ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿರುವ ಒಂದು ಟೆಸ್ಟ್ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಈ ಐದನೇ ಹಾಗೂ ಅಂತಿಮ ಕದನ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ನಡೆದ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳ ಮುಕ್ತಾಯಕ್ಕೆ ಟೀಮ್ ಇಂಡಿಯಾ (Team India) 2-1 ಅಂತರದ ಮೇಲುಗೈ ಸಾಧಿಸಿತ್ತು. ಕೊನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡದ ಸದಸ್ಯರಲ್ಲಿ ಕೋವಿಡ್-19 (Covid – 19) ಸೋಂಕು ಕಾಣಿಸಿಕೊಂಡಿದ್ದರಿಂದ ಅಂತಿಮ ಪಂದ್ಯವನ್ನು ಮುಂದೂಡಲಾಗಿತ್ತು. ಈ ಪಂದ್ಯ ಇಂದು ಶುರುವಾಗಲಿದೆ. ಈಗಾಗಲೇ ಇಂಗ್ಲೆಂಡ್ ತಂಡ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟ ಮಾಡಿದ್ದು ಬೆನ್ ಸ್ಟೋಕ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇತ್ತ ಟೀಮ್ ಇಂಡಿಯಾ ತನ್ನ ಆಡುವ ಬಳಗವನ್ನು ಇನ್ನಷ್ಟೇ ಹೆಸರಿಸಬೇಕಿದೆ. ಪಂದ್ಯ ಆರಂಭಕ್ಕೆ ಒಂದು ದಿನದ ಮುನ್ನ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೋವಿಂಡ್ ಸೋಂಕಿನಿಂದ ಗುಣಮುಖರಾಗದ ನಾಯಕ ರೋಹಿತ್ ಶರ್ಮಾ ಈ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಈ ಮೂಲಕ ಭಾರತ ಟೆಸ್ ಕ್ರಿಕೆಟ್ ತಂಡಕ್ಕೆ 36ನೇ ನಾಯಕನಾಗಿ ಜಸ್‌ಪ್ರೀತ್ ಬುಮ್ರಾ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ರಿಷಭ್ ಪಂತ್ ಉಪ ನಾಯಕನಾಗಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಪ್ರಕಟ; ಕೊಹ್ಲಿಗೆ ಕೋಕ್..!
ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡದ ಸಾಧನೆ ತೀರಾ ಕಳಪೆಯಾಗಿದೆ. ಈ ಮೈದಾನದಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವನ್ನೇ ಕಂಡಿಲ್ಲ. 1967ರಿಂದ 2018ರವರೆಗೆ ಭಾರತ ಏಳು ಟೆಸ್ಟ್ ಪಂದ್ಯವನ್ನಾಡಿದ್ದು, ಈ ಯಾವುದೇ ಪಂದ್ಯದಲ್ಲೂ ಗೆಲುವಿನ ಸಕ್ಸಸ್ ಕಂಡಿಲ್ಲ. ಆಡಿರುವ 7 ಪಂದ್ಯಗಳಲ್ಲಿ ಮೂರು ಬಾರಿ ಇನ್ನಿಂಗ್ಸ್ ಸೋಲು ಸೇರಿದಂತೆ 6 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿರುವ ಟೀಂ ಇಂಡಿಯಾ, ಏಕೈಕ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಇತಿಹಾಸ ಸೃಷ್ಟಿಸುತ್ತಾರ ಎಂಬುದು ನೋಡಬೇಕಿದೆ.
ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ ಡ್ರಾ ಫಲಿತಾಂಶ ಸಾಧಿಸಿದರೂ, 2007ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ. ಹೀಗಾಗಿ ಸ್ಟಾರ್ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಿದೆ. ಮುಖ್ಯವಾಗಿ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಟ ಮಹತ್ವದ ಪಾತ್ರವಹಿಸಲಿದೆ. ರಿಷಭ್ ಪಂತ್, ಶುಭ್ಮನ್ ಗಿಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಚೇತೇಶ್ವರ್ ಪೂಜಾರ ನಂಬಿಕೆ ಉಳಿಸಿಕೊಳ್ಳಬೇಕಿದೆ. ನಾಯಕನಾಗಿರುವ ಬುಮ್ರಾ ಮಾರಕವಾಗಬೇಕಿದೆ.
ನೇರಪ್ರಸಾರ: ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ 2:30ಕ್ಕೆ ನಡೆಯಲಿದೆ. ಸೋನಿ ನೆಟ್‌ವರ್ಕ್‌ನ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಇದನ್ನು ಸೋನಿ ಸಿಕ್ಸ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮತ್ತು ಸೋನಿ ಟೆನ್ 3 ನಲ್ಲಿ ಹಿಂದಿಯಲ್ಲಿ ನೋಡಬಹುದು. ಅಂತೆಯೆ ಆನ್ಲೈನ್ನಲ್ಲಾದರೆ ಸೋನಿಲಿವ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.
ಇಂಗ್ಲೆಂಡ್ ಪ್ಲೇಯಿಂಗ್ XI: ಅಲೆಕ್ಸ್ ಲೀಸ್, ಜ್ಯಾಕ್ ಕ್ರೌಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್.
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಆರ್ ಅಶ್ವಿನ್, ರಿಷಭ್ ಪಂತ್ (ವಿಕೆಟ್‌ಕೀಪರ್, ಉಪ ನಾಯಕ), ಶ್ರೀಕರ್ ಭರತ್ (ವಿಕೆಟ್‌ಕೀಪರ್), ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಮಯಾಂಕ್ ಅಗರ್ವಾಲ್.
Jos Buttler: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ; ಏಕದಿನ ಮತ್ತು ಟಿ20 ತಂಡದ ನಾಯಕನಾಗಿ ಜೋಸ್ ಬಟ್ಲರ್ ಆಯ್ಕೆ..!
Published On - 7:35 am, Fri, 1 July 22