಿರುವಾಗ ಕೇವಲ ಒಂದಂಕಿಗೆ ಸುಸ್ತಾಗುತ್ತಿರುವ ರೋಹಿತ್ ಶರ್ಮಾ ಈ ಆಟಗಾರರನ್ನು ದೂಷಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್: