Team India: ಟಿ20 ವಿಶ್ವಕಪ್ಗೆ 15 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿದ ನೆಹ್ರಾ
India squad for T20 World Cup 2022: ಈ ತಂಡದಲ್ಲಿ 5 ಬೌಲರ್ಗಳನ್ನು ಹಾಗೂ 4 ಆಲ್ರೌಂಡರ್ಗಳನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ 6 ಬ್ಯಾಟ್ಸ್ಮನ್ಗಳಿಗೆ ಮಣೆ ಹಾಕಿದ್ದಾರೆ.
India squad for T20 World Cup 2022: ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಇದೀಗ ದಿನಗಣನೆ ಶುರುವಾಗಿದೆ. ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯಾ ಟಿ20 ವಿಶ್ವಕಪ್ಗಾಗಿ ತಮ್ಮ ತಂಡಗಳನ್ನು ಘೋಷಿಸಿದೆ. ಇದೇ ವಾರದಲ್ಲಿ ಭಾರತ ತಂಡವನ್ನು ಕೂಡ ಪ್ರಕಟಿಸಲಾಗುತ್ತಿದ್ದು, ಈ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬುದೇ ಈಗ ಕುತೂಹಲ. ಈ ಕುತೂಹಲವನ್ನು ಇಮ್ಮಡಿಗೊಳಿಸುವಂತೆ ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ 15 ಸದಸ್ಯರ ಸಂಭಾವ್ಯ ಬಳಗವನ್ನು ಪ್ರಕಟಿಸಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿರುವ ನೆಹ್ರಾ, 15 ಮಂದಿಯನ್ನು ಹೆಸರಿಸಿದ್ದಾರೆ. ಅಲ್ಲದೆ ಈ ಬಳಗವನ್ನು ಕಣಕ್ಕಿಳಿಸಿದರೆ ಈ ಬಾರಿ ಭಾರತ ಟಿ20 ವಿಶ್ವಕಪ್ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಶಿಶ್ ನೆಹ್ರಾ ತಮ್ಮ ತಂಡದಲ್ಲಿ 5 ಬೌಲರ್ಗಳನ್ನು ಹಾಗೂ 4 ಆಲ್ರೌಂಡರ್ಗಳನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ 6 ಬ್ಯಾಟ್ಸ್ಮನ್ಗಳಿಗೆ ಮಣೆ ಹಾಕಿದ್ದಾರೆ. ಇನ್ನು ಏಷ್ಯಾಕಪ್ನಲ್ಲಿ ಕಾಣಿಸಿಕೊಂಡಿದ್ದ ಅಕ್ಷರ್ ಪಟೇಲ್, ದೀಪಕ್ ಚಹರ್, ಅವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ. ಹಾಗಿದ್ರೆ ನೆಹ್ರಾ ಅವರ ಟಿ20 ವಿಶ್ವಕಪ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ…
- ರೋಹಿತ್ ಶರ್ಮಾ
- ಕೆಎಲ್ ರಾಹುಲ್
- ವಿರಾಟ್ ಕೊಹ್ಲಿ
- ರಿಷಬ್ ಪಂತ್
- ಸೂರ್ಯಕುಮಾರ್ ಯಾದವ್
- ಹಾರ್ದಿಕ್ ಪಾಂಡ್ಯ
- ರವೀಂದ್ರ ಜಡೇಜಾ
- ದೀಪಕ್ ಹೂಡಾ
- ಯುಜುವೇಂದ್ರ ಚಾಹಲ್
- ರವಿಚಂದ್ರನ್ ಅಶ್ವಿನ್
- ದಿನೇಶ್ ಕಾರ್ತಿಕ್
- ಜಸ್ಪ್ರೀತ್ ಬುಮ್ರಾ
- ಹರ್ಷಲ್ ಪಟೇಲ್
- ಅರ್ಷ್ದೀಪ್ ಸಿಂಗ್
- ಭುವನೇಶ್ವರ್ ಕುಮಾರ್
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಅಕ್ಟೋಬರ್ 16 ರಿಂದ ಚಾಲನೆ ಸಿಗಲಿದೆ. ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಅಕ್ಟೋಬರ್ 22 ರಿಂದ ಸೂಪರ್ 12 ಪಂದ್ಯಗಳು ಶುರುವಾಗಲಿದೆ. ಸೂಪರ್-12 ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ ಹೀಗಿದೆ:
- ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 23
- ಭಾರತ vs ಅರ್ಹತಾ ಸುತ್ತಿನ ರನ್ನರ್ ಅಪ್ ತಂಡ, ಸಿಡ್ನಿ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 27
- ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಸ್ಟೇಡಿಯಂ, ಅಕ್ಟೋಬರ್ 30
- ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್, ನವೆಂಬರ್ 2