IND vs BAN: ಭಾರತದ ಪಾಲಿಗೆ ವರನಾದ ವರುಣ; ಮಳೆ ನಿಂತ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲು

T20 World Cup 2022: ಮಳೆ ನಿಂತ ನಂತರ ಆಟ ಆರಂಭವಾದಾಗ ಬಾಂಗ್ಲಾದೇಶಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಗುರಿ ನೀಡಾಲಯಿತು. ಜೊತೆಗೆ ಬಾಂಗ್ಲಾ ತಂಡದ ಕೈಯಲ್ಲಿ 10 ವಿಕೆಟ್‌ಗಳಿದ್ದವು.

IND vs BAN: ಭಾರತದ ಪಾಲಿಗೆ ವರನಾದ ವರುಣ; ಮಳೆ ನಿಂತ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲು
IND vs BAN
Follow us
TV9 Web
| Updated By: ಪೃಥ್ವಿಶಂಕರ

Updated on:Nov 02, 2022 | 6:46 PM

ಸೋಲುವ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂಬುದನ್ನು ಇತರ ದೇಶಗಳು ಟೀಂ ಇಂಡಿಯಾದಿಂದ (Team India) ನೋಡಿ ಕಲಿಯಬೇಕು. ಟಿ20 ವಿಶ್ವಕಪ್‌ನ (T20 World Cup 2022) ಸೂಪರ್-12 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಇದೇ ರೀತಿಯಲ್ಲಿ ಸೋಲಿಸಿದೆ. ಟೀಮ್ ಇಂಡಿಯಾದ ಈ ಗೆಲುವು ಸಿನಿಮಾ ಸ್ಕ್ರಿಪ್ಟ್‌ಗಿಂತ ಕಡಿಮೆ ಇರಲಿಲ್ಲ. ಒಂದು ಹಂತದಲ್ಲಿ ಸಂಪೂರ್ಣವಾಗಿ ಸೋಲಿನ ದವಡೆಗೆ ಸಿಲುಕಿದ್ದ ಟೀಂ ಇಂಡಿಯಾಗೆ ವರವಾಗಿ ಬಂದವನೆ ವರುಣ. ಭಾರತ ನೀಡಿದ 185 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 7 ಓವರ್‌ಗಳಲ್ಲಿ 66 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ ನಂತರ ಸುರಿದ ಮಳೆಯಿಂದಾಗಿ ಇಡೀ ಪಂದ್ಯದ ಚಿತ್ರಣವೇ ಸಂಪೂರ್ಣ ಬದಲಾಯಿತು. ಅಡಿಲೇಡ್‌ನಲ್ಲಿ ಸುಮಾರು 40 ನಿಮಿಷಗಳ ಕಾಲ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು.ಆ ಹಂತದಲ್ಲಿ ಬಾಂಗ್ಲಾದೇಶ ತಂಡ ಡಕ್‌ವರ್ತ್ ಲೂಯಿಸ್ ನಿಯಮದನ್ವಯ 17 ರನ್‌ಗಳಿಂದ ಮುಂದಿತ್ತು. ಆದರೆ ಮಳೆ ನಿಂತ ಬಳಿಕ ನಿಜವಾದ ಆಟ ಪ್ರಾರಂಭವಾಯಿತು.

ಮಳೆ ನಿಂತ ನಂತರ ಆಟ ಆರಂಭವಾದಾಗ ಬಾಂಗ್ಲಾದೇಶಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಗುರಿ ನೀಡಲಾಯಿತು. ಜೊತೆಗೆ ಬಾಂಗ್ಲಾ ತಂಡದ ಕೈಯಲ್ಲಿ 10 ವಿಕೆಟ್‌ಗಳಿದ್ದವು. ಅಂದರೆ ಬಾಂಗ್ಲಾದೇಶ 54 ಎಸೆತಗಳಲ್ಲಿ ಕೇವಲ 85 ರನ್ ಗಳಿಸಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾ ತಂಡಕ್ಕೆ ಗೆಲುವು ಖಚಿತ ಎಂದು ತೋರುತ್ತಿತ್ತು. ಆದರೆ ಟೀಂ ಇಂಡಿಯಾ ಮತ್ತೆ ಆಟಕ್ಕೆ ಮರಳಿದ ರೀತಿ ಎಲ್ಲರನ್ನೂ ಅಚ್ಚರಿಗೊಳಿಸಿತು.

ಮಳೆಯ ನಂತರ ಆಟ ಬದಲಾಗಿದ್ದು ಹೇಗೆ?

ಮಳೆಯ ನಂತರ, ನಾಯಕ ರೋಹಿತ್ ಶರ್ಮಾ ಮೊದಲ ಓವರ್ ಅನ್ನು ಅಶ್ವಿನ್​ಗೆ ನೀಡಿದರು. ಈ ಓವರ್​ನ ಎರಡನೇ ಎಸೆತದಲ್ಲಿಯೇ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ರನೌಟ್ ಆದರು. ಕೆಎಲ್ ರಾಹುಲ್ ಅವರ ಅಮೋಘ ಎಸೆತದಲ್ಲಿ ಅಬ್ಬರದ 60 ರನ್ ಬಾರಿಸಿದ್ದ ಲಿಟ್ಟನ್ ದಾಸ್ ಔಟಾದರು. ಇದಕ್ಕೂ ಮುನ್ನ ಲಿಟ್ಟನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಭಾರತದ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಆದರೆ ಇಲ್ಲಿಂದ ಪಂದ್ಯ ಭಾರತದ ಪರವಾಗಿ ವಾಲಿತು.

2 ಓವರ್‌ಗಳಲ್ಲಿ 4 ವಿಕೆಟ್ ಪತನ

ಇದಾದ ನಂತರ ಅರ್ಷದೀಪ್ ಸಿಂಗ್ 12ನೇ ಓವರ್‌ನಲ್ಲಿ ಭಾರತಕ್ಕೆ ಎರಡು ದೊಡ್ಡ ಯಶಸ್ಸು ನೀಡಿದರು. ಅರ್ಶ್ದೀಪ್, ಮೊದಲು ಅಫೀಫ್ ಹೊಸೈನ್ ಅವರನ್ನು ಔಟ್ ಮಾಡಿದರೆ, ನಂತರ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರ ವಿಕೆಟ್ ಪಡೆದರು. ಇದಾದ ಬಳಿಕ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶಕ್ಕೆ ಎರಡು ಹೊಡೆತ ನೀಡಿದರು. ಪಾಂಡ್ಯ ಮೊದಲು ಯಾಸಿರ್ ಅಲಿಯನ್ನು ಔಟ್ ಮಾಡಿದರೆ, ನಂತರ ಮೊಸದ್ದೆಕ್ ಹೊಸೈನ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಮಳೆಯ ನಂತರ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ ಲಯ ಎಲ್ಲೋ ಹಳಿ ತಪ್ಪಿದರೆ, ತನ್ನ ಸೋಲನ್ನು ಗೆಲುವನ್ನಾಗಿ ಪರಿವರ್ತಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

ಕೊಹ್ಲಿ-ರಾಹುಲ್ ಪವರ್ ಫುಲ್ ಇನ್ನಿಂಗ್ಸ್

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಮತ್ತೊಮ್ಮೆ ವಿರಾಟ್ ಕೊಹ್ಲಿ (ಔಟಾಗದೆ 64) ಬಲಿಷ್ಠ ಅರ್ಧಶತಕ ಗಳಿಸಿದರು. ಮತ್ತೊಂದೆಡೆ ಕಳಪೆ ಫಾರ್ಮ್​ನಲ್ಲಿದ್ದ ಕೆಎಲ್ ರಾಹುಲ್ (50) ಅಂತಿಮವಾಗಿ ಸತತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತ್ವರಿತ ಅರ್ಧಶತಕ ಗಳಿಸಿದರು. ಇವರಲ್ಲದೆ ಸೂರ್ಯಕುಮಾರ್ ಯಾದವ್ (30) ಕೂಡ ವೇಗದ ಇನಿಂಗ್ಸ್ ಆಡಿದರೆ, ಕೊನೆಯ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಔಟಾಗದೆ 13 ರನ್ ಬಾರಿಸಿ ಭಾರತವನ್ನು 20 ಓವರ್‌ಗಳಲ್ಲಿ 184 ರನ್‌ಗಳ ಪ್ರಬಲ ಸ್ಕೋರ್‌ಗೆ ಕೊಂಡೊಯ್ದರು.

Published On - 6:41 pm, Wed, 2 November 22