ಟಿ20 ವಿಶ್ವಕಪ್ ಫೈನಲ್; ಅಹಮದಾಬಾದ್‌ನಲ್ಲಿ 10 ಸಾವಿರದಿಂದ ಮುಕ್ಕಾಲು ಲಕ್ಷಕ್ಕೇರಿದ ರೂಮ್​ ಬೆಲೆ

T20 World Cup Final: 2026ರ ಟಿ20 ವಿಶ್ವಕಪ್ ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡ ಫೈನಲ್‌ ಪ್ರವೇಶಿಸಿದ ನಂತರ, ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್‌ಗೆ ಧಾವಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಹೋಟೆಲ್‌ ಬಾಡಿಗೆಗಳು ಐದು ಪಟ್ಟು ಹೆಚ್ಚಾಗಿ, ರೂ 10,000ದಿಂದ ರೂ 75,000ಕ್ಕೆ ಏರಿವೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಇದೇ ರೀತಿ ದರ ಹೆಚ್ಚಳವಾಗಿತ್ತು.

ಟಿ20 ವಿಶ್ವಕಪ್ ಫೈನಲ್; ಅಹಮದಾಬಾದ್‌ನಲ್ಲಿ 10 ಸಾವಿರದಿಂದ ಮುಕ್ಕಾಲು ಲಕ್ಷಕ್ಕೇರಿದ ರೂಮ್​ ಬೆಲೆ
India Vs New Zealand

Updated on: Mar 06, 2026 | 5:34 PM

2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಐಸಿಸಿ ಈವೆಂಟ್​ನ ಫೈನಲ್ ಆಡಲು ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣ ಫೈನಲ್ ಕಾಳಗಕ್ಕೆ ತಯಾರಾಗಿ ನಿಂತಿದೆ. ಅದರಲ್ಲೂ ಆತಿಥೇಯ ಭಾರತ ಫೈನಲ್​ ಪ್ರವೇಶಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತ್ತಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದಂಡು ಅಹಮದಾಬಾದ್​ನ ಪ್ರಯಾಣ ಬೆಳೆಸಲು ಶುರುಮಾಡಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಅಹಮದಾಬಾದ್​ನ ಹೋಟೆಲ್​ಗಳು ರೂಮ್ ಬಾಡಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಿವೆ.

10 ರಿಂದ 75 ಸಾವಿರಕ್ಕೆ ಏರಿಕೆ

ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ಮಾರ್ಚ್ 8 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಅಭಿಮಾನಿಗಳು ಅಹಮದಾಬಾದ್​ನತ್ತ ಬರುವುದನ್ನು ಖಚಿತವಾಗಿರುವುದರಿಂದ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಮಾರ್ಚ್ 7 ಮತ್ತು 8 ರಂದು ಹೋಟೆಲ್​ನ ರೂಮ್​ನ ಬಾಡಿಗೆಗಳು ರೂ. 75 ಸಾವಿರ ತಲುಪಿವೆ. ಈ ಮೊದಲು 10 ಸಾವಿರಕ್ಕೆ ಲಭ್ಯವಿರುವ ಕೋಣೆಯ ಬಾಡಿಗೆ 40 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಹಯಾತ್ ರೀಜೆನ್ಸಿ ಮತ್ತು ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳ ಬಾಡಿಗೆ ಹೆಚ್ಚಾಗಿದೆ. ಮ್ಯಾರಿಯಟ್, ಐಟಿಸಿ ಮತ್ತು ಫಾರ್ಚೂನ್ ಹೋಟೆಲ್‌ಗಳ ಬಾಡಿಗೆಯೂ ಹೆಚ್ಚಾಗಿದೆ.

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಐದು ಪಟ್ಟು ಹೆಚ್ಚಳ

ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಹೋಟೆಲ್ ರೂಮ್ ಬೆಲೆ ಹೆಚ್ಚಾಗುವ ನಿರೀಕ್ಷೆ ಮುಂಚೆಯೇ ಇತ್ತು. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ಫೈನಲ್​ಗೇರಿದ ಬಳಿಕ ಅಹಮದಾಬಾದ್‌ಗೆ ಬರುವ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಾಳವಾಗಿದೆ. ಹೀಗಾಗಿ ಕೊಠಡಿ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು, 2023 ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಸಮಯದಲ್ಲಿ ಹೋಟೆಲ್ ಬೆಲೆಗಳು ಗಗನಕ್ಕೇರಿದ್ದವು. ಹೋಟೆಲ್​ ರೂಮ್​ ಬೆಲೆಗಳು ಹೆಚ್ಚಾಗುವುದರ ಜೊತೆಗೆ ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್​ಗೆ ತೆರಳುವ ವಿಮಾನಗಳ ದರಗಳು ಸಹ ಹೆಚ್ಚಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us