
ಇಂಗ್ಲೆಂಡ್ ಅಂಡರ್-19 ಮಹಿಳಾ ತಂಡದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ಅಂಡರ್-19 ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ವಡೋದರಾ ಮತ್ತು ಸೂರತ್‌ನಲ್ಲಿ ಈ ಸರಣಿ ನಡೆಯಲಿದೆ. 15 ಆಟಗಾರ್ತಿಯರ ತಂಡಕ್ಕೆ ಭವಿಕಾ ಅಹಿರೆ ನಾಯಕಿಯಾಗಿ ಆಯ್ಕೆಯಾಗಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಅನಾದಿ ತಗ್ಡೆ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಶ್ರೇಯಾ ಎಸ್. ಚವಾಣ್ ತಂಡದ ಮತ್ತೊಬ್ಬ ವಿಕೆಟ್ ಕೀಪರ್ ಆಗಿದ್ದಾರೆ. 2027ರ ಜನವರಿಯಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಈ ಸರಣಿಯನ್ನು ಆಯೋಜಿಸಲಾಗಿದೆ.
ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ನವೆಂಬರ್ 26ರಂದು ವಡೋದರಾದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ನವೆಂಬರ್ 28ರಂದು ಎರಡನೇ ಪಂದ್ಯ ನಡೆಯಲಿದೆ. ನಂತರ ಸರಣಿ ಸೂರತ್‌ಗೆ ಸ್ಥಳಾಂತರಗೊಳ್ಳಲಿದ್ದು, ಡಿಸೆಂಬರ್ 1ರಂದು ಮೂರನೇ ಪಂದ್ಯ, ಡಿಸೆಂಬರ್ 3ರಂದು ನಾಲ್ಕನೇ ಪಂದ್ಯ ಹಾಗೂ ಡಿಸೆಂಬರ್ 6ರಂದು ಐದನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ.
ಭಾರತ ಅಂಡರ್-19 ಮಹಿಳಾ ತಂಡ: ಭವಿಕಾ ಅಹಿರೆ (ನಾಯಕಿ ಹಾಗೂ ವಿಕೆಟ್ ಕೀಪರ್), ಇರಾ ಜಾಧವ್, ನಿಧಿ ಮಹ್ತೋ, ಪೂರ್ವಾ ಸಿವಾಚ್, ಮೆಹೆಕ್ ನರವೇಸ್, ಮೈತ್ರಿ ಮನಿಯಾರ್, ಈಶ್ವರಿ ಅವಸಾರೆ, ದಿಯಾ ಯಾದವ್, ಶ್ರೇಯಾ ಎಸ್. ಚವಾಣ್ (ವಿಕೆಟ್ ಕೀಪರ್), ಸಮೈರಾ ರಾಘವ್, ಕುಮಾರಿ ಪಲಕ್, ಉಮಾ ಕಶ್ವಿ, ಅಚ್ಸಾ ಪರ್ಮಾರ್, ಅನಾದಿ ತಗ್ಡೆ (ಉಪನಾಯಕಿ) ಮತ್ತು ಪಲಕ್ ಸಿಂಗ್.