IND vs BAN: ಬಾಂಗ್ಲಾ ಹುಲಿಗಳ ಮೇಲೆ ಭಾರತದ ಸವಾರಿ; ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್ ಬಾಕಿ..!

IND vs BAN: ಭಾರತ ಹಾಗೂ ಬಾಂಗ್ಲಾ ನಡುವಿನ ಮೊದಲ ಟೆಸ್ಟ್​ನ ನಾಲ್ಕನೇ ದಿನದಾಟ ಮುಕ್ತಾಯಗೊಂಡಿದ್ದು, ದಿನದಾಟದಂತ್ಯಕ್ಕೆ ಬಾಂಗ್ಲಾ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ.

IND vs BAN: ಬಾಂಗ್ಲಾ ಹುಲಿಗಳ ಮೇಲೆ ಭಾರತದ ಸವಾರಿ; ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್ ಬಾಕಿ..!
IND Vs BAN
Follow us
TV9 Web
| Updated By: ಪೃಥ್ವಿಶಂಕರ

Updated on:Dec 17, 2022 | 4:42 PM

ಚೆಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಗೆಲುವಿನತ್ತ ಮುಖ ಮಾಡಿದೆ. ನಾಲ್ಕನೇ ದಿನದಾಟ ಮುಕ್ತಾಯಗೊಂಡಿದ್ದು, ದಿನದಾಟದಂತ್ಯಕ್ಕೆ ಬಾಂಗ್ಲಾ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ. ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ಪರ ಜಾಕೀರ್ ಹಸನ್ (Zakir Hasan) ಶತಕ ಸಿಡಿಸಿ ಸಂಭ್ರಮಿಸಿದರೆ, ನಾಯಕ ಶಕೀಬ್ ಹಾಗೂ ಮೆಹದಿ ಹಸನ್ ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಬೇಕಾದರೆ ಕೊನೆಯ ದಿನದಲ್ಲಿ 241 ರನ್ ಗಳಿಸಬೇಕಿದೆ. ಈ ಕಡೆ ಟೀಂ ಇಂಡಿಯಾ ಗೆಲುವು ಸಾಧಿಸಬೇಕೆಂದರೆ ಬಾಂಗ್ಲಾ ತಂಡದಲ್ಲಿ ಉಳಿದಿರುವ 4 ವಿಕೆಟ್​ಗಳನ್ನು ಉರುಳಿಸಬೇಕಿದೆ.

ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದ ಭಾರತ, ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಈ ಗುರಿ ಹತ್ತಿರ ಬರುವುದಕ್ಕೂ ಅವಕಾಶ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಬಾಂಗ್ಲಾದೇಶಕ್ಕೆ ಫಾಲೋ ಆನ್ ನೀಡದೆ ಎರಡನೇ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡು 258 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಬಾಂಗ್ಲಾದೇಶಕ್ಕೆ ಪ್ರಬಲ ಗುರಿ ನೀಡಿದೆ.

IPL 2023: ಹೊಸ ಅವತಾರದಲ್ಲಿ ಗೇಲ್; ಐಪಿಎಲ್​ಗೆ ಯೂನಿವರ್ಸಲ್ ಬಾಸ್ ರೀ ಎಂಟ್ರಿ..!

2. ಉತ್ತಮ ಆರಂಭ ಪಡೆದ ಬಾಂಗ್ಲಾ

ಭಾರತ ನೀಡಿರುವ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಪಡೆ, 3ನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 42 ರನ್​ಗಳಿಸಿತ್ತು. ಬಳಿಕ ನಾಲ್ಕನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡದ ಆರಂಭಿಕ ಜೋಡಿ ನಜ್ಮುಲ್ ಹುಸೇನ್ ಶಾಂಟೊ ಮತ್ತು ಜಾಕಿರ್ ಹಸನ್ ಮೊದಲ ವಿಕೆಟ್‌ಗೆ 124 ರನ್ ಸೇರಿಸಿದರು. ಆದರೆ ಈ ಜೋಡಿ ಮುರಿದ ತಕ್ಷಣ ಬಾಂಗ್ಲಾದೇಶದ ಬ್ಯಾಟಿಂಗ್ ವಿಭಾಗ ಛಿದ್ರಗೊಂಡಿತು, ಅಕ್ಷರ್ ಪಟೇಲ್, ಕುಲ್ದೀಪ್ ಮ್ಯಾಜಿಕ್ ಮುಂದೆ ಮಂಕಾದ ಬಾಂಗ್ಲಾ ತಂಡ ಆಗಾಗ್ಗೆ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆದರೆ, ಈ ಇಬ್ಬರು ಸ್ಪಿನ್ನರ್​ಗಳಿಗೂ ಮುನ್ನ ಶಾಂಟೊ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಭಾರತಕ್ಕೆ ಮೊದಲ ವಿಕೆಟ್ ತಂದುಕೊಡುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 156 ಎಸೆತಗಳನ್ನು ಎದುರಿಸಿದ ಶಾಂಟೊ ಏಳು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು.

3. ಅಕ್ಷರ್- ಕುಲ್ದೀಪ್ ಸ್ಪಿನ್ ಮ್ಯಾಜಿಕ್

ಮೊದಲ ವಿಕೆಟ್ ಪತನದ ಬಳಿಕ ಲಯ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶಾಂಟೋ ವಿಕೆಟ್ ಬಳಿಕ ಅಕ್ಷರ್, ಯಾಸಿರ್ ಅಲಿಯನ್ನು ವಜಾ ಮಾಡಿದರು. ಲಿಟನ್ ದಾಸ್ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡುವ ಮೂಲಕ ಭಾರತಕ್ಕೆ ನಾಲ್ಕನೇ ಯಶಸ್ಸು ತಂದುಕೊಟ್ಟರು. ಯಾಸಿರ್ ಐದು ರನ್ ಗಳಿಸಿದರೆ, ಲಿಟನ್ 19 ರನ್ ಗಳಿಸಿ ಪೆವಿಲಿಯನ್​ ಸೇರಿಕೊಂಡರು. ಶತಕ ಬಾರಿಸುವುದರೊಂದಿಗೆ ಭಾರತಕ್ಕೆ ತಲೆನೋವಾಗಿದ್ದ ಹಸನ್​ರನ್ನು ಔಟ್​ ಮಾಡುವ ಮೂಲಕ  ಅಶ್ವಿನ್ ಭಾರತಕ್ಕೆ ಐದನೇ ಯಶಸ್ಸು ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 224 ಎಸೆತಗಳನ್ನು ಎದುರಿಸಿದ ಹಸನ್, 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು. ನಂತರ ಬಾಂಗ್ಲಾದೇಶಕ್ಕೆ ಐದನೇ ಹೊಡೆತವನ್ನು ನೀಡಿದ ಅಕ್ಷರ್, ಮುಶ್ಫಿಕ್ಮರ್ ರಹೀಮ್ ಅವರ ಇನ್ನಿಂಗ್ಸ್ ಅನ್ನು 23 ರನ್‌ಗಳಿಗೆ ಕೊನೆಗೊಳಿಸಿದರು. ಬಳಿಕ ನೂರುಲ್ ಹಸನ್​ಗೂ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Sat, 17 December 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ