India Vs Bangladesh T20 Highlights: ಬಾಂಗ್ಲಾ ಎದುರು ಗೆದ್ದ ಟೀಂ ಇಂಡಿಯಾ
IND Vs BAN T20 World Cup 2022 Group 2 Highlights: ಮಳೆ ಪೀಡಿತ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಐದು ರನ್‌ಗಳಿಂದ ಸೋಲಿಸಿತು. ಈ ಮೂಲಕ ಸೆಮಿಫೈನಲ್ ಹಾದಿಯನ್ನು ರೋಹಿತ್ ಪಡೆ ಸುಗಮಗೊಳಿಸಿಕೊಂಡಿದೆ.
ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮಳೆ ಪೀಡಿತ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಐದು ರನ್‌ಗಳಿಂದ ಸೋಲಿಸಿತು. ಈ ಮೂಲಕ ಸೆಮಿಫೈನಲ್ ಹಾದಿಯನ್ನು ರೋಹಿತ್ ಪಡೆ ಸುಗಮಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟೀಂ ಇಂಡಿಯಾ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಉತ್ತರವಾಗಿ ಬಾಂಗ್ಲಾದೇಶ 145 ರನ್ ಗಳಿಸಲಷ್ಟೇ ಶಕ್ತವಾಯಿತು.
LIVE NEWS & UPDATES
-
ಐದು ರನ್‌ಗಳಿಂದ ಗೆದ್ದ ಭಾರತ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 184 ರನ್ ಗಳಿಸಿತ್ತು. ಮಳೆಯ ನಂತರ ಪಂದ್ಯ ಸಂಪೂರ್ಣ ತಲೆಕೆಳಗಾಗಿತ್ತು. ಬಾಂಗ್ಲಾದೇಶ ಮೊದಲ ಏಳು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿತು. ಅದೇ ಸಮಯದಲ್ಲಿ, ಓವರ್ ಕಟ್ ನಂತರ ಉಳಿದ ಒಂಬತ್ತು ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 79 ರನ್ ಗಳಿಸಿತು.
-
ಬಾಂಗ್ಲಾದೇಶದ ಐದನೇ ವಿಕೆಟ್ ಪತನ
ಒಂದರ ಹಿಂದೆ ಒಂದರಂತೆ ಬಾಂಗ್ಲಾದೇಶದ ಆಟಗಾರರು ವಿಕೆಟ್ ಒಪ್ಪಿಸುತ್ತಿದ್ದಾರೆ. ಯಾಸಿರ್ ಅಲಿಯನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು. ಯಾಸಿರ್ ಓವರ್‌ನ ಎರಡನೇ ಎಸೆತದಲ್ಲಿ ಪುಲ್ ಮಾಡಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಅರ್ಷದೀಪ್‌ಗೆ ಕ್ಯಾಚ್ ನೀಡಿದರು. ಯಾಸಿರ್ 3 ಎಸೆತಗಳಲ್ಲಿ 1 ರನ್ ಗಳಿಸಿದರು
-
ಶಕೀಬ್ ಅಲ್ ಹಸನ್ ಔಟ್
ಅರ್ಷದೀಪ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಅಫೀಫ್ ಬಳಿಕ ಶಕೀಬ್ ಅಲ್ ಹುಸೇನ್ ಅವರನ್ನೂ ಪೆವಿಲಿಯನ್ಗೆ ಕಳುಹಿಸಿದರು. ಶಕೀಬ್ 12 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದರು. ಮಳೆಯ ನಂತರ ಪಂದ್ಯ ಭಾರತದತ್ತ ವಾಲುತ್ತಿದೆ.
ಅಫೀಫ್ ಔಟ್
ಅರ್ಷದೀಪ್ ಸಿಂಗ್ ತಮ್ಮ ಎರಡನೇ ವಿಕೆಟ್ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ್ದಾರೆ. ಓವರ್‌ನ ಮೊದಲ ಎಸೆತದಲ್ಲಿ, ಅಫೀಫ್ ಗಾಳಿಯಲ್ಲಿ ಶಾಟ್ ಆಡಿದರು, ಚೆಂಡು ತುಂಬಾ ಎತ್ತರಕ್ಕೆ ಏರಿತು, ಸೂರ್ಯಕುಮಾರ್ ಲಾಂಗ್ ಆನ್‌ನಲ್ಲಿ ಸರಳ ಕ್ಯಾಚ್ ಪಡೆದರು. ಅಫೀಫ್ 5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು.
ಶಕೀಬ್ ಸತತ ಎರಡು ಬೌಂಡರಿ
ಅಶ್ವಿನ್ ಓವರ್‌ನಲ್ಲಿ ಶಕೀಬ್ ಅಲ್ ಹಸನ್ ಒಂದರ ಹಿಂದೆ ಒಂದರಂತೆ ಎರಡು ಬೌಂಡರಿಗಳನ್ನು ಬಾರಿಸಿದರು. ಓವರ್‌ನ ಮೂರನೇ ಎಸೆತವನ್ನು ಎಳೆಯುವ ಮೂಲಕ ಬೌಲರ್‌ನ ತಲೆಯ ಮೇಲೆ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಕವರ್‌ನಲ್ಲಿ ಬೌಂಡರಿ ಬಾರಿಸಿದರು.
ಶಾಂಟೊ ಕೂಡ ಔಟ್
ಮೊಹಮ್ಮದ್ ಶಮಿ 10ನೇ ಓವರ್‌ನ ಮೊದಲ ಎಸೆತದಲ್ಲಿ ಶಾಂಟೊ ಅವರನ್ನು ಔಟ್ ಮಾಡಿದರು. ಶಾಂಟೊ ಸ್ಲಾಗ್ ಶಾಟ್ ಆಡಿದರು ಸೂರ್ಯಕುಮಾರ್ ಅದ್ಭುತವಾದ ಡೌನ್-ಗೋಯಿಂಗ್ ಕ್ಯಾಚ್ ಅನ್ನು ತೆಗೆದುಕೊಂಡು ಭಾರತಕ್ಕೆ ದೊಡ್ಡ ಪ್ರಗತಿಯನ್ನು ನೀಡಿದರು. ಶಾಂಟೊ 25 ಎಸೆತಗಳಲ್ಲಿ 21 ರನ್ ಗಳಿಸಿದರು. ಶಾಂಟೊ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು
ಶಾಂಟೊ ಅಮೋಘ ಸಿಕ್ಸ್
ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ ಆಕ್ರಮಣಕಾರಿ ಆಟ ಇನ್ನೂ ನಿಂತಿಲ್ಲ. ಒಂಬತ್ತನೇ ಓವರ್‌ನ ಎರಡನೇ ಎಸೆತದಲ್ಲಿ ಶಾಂಟೊ ಫೈನ್ ಲೆಗ್‌ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಅಂತಹ ಹೊಡೆತಗಳನ್ನು ನಿಲ್ಲಿಸಿ ವಿಕೆಟ್ ಪಡೆಯುವುದು ಭಾರತಕ್ಕೆ ಮುಖ್ಯವಾಗಿದೆ. ಈ ಓವರ್‌ನಲ್ಲಿ ಹಾರ್ದಿಕ್ 10 ರನ್ ನೀಡಿದರು.
ಲಿಟ್ಟನ್ ದಾಸ್ ಔಟ್
ಮಳೆಯ ನಂತರದ ಎರಡನೇ ಎಸೆತದಲ್ಲಿ ಭಾರತಕ್ಕೆ ಲಿಟ್ಟನ್ ದಾಸ್ ಪ್ರಮುಖ ವಿಕೆಟ್ ಸಿಕ್ಕಿತು. ಶಾಂಟೊ ಚೆಂಡನ್ನು ಡೀಪ್ ಮಿಡ್ ವಿಕೇಟ್ ಕಡೆಗೆ ಆಡಿ ಮೊದಲ ರನ್ ಪೂರ್ಣಗೊಳಿಸಿದರು ಮತ್ತು ಎರಡನೇ ರನ್‌ಗಾಗಿ ರನ್ ಮಾಡಿದಾಗ, ಕೆಎಲ್ ರಾಹುಲ್ ಚೆಂಡನ್ನು ನೇರ ವಿಕೆಟ್ಗೆ ಹೊಡೆದರು. ಈ ಮೂಲಕ ದಾಸ್ ರನೌಟ್ ಆದರು
ಪಂದ್ಯ ಪುನರಾರಂಭ
ಮತ್ತೆ ಪಂದ್ಯ ಆರಂಭವಾಗಿದೆ. ಆರ್ ಅಶ್ವಿನ್ ಎಂಟನೇ ಓವರ್ ಬೌಲ್ ಮಾಡಲು ಬಂದಿದ್ದರೆ ಲಿಟ್ಟನ್ ದಾಸ್ ಸ್ಟ್ರೈಕ್ ನಲ್ಲಿದ್ದಾರೆ.
ಬಾಂಗ್ಲಾದೇಶಕ್ಕೆ 151 ಟಾರ್ಗೆಟ್
ಪಂದ್ಯ ಸಂಜೆ 4:50ಕ್ಕೆ ಪುನರಾರಂಭವಾಗಲಿದೆ. ಬಾಂಗ್ಲಾದೇಶ ಗೆಲ್ಲಲು 16 ಓವರ್‌ಗಳಲ್ಲಿ 151 ರನ್ ಗಳಿಸಬೇಕಾಗಿದೆ. ಅಂದರೆ, ಈಗ 54 ಎಸೆತಗಳಲ್ಲಿ 85 ರನ್ ಗಳಿಸಬೇಕಿದೆ.
ಮಳೆ ಎಂಟ್ರಿ
ಏಳನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಆರು ರನ್ ನೀಡಿದರು. ಆದರೆ, ಆ ನಂತರವೇ ಮಳೆ ಸುರಿಯಲಾರಂಭಿಸಿತು. ಬಾಂಗ್ಲಾದೇಶ DLS ಸ್ಕೋರ್‌ಗಿಂತ 17 ರನ್ ಮುಂದಿದೆ. ಅದೇನೆಂದರೆ, ಮಳೆ ನಿಲ್ಲದಿದ್ದರೆ ಭಾರತದ ಸೋಲು ಖಚಿತ.
ಲಿಟ್ಟನ್ ದಾಸ್ ಅರ್ಧಶತಕ
ಮೊಹಮ್ಮದ್ ಶಮಿ ಅವರ ಓವರ್‌ನ ಮೊದಲ ಎಸೆತದಲ್ಲಿ ಲಿಟನ್ ದಾಸ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಅವರು ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ಎಕ್ಸ್ಟ್ರಾ ಕವರ್‌ನಲ್ಲಿ ಬೌಂಡರಿ ಬಾರಿಸಿದರು.
ಲಿಟ್ಟನ್ ಅಮೋಘ ಸಿಕ್ಸ್
ಐದನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಒಂಬತ್ತು ರನ್ ನೀಡಿದರು. ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿರುವ ಲಿಟ್ಟನ್ ಓವರ್‌ನ ಐದನೇ ಎಸೆತದಲ್ಲಿ ಫೈನ್ ಲೆಗ್ ಕಡೆಗೆ ಸಿಕ್ಸರ್ ಬಾರಿಸಿದರು. ಲಿಟ್ಟನ್ ಕ್ರೀಸ್ನಲ್ಲಿ ಉಳಿದರೆ ಭಾರತಕ್ಕೆ ಕಷ್ಟ
ದಾಸ್ ಬಿರುಗಾಳಿ
ಮೂರನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 16 ರನ್ ಬಿಟ್ಟುಕೊಟ್ಟರು. ಓವರ್‌ನ ಎರಡನೇ ಎಸೆತದಲ್ಲಿ ಲಿಟ್ಟನ್ ಮೊದಲು ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ, ಮಿಡ್-ಆಫ್‌ನಲ್ಲಿ ಬೌಂಡರಿ ಬಾರಿಸಿ ನಂತರದ ಎಸೆತದಲ್ಲಿ ಥರ್ಡ್ ಮ್ಯಾನ್‌ನ ಅಂತರದಲ್ಲಿ ಬೌಂಡರಿ ಬಾರಿಸಿದರು. ಓವರ್‌ನ ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಡೈವ್‌ನಲ್ಲಿ ಕ್ಯಾಚ್ ಹಿಡಿಯಲು ಮುಂದಾದರೂ ಯಶಸ್ವಿಯಾಗಲಿಲ್ಲ.
ಲಿಟನ್ ದಾಸ್ ಬಚಾವ್
ಅರ್ಷದೀಪ್ ಅವರ ಓವರ್‌ನ ಐದನೇ ಎಸೆತದಲ್ಲಿ ಲಿಟನ್ ದಾಸ್ ಸ್ವಲ್ಪದರಲ್ಲೇ ಪಾರಾದರು. ಬ್ಯಾಟ್‌ಗೆ ಬಡಿದ ನಂತರ ಚೆಂಡು ದಿನೇಶ್ ಕಾರ್ತಿಕ್ ಕೈಗೆ ಬಂದಿದೆ ಎಂದು ಭಾವಿಸಿ ಮನವಿ ಮಾಡಿದರು. ಅಂಪೈರ್ ನಾಟ್ ಔಟ್ ನೀಡಿದರು. ಗ್ಲೌಸ್ ಒಳಗೆ ಸೇರುವ ಮೊದಲು ಚೆಂಡು ನೆಲಕ್ಕೆ ಅಪ್ಪಳಿಸಿದ್ದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಅರ್ಷದೀಪ್‌ಗೆ ಫೋರ್
ಅರ್ಷದೀಪ್ ಸಿಂಗ್ ಅವರ ಓವರ್ ಬೌಂಡರಿಯೊಂದಿಗೆ ಪ್ರಾರಂಭವಾಯಿತು. ಓವರ್‌ನ ಮೊದಲ ಎಸೆತದಲ್ಲಿ ಲಿಟ್ಟನ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಓವರ್‌ನ ಮೂರನೇ ಎಸೆತದಲ್ಲಿ, ಅವರು ಮತ್ತೊಂದು ಫೋರ್ ಕೂಡ ಬಾರಿಸಿದರು.
ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿದೆ
ಬಾಂಗ್ಲಾದೇಶದ ಬ್ಯಾಟಿಂಗ್ ಆರಂಭವಾಗಿದೆ. ಲಿಟನ್ ದಾಸ್ ಮತ್ತು ನಜ್ಮುಲ್ ಶಾಂಟೊ ಕ್ರೀಸ್‌ನಲ್ಲಿದ್ದಾರೆ. ಭಾರತದ ಭುವನೇಶ್ವರ್ ಕುಮಾರ್ ಬೌಲಿಂಗ್ ಆರಂಭಿಸಿದ್ದಾರೆ.
ಅಶ್ವಿನ್ ಸಿಕ್ಸ್; 185 ರನ್ ಟಾರ್ಗೆಟ್
ಕೊನೆಯ ಓವರ್‌ನಲ್ಲಿ ಅಶ್ವಿನ್ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿದೆ.
ಕೊಹ್ಲಿ ದಾಳಿ
19ನೇ ಓವರ್‌ನಲ್ಲಿ ಮಹಮೂದ್ ಬೌಲಿಂಗ್ ಮಾಡಿದರು. ಓವರ್‌ನ ಐದನೇ ಎಸೆತದಲ್ಲಿ ಕೊಹ್ಲಿ ಫೈನ್ ಲೆಗ್‌ನಲ್ಲಿ ಮೊದಲ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಕೊಹ್ಲಿ ಮತ್ತೊಂದು ಬಲವಾದ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಮಹಮೂದ್ 13 ರನ್ ನೀಡಿದರು
ಕಾರ್ತಿಕ್- ಅಕ್ಷರ್ ಔಟ್
ಕೊಹ್ಲಿ ಹಾಗೂ ಕಾರ್ತಿಕ್ ನಡುವಿನ ಸಂವಹನದ ಕೊರತೆಯಿಂದಾಗಿ ಕಾರ್ತಿಕ್ ರನ್ ಔಟ್ ಆದರೆ, ಸಿಕ್ಕಿದ್ದ ಜೀವದಾನವನ್ನು ಉಪಯೋಗಿಸಿಕೊಳ್ಳಲಾಗದೆ ಅಕ್ಷರ್ ಸುಲಭ ಕ್ಯಾಚಿತ್ತು ಔಟಾದರು.
ಕೊಹ್ಲಿ ಅರ್ಧಶತಕ
ಈ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ತಮ್ಮ 3ನೇ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ. ಬಾಂಗ್ಲಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
ಹಾರ್ದಿಕ್ ಔಟ್
ಹಸನ್ ಮಹಮೂದ್ 16ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಓವರ್‌ನ ಮೊದಲ ಬಾಲ್‌ನಲ್ಲಿ ಹಾರ್ದಿಕ್ ಚೆಂಡನ್ನು ಪಾಯಿಂಟ್‌ನಲ್ಲಿ ಆಡಿದರು, ಅಲ್ಲೇ ನಿಂತಿದ್ದ ಯಾಸಿರ್ ಸರಳ ಕ್ಯಾಚ್ ಪಡೆದರು. ಭಾರತಕ್ಕೆ ನಾಲ್ಕನೇ ಹೊಡೆತ ಬಿದ್ದಿತು.
ಕೊಹ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ
ಕೊಹ್ಲಿ 14ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ 130 ರನ್ ಕಲೆಹಾಕಿದೆ.
ಸೂರ್ಯಕುಮಾರ್ ಔಟ್
ನಾಯಕ ಶಕೀಬ್ ಅಲ್ ಹಸನ್ ಸೂರ್ಯಕುಮಾರ್ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಓವರ್‌ನ ಮೂರನೇ ಎಸೆತದಲ್ಲಿ 16 ಎಸೆತಗಳಲ್ಲಿ 30 ರನ್ ಗಳಿಸಿದ ಸೂರ್ಯ ಬೌಲ್ಡ್ ಆದರು. ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸುವಲ್ಲಿ ಸೂರ್ಯ ಯಶಸ್ವಿಯಾದರು.
ಸೂರ್ಯ ಬೌಂಡರಿ
13ನೇ ಓವರ್‌ನಲ್ಲಿ ಸೂರ್ಯಕುಮಾರ್ 3 ಬೌಂಡರಿ ಬಾರಿಸಿದರು. ಮೊದಲೆರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ ಸೂರ್ಯ ಕೊನೆಯ ಎಸೆತದಲ್ಲೂ ಮತ್ತೊಂದು ಬೌಂಡರಿ ಬಾರಿಸಿದರು.
ಸೂರ್ಯಗೆ ಜೀವದಾನ
ಸೂರ್ಯಕುಮಾರ್ 12ನೇ ಓವರ್‌ನಲ್ಲಿ ಜೀವದಾನ ಪಡೆದರು. ಸೂರ್ಯ ಸ್ವೀಪ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಗುಲಿ ಕೀಪರ್‌ನ ತಲೆಯ ಮೇಲೆ ಹೋಯಿತು, ಮುಸ್ತಫಿಜುರ್ ಡೈವ್ ಮಾಡಿ ಒಂದು ಕೈಯಿಂದ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ.
ರಾಹುಲ್ ಔಟ್
ಅರ್ಧಶತಕ ಗಳಿಸಿದ ಉಪನಾಯಕ ರಾಹುಲ್, ಶಕೀಬ್ ಎಸೆತದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು.
ರಾಹುಲ್ ಸಿಕ್ಸ್
ಶರೀಫುಲ್ ಇಸ್ಲಾಂ ಅವರ ಓವರ್‌ನಲ್ಲಿ ಅಬ್ಬರಿಸಿದ ಕೊಹ್ಲಿ ಬೌಂಡರಿ ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ರಾಹುಲ್ ಲಾಂಗ್ ಆನ್‌ನಲ್ಲಿ 96 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಈ ಚೆಂಡು ನೋ ಬಾಲ್ ಆಗಿದ್ದು, ಮುಂದಿನ ಎಸೆತದಲ್ಲಿ ರಾಹುಲ್ ಲಾಂಗ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ರಾಹುಲ್ ದಾಳಿ ಇಲ್ಲಗೆ ನಿಲ್ಲದೆ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇಸ್ಲಾಂ ಓವರ್‌ನಲ್ಲಿ 24 ರನ್ ನೀಡಿದರು.
ಕೊಹ್ಲಿ ಕ್ಲಾಸ್ ಶಾಟ್
ಕೊಹ್ಲಿ ಕೂಡ ಒಂಬತ್ತನೇ ಓವರ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಓವರ್‌ನ ಮೊದಲ ಎಸೆತವನ್ನು ಮಿಡ್ ಆನ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಕೊಹ್ಲಿ ತಮ್ಮ ಖಾತೆಗೆ 4 ರನ್ ಹಾಕಿಕೊಂಡರು.
ತಸ್ಕಿನ್ ಅಹ್ಮದ್ ಕೊನೆಯ ಓವರ್
ತಸ್ಕಿನ್ ಅಹ್ಮದ್ ತಮ್ಮ ಕೊನೆಯ ಓವರ್‌ನಲ್ಲಿ ಐದು ರನ್ ನೀಡಿದರು. ಇದಾದ ನಂತರ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಮಾಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ರಾಹುಲ್ ಡೀಪ್ ಪಾಯಿಂಟ್‌ನಲ್ಲಿ ಅದ್ಭುತ ಬೌಂಡರಿ ಬಾರಿಸಿದರು. ಶಕೀಬ್ ಅವರ ಓವರ್‌ನಲ್ಲಿ 10 ರನ್ ಬಂದವು.
ಪವರ್ ಪ್ಲೇ ಅಂತ್ಯ
ಟೀಂ ಇಂಡಿಯಾದ ಪವರ್ ಪ್ಲೇ ಅಂತ್ಯವಾಗಿದ್ದು, ಈ ಆರು ಓವರ್‌ಗಳಲ್ಲಿ ತಂಡ ನಾಯಕ ರೋಹಿತ್ ವಿಕೆಟ್ ಕಳೆದುಕೊಂಡರೆ, ಒಂದು ವಿಕೆಟ್ ನಷ್ಟಕ್ಕೆ 37 ರನ್ ಕಲೆಹಾಕಿತು. ಕೊಹ್ಲಿ- ರಾಹುಲ್ ಸದ್ಯ ಬ್ಯಾಟಿಂಗ್ನಲ್ಲಿದ್ದಾರೆ.
ಕೊಹ್ಲಿ ಸತತ 2 ಬೌಂಡರಿ
ರಾಹುಲ್ ನಂತರ ಕೊಹ್ಲಿ ದಾಳಿಗೆ ಇಳಿದಿದ್ದಾರೆ. ತಸ್ಕಿನ್ ಅಹ್ಮದ್ ಅವರ ಓವರ್‌ನ ಮೊದಲ ಎರಡು ಎಸೆತಗಳು ಸತತ ಎರಡು ಬೌಂಡರಿಗಳನ್ನು ಕೊಹ್ಲಿ ಬಾರಿಸಿದ್ದಾರೆ. ಇಂದಿನ ದೊಡ್ಡ ದಾಖಲೆಯ ಮೇಲೂ ಕೊಹ್ಲಿ ಕಣ್ಣು ನೆಟ್ಟಿದ್ದು, ಕೇವಲ 7 ರನ್‌ಗಳ ಅಂತರದಲ್ಲಿದ್ದಾರೆ.
ರಾಹುಲ್ ಸಿಕ್ಸರ್
ರೋಹಿತ್ ವಿಕೆಟ್ ಪಡೆದ ಹಸನ್ ಮಹಮೂದ್ ಓವರ್‌ನ ನಾಲ್ಕನೇ ಎಸೆತದಲ್ಲಿ ರಾಹುಲ್ ಮೊದಲು ಥರ್ಡ್ ಮ್ಯಾನ್‌ನಲ್ಲಿ ಬೌಂಡರಿ ಬಾರಿಸಿದರು. ಮುಂದಿನ ಬಾಲ್‌ನಲ್ಲಿ ಅದ್ಭುತ ಶಾಟ್ ಆಡಿ, ಕವರ್‌ನಲ್ಲಿ ಫ್ಲಾಟ್ ಸಿಕ್ಸರ್ ಬಾರಿಸಿದರು. ಮಹಮೂದ್ ಓವರ್‌ನಲ್ಲಿ 11 ರನ್ ಬಿಟ್ಟುಕೊಟ್ಟರು.
ರೋಹಿತ್ ಶರ್ಮಾ ಔಟ್
ಹಸನ್ ಮಹಮೂದ್ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ನಾಲ್ಕನೇ ಓವರ್‌ಗೆ ಬಂದ ಮಹಮೂದ್, ಓವರ್‌ನ ಎರಡನೇ ಎಸೆತದಲ್ಲಿ ರೋಹಿತ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಸ್ಲಿಪ್‌ನಲ್ಲಿ ಯಾಸಿರ್ ಅಲಿಗೆ ಕ್ಯಾಚ್ ನೀಡಿದರು. ರೋಹಿತ್ 8 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದರು
ರಾಹುಲ್ ಅಮೋಘ ಸಿಕ್ಸರ್
ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದ ರಾಹುಲ್ ಐದನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ರಾಹುಲ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಈ ಅದ್ಭುತ ಶಾಟ್ ಮಾಡಿದರು. ಈ ಓವರ್‌ನಲ್ಲಿ ಶರೀಫುಲ್ ಇಸ್ಲಾಮ್ ಒಂಬತ್ತು ರನ್ ನೀಡಿದರು.
ಭಾರತದ ಬ್ಯಾಟಿಂಗ್ ಶುರು
ಭಾರತದ ಬ್ಯಾಟಿಂಗ್ ಆರಂಭವಾಯಿತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಆರಂಭಿಸಿದ್ದಾರೆ. ತಸ್ಕಿನ್ ಅಹ್ಮದ್ ಮೊದಲ ಓವರ್ ಬೌಲಿಂಗ್ ಮಾಡಿದ್ದು, ಇದರಲ್ಲಿ ಕೇವಲ 1 ರನ್ ಬಂತು.
ಬಾಂಗ್ಲಾ ತಂಡ
ನಜ್ಮುಲ್ ಹೊಸೈನ್, ಶರೀಫುಲ್ ಇಸ್ಲಾಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಶ್ವಿನ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್
ಟಾಸ್ ಗೆದ್ದ ಬಾಂಗ್ಲಾದೇಶ
ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಹಲ್ ಅಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳಲ್ಲೂ ಬದಲಾವಣೆ ಮಾಡಲಾಗಿದೆ.
ಮೈದಾನದಲ್ಲಿ ಆಟಗಾರರು
ಭಾರತದ ಆಟಗಾರರು ಅಭ್ಯಾಸಕ್ಕಾಗಿ ಮೈದಾನಕ್ಕೆ ಬಂದಿದ್ದಾರೆ. ಇನ್ನು ಸ್ವಲ್ಪ ಸಮಯದ ನಂತರ ಎರಡೂ ತಂಡಗಳ ನಾಯಕರು ಟಾಸ್‌ಗೆ ಬರಲಿದ್ದಾರೆ. ಕ್ರೀಡಾಂಗಣವು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ
ಅಡಿಲೇಡ್‌ನಲ್ಲಿ ದಾಖಲೆಗಳು
ಭಾರತ ತಂಡ ಅಡಿಲೇಡ್‌ನಲ್ಲಿ ಇದುವರೆಗೆ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದೆ. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 37 ರನ್‌ಗಳಿಂದ ಗೆದ್ದಿತ್ತು. ಇಂದು ಟೀಂ ಇಂಡಿಯಾ ಮತ್ತೆ ಈ ಮೈದಾನಕ್ಕೆ ಕಾಲಿಟ್ಟರೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಅವರ ಕಣ್ಣುಗಳು ದಾಖಲೆಯ ಇನ್ನಿಂಗ್ಸ್ ಆಡುವತ್ತಲೇ ಇರುತ್ತವೆ.
ಭಾರತ- ಬಾಂಗ್ಲಾದೇಶ ಮುಖಾಮುಖಿ
ಭಾರತ ತಂಡ ಇಂದು ಟಿ20 ವಿಶ್ವಕಪ್‌ನಲ್ಲಿ ಮೂರನೇ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ ಇಂದು ಅಡಿಲೇಡ್ ಮೈದಾನದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಭಾರತ ಸೆಮಿಫೈನಲ್‌ಗೆ ಹೋಗಬೇಕಾದರೆ, ಇಂದು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು.
Published On - Nov 02,2022 12:42 PM