
ಬೆಂಗಳೂರು (ಜೂ. 20): ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್ 20 ರಿಂದ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ, ಆತಿಥೇಯ ಇಂಗ್ಲೆಂಡ್ ಈಗಾಗಲೇ ತನ್ನ ಪ್ಲೇಯಿಂಗ್ 11 ಅನ್ನು ಘೋಷಿಸಿದೆ. ಇತ್ತ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಪಂದ್ಯದ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ, ಪಿಚ್ ಅನ್ನು ಮತ್ತೊಮ್ಮೆ ನೋಡಿದ ನಂತರ ಪ್ಲೇಯಿಂಗ್ 11 ರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಪಂದ್ಯಕ್ಕೂ ಮುನ್ನ, ಲೀಡ್ಸ್ ತಂಡದ ವಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಲೀಡ್ಸ್ ಪಿಚ್ನಲ್ಲಿ ವೇಗದ ಬೌಲರ್‌ಗಳಿಗೆ ಸಾಕಷ್ಟು ಸಹಾಯ ಸಿಗುವ ನಿರೀಕ್ಷೆಯಿದೆ. ಆದಾಗ್ಯೂ, ಟೆಸ್ಟ್ ಪಂದ್ಯದಲ್ಲಿ, ಪಿಚ್ ಪ್ರತಿ ಸೆಷನ್‌ಗೆ ಬದಲಾಗುವ ನಿರೀಕ್ಷೆಯಿದೆ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ ಪಂದ್ಯದ ದಿನದಂದು ಇಲ್ಲಿ ಹವಾಮಾನ ಹೇಗಿರುತ್ತೆ ಎಂದು ಊಹಿಸಲು ಕಷ್ಟ. ವಾಸ್ತವವಾಗಿ, ಇಂಗ್ಲೆಂಡ್‌ನ ಹವಾಮಾನ ಯಾವಾಗ ಬದಲಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಹಲವು ಬಾರಿ ಮಳೆಯಿಂದಾಗಿ ಪಂದ್ಯದ ಮೋಜು ಹಾಳಾಗಿರುವುದು ಉಂಟು. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದಿನದಂದು ಇಲ್ಲಿನ ಹವಾಮಾನದ ಬಗ್ಗೆ ವೆದರ್ ರಿಪೋರ್ಟ್ ಏನು ಹೇಳುತ್ತೆ ಎಂಬುದನ್ನ ನೋಡೋಣ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಲೀಡ್ಸ್ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಲೀಡ್ಸ್‌ನ ಸ್ಥಳೀಯ ಸಮಯ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಅಕ್ಯೂವೆದರ್ ವರದಿಯ ಪ್ರಕಾರ, ಜೂನ್ 20 ರಂದು ಲೀಡ್ಸ್‌ನ ಹವಾಮಾನವು ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೆಳಿಗ್ಗೆ ಬಿಸಿಲು ಇರುತ್ತದೆ ಮತ್ತು ಬೆಳಿಗ್ಗೆ 10 ಗಂಟೆಗೆ ತಾಪಮಾನವು 24 ಡಿಗ್ರಿಗಳಷ್ಟು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸೆನಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ; ಶುಭ್ಮನ್ ಗಿಲ್
ಹಗಲಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿಗಳಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೈದಾನದಲ್ಲಿ ತಣ್ಣನೆಯ ಗಾಳಿ ಬೀಸುವ ನಿರೀಕ್ಷೆಯಿದೆ, ಆದ್ದರಿಂದ ಆಟಗಾರರು ಬಿಸಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ, ಆದರೆ ಆಟದ ಎರಡನೇ ದಿನದಂದು ಹವಾಮಾನವು ಬದಲಾಗಬಹುದು. ಬೆಳಿಗ್ಗೆಯಿಂದ ಆಕಾಶವು ಮೋಡ ಕವಿದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದೇ ಸಮಯದಲ್ಲಿ, ಸುಮಾರು ಮೂರು ಗಂಟೆಯ ಆಟದ ಮೂರನೇ ಅವಧಿಯಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಹವಾಮಾನವು ಆಟಕ್ಕೆ ಅಡ್ಡಿಪಡಿಸುತ್ತದೆ ಎಂಬುದು ಸ್ಪಷ್ಟವಾಗಿದೆ.
ಲೀಡ್ಸ್ ಮೈದಾನದಲ್ಲಿ ಭಾರತ ತಂಡದ ದಾಖಲೆಯನ್ನು ನೋಡಿದರೆ, ಅವರು 1952 ರಲ್ಲಿ ಮೊದಲ ಬಾರಿ ಇಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ, ಅಂದಿನಿಂದ ಟೀಮ್ ಇಂಡಿಯಾ ಇಲ್ಲಿ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ ಅವರು ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು, ಉಳಿದ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು, ಒಂದು ಪಂದ್ಯ ಡ್ರಾ ಆಗಿತ್ತು. 2002 ರಲ್ಲಿ ಈ ಮೈದಾನದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಪಂದ್ಯವನ್ನು ಗೆದ್ದಿತು. 2021 ರಲ್ಲಿ ಲೀಡ್ಸ್‌ನಲ್ಲಿ ಭಾರತ ತಂಡವು ತನ್ನ ಕೊನೆಯ ಪಂದ್ಯವನ್ನು ಆಡಿದಾಗ, ಇನ್ನಿಂಗ್ಸ್ ಮತ್ತು 76 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ